ಗಣಪತಿ ಹಬ್ಬ ಅಂದ್ರೆ ಬೆಚ್ಚಿ ಬೀಳುತ್ತೆ ಶಿವಮೊಗ್ಗದ ಈ ಹಳ್ಳಿ, ಎರಡು ವರ್ಷದಿಂದ ಇಲ್ಲಿ ಗಣೇಶೋತ್ಸವವೇ ಬಂದ್

ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ | 14 ಸೆಪ್ಟೆಂಬರ್ 2018

ಜಿಲ್ಲೆಯಾದ್ಯಂತ ಗಣಪತಿ ಹಬ್ಬವನ್ನು ಭಾರೀ ಸಡಗರದಿಂದ ಆಚರಿಸಲಾಗುತ್ತಿದೆ. ಹಳ್ಳಿ ಹಳ್ಳಿಯಲ್ಲೂ ಸಾರ್ವಜನಿಕ ಗಣಪತಿ ಮೂರ್ತಿಗಳನ್ನು ಪ್ರತಿಷ್ಠಾಪಿಸಿ, ಪೂಜೆ ಸಲ್ಲಿಸಲಾಗುತ್ತಿದೆ. ಆದರೆ ಶಿವಮೊಗ್ಗದ ಈ ಗ್ರಾಮದಲ್ಲಿ ಮಾತ್ರ, ಎರಡು ವರ್ಷದಿಂದ ಗಣಪತಿ ಹಬ್ಬ ಮಾಡುತ್ತಿಲ್ಲ. ಬಹಳ ವಿಜೃಂಭಣೆಯಿಂದ ಗಣೇಶೋತ್ಸವ ಮಾಡುತ್ತಿದ್ದ ಹಳ್ಳಿಯಲ್ಲಿ, ಈ ಹಬ್ಬ ಬಂದರೆ ನೀರವ ಮೌನ ಆವರಿಸುತ್ತೆ.

ಇದು ಶಿವಮೊಗ್ಗ ತಾಲೂಕಿನ ಗಡಿಯಲ್ಲಿರುವ ಹಾಡೋನಹಳ್ಳಿ ಗ್ರಾಮ. ಎರಡು ವರ್ಷದ ಹಿಂದಿನವರೆಗೂ, ಇಲ್ಲಿ ಸಖತ್ ಅದ್ಧೂರಿಯಾಗಿ ಗಣೇಶೋತ್ಸವ ಆಚರಿಸಲಾಗುತ್ತಿತ್ತು. ಊರಿನ ದೇವಸ್ಥಾನದ ಮುಂದೆ ಗಣಪತಿಯನ್ನು ಪ್ರತಿಷ್ಠಾಪಿಸಲಾಗುತ್ತಿತ್ತು. ಕೊನೆಗೆ ರಾಜಬೀದಿ ಉತ್ಸವವೂ ಅಷ್ಟೇ ಅದ್ಧೂರಿಯಾಗಿ ನೆರವೇರುತ್ತಿತ್ತು. ಬಹು ವರ್ಷದಿಂದ ನಡೆದು ಬಂದ ಪದ್ಧತಿ ದಿಢೀರ್ ನಿಂತು ಹೋಗಿದೆ. ಗಣೇಶೋತ್ಸವ ಬಂದರೆ ಇಡೀ ಊರು ಮೌನವಾಗುತ್ತದೆ. ಈ ವರ್ಷವೂ ಆಗಿದ್ದು ಅದೇ.

ಗಣೇಶೋತ್ಸವ ಅಂದರೆ ಊರು ಸೈಲೆಂಟ್ ಆಗೋದ್ಯಾಕೆ?

2016ರಲ್ಲಿ ಗಣೇಶ ಚತುರ್ಥಿಗೆ ಊರಲ್ಲಿ ಗಣಪತಿ ಮೂರ್ತಿ ಪ್ರತಿಷ್ಠಾಪಿಸಲಾಗಿತ್ತು. ಪೂಜೆ, ಪ್ರಾರ್ಥನೆ ಎಷ್ಟು ಗ್ರಾಂಡ್ ಆಗಿತ್ತೋ, ಅಷ್ಟೇ ವೈಭದಿಂದ ರಾಜಬೀದಿ ಉತ್ಸವವನ್ನೂ ಮಾಡಲಾಯ್ತು. ಡೊಳ್ಳು, ತಮಟೆ, ಡಿಜೆ ಸೌಂಡು, ಎಲ್ಲವೂ ಇತ್ತು. ಊರವರೆಲ್ಲ ಗಣೇಶನಿಗೆ ಜೈಕಾರ ಹಾಕುತ್ತಲೇ  ತುಂಗಭದ್ರಾ ನದಿ ದಂಡೆಗೆ ಬಂದು ಮೂರ್ತಿ ವಿಸರ್ಜನೆಗೆ ಮುಂದಾದರು.

ತೆಪ್ಪದಲ್ಲಿ ಗಣೇಶನ ಮೂರ್ತಿಯನ್ನು ಇಟ್ಟುಕೊಂಡು, ಹೊಳೆ ಮಧ್ಯೆಕ್ಕೆ ಕೊಂಡೊಯ್ದು ವಿಸರ್ಜನೆ ಮಾಡುವವರಿದ್ದರು. ಮೂರ್ತಿ ವಿಸರ್ಜನೆ ಸಂದರ್ಭ, ಕೆಲವರು ತೆಪ್ಪದಿಂದ ಹೊಳೆಗೆ ಹಾರಿ ಈಜುತ್ತಲೇ ದಡಕ್ಕೆ ಬಂದರು. ಅಷ್ಟರಲ್ಲಿ ತೆಪ್ಪ ವಾಲಾಡುತ್ತ ವಾಲಾಡುತ್ತ ಮುಳಿಗೇ ಹೋಯ್ತು. ತೆಪ್ಪದಲ್ಲಿದ್ದ ಕೆಲವರು, ಈಜಿ ದಡ ಸೇರಿದರು. ಆದರೆ 12 ಯುವಕರು ಈಜಲು ಸಾಧ್ಯವಾಗಲಿಲ್ಲ. ಹಾಗಾಗಿ, ಎಲ್ಲರ ಕಣ್ಣೆದುರಲ್ಲೇ, ಅಷ್ಟೂ ಯುವಕರು ಜಲಸಮಾಧಿಯಾದರು. ಈ ಘಟನೆ ಇಡೀ ಶಿವಮೊಗ್ಗ ಜಿಲ್ಲೆಯನ್ನು ದಿಗ್ಭ್ರಾಂತಗೊಳಿಸಿತು. ದೇಶ, ವಿದೇಶದಲ್ಲೂ ಇದು ಸುದ್ದಿಯಾಯ್ತು.

ಊರಲ್ಲಿ ಗಣೇಶೋತ್ಸವವೇ ಬಂದ್

ಮಕ್ಕಳು ನೀರಿನಲ್ಲಿ ಮುಳುಗಿದ್ದು ಈಗಲೂ ಊರವರ ಕಣ್ಣಲ್ಲಿದೆ. ಆ ನೋವಿನಿಂದ ಹೊರಬರಲಾಗದೆ, ಕಳೆದ ವರ್ಷ ಸಾರ್ವಜನಿಕ ಗಣೇಶೋತ್ಸವನ್ನು ನಿಲ್ಲಿಸಲಾಯಿತು. ಈ ವರ್ಷವೂ ಅದೇ ಮುಂದುವರೆದಿದೆ. ಇನ್ನಷ್ಟು ವರ್ಷ ಇಲ್ಲಿ ಸಾರ್ವಜನಿಕ ಗಣೇಶೋತ್ಸವ ನಡೆಯದೇ ಇರುವ ಸಾಧ್ಯತೆ ಇದೆ.

ಫೋಟೊ | ಘಟನೆಯಲ್ಲಿ ಮೃತರಾದವರ ಸಮಾಧಿ

ಗೌರಿ ಮತ್ತು ಗಣೇಶ ಹಬ್ಬದ ಸಂದರ್ಭ ಬಹುತೇಕರು ಮನೆಯಲ್ಲಿ ಪೂಜೆ ಮಾಡಿದ್ದಾರೆ. ಇದರ ಹೊರತು ಇಡೀ ಊರು ಮೌನಕ್ಕೆ ಶರಣಾಗಿತ್ತು. ಇನ್ನು, ಘಟನೆ ನಡೆದು ಸೆಪ್ಟೆಂಬರ್ 5ಕ್ಕೆ ಎರಡು ವರ್ಷ ತುಂಬಿದೆ. ಈ ಹಿನ್ನೆಲೆಯಲ್ಲಿ ಇಡೀ ಊರವರು ಸಮಾಧಿ ಸ್ಥಳಕ್ಕೆ ತೆರಳಿ, ಮೃತರಾದ 12 ಯುವಕರಿಗೆ ನಮನ ಸಲ್ಲಿಸಿದ್ದಾರೆ.

ಹಾಡೋನಹಳ್ಳಿ ಘಟನೆಯಿಂದ ಎಚ್ಚೆತ್ತ ಜಿಲ್ಲಾಡಳಿತ

ಇನ್ನು, ಹಾಡೋನಹಳ್ಳಿಯಲ್ಲಿ ಎರಡು ವರ್ಷದ ಹಿಂದಿನ ಘಟನೆ, ಜಿಲ್ಲಾಡಳಿತವನ್ನು ಎಚ್ಚರಿಸಿತು. ಇನ್ಮುಂದೆ ತೆಪ್ಪದಲ್ಲಿ ಗಣೇಶ ವಿಸರ್ಜನೆ ಮಾಡಬೇಕಿದ್ದರೆ, ತೆಪ್ಪದಲ್ಲಿ ಹೋಗುವವರು ಲೈಫ್ ಜಾಕೆಟ್ ತೊಡಬೇಕು. ನಾಲ್ಕು ಜನರಷ್ಟೇ ತೆಪ್ಪದಲ್ಲಿ ತೆರಳಬೇಕು ಎಂಬ ಮಿತಿ ವಿಧಿಸಲಾಗಿದೆ.

ಹಾಡೋನಹಳ್ಳಿಯಲ್ಲಿ ನಡೆದ ಕಹಿ ಘಟನೆ

12 drowned while trying to immerse a Hindu God idol

Twelve people are feared drowned after a coracle carrying more than 20 people capsized in Tungabadra river on Wednesday afternoon in Hadonahalli, Shivamogga district.Rescue personnel have recovered one body from the Tungabhadra river, after the coracle capsized when during the immersion of the Ganesha idol on Wednesday. One body has been retrieved from the river while search and rescue operations are underway to find others. The incident happened around 1.30 pm in the afternoon.

Posted by Viral Jerk on Friday, 9 September 2016

ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ | 7411700200

ಈ ಮೇಲ್ ಐಡಿ | shivamoggalive@gmail.com

Leave a Reply

error: Content is protected !!