ಕೊಡವರಿಗೆ ಶಿವಮೊಗ್ಗದಿಂದಲೂ ಭರಪೂರ ನೆರವು, ಏನೇನೆಲ್ಲ ಸಂಗ್ರಹವಾಗಿದೆ? ಪರಿಹಾರದ ಸಾಮಾಗ್ರಿ ಎಲ್ಲಿಗೆ ತಲುಪಿಸಬೇಕು?

ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ

ಸಂಕಷ್ಟಕ್ಕೆ ಸಿಲುಕಿರುವ ಕೊಡವರಿಗೆ ಶಿವಮೊಗ್ಗದಿಂದಲೂ ನೆರವು.. ಅಗತ್ಯ ವಸ್ತುಗಳನ್ನು ಸಂಗ್ರಹಿಸಿ ಕೊಡುಗು ಜಿಲ್ಲೆಗೆ ತಲುಪಿಸುತ್ತಿದ್ದಾರೆ ಮಲೆನಾಡಿಗರು..

ಭಾರೀ ಮಳೆಯಿಂದಾಗಿ ಕೊಡಗು ಜಿಲ್ಲೆಯ ಬಹುಭಾಗ ಮುಳುಗಡೆಯಾಗಿದೆ. ಅನೇಕ ಕಡೆ ಭೂಕುಸಿತದಿಂದಾಗಿ ಜನರು ನೆಲೆ ಕಳೆದುಕೊಂಡಿದ್ದಾರೆ. ಸಂಕಷ್ಟದಲ್ಲಿರುವ ಕೊಡವರಿಗೆ ಇಡೀ ರಾಜ್ಯವೇ ನೆರವು ನೀಡುತ್ತಿದೆ. ಶಿವಮೊಗ್ಗದಿಂದಲೂ ಭರಪೂರ ನೆರವು ಹರಿದು ಹೋಗುತ್ತಿದೆ.

ನವುಲೆಯ ಕೃಷಿ ವಿಶ್ವವಿದ್ಯಾಲದಯ ವಿದ್ಯಾರ್ಥಿಗಳು ಧನ ಸಂಗ್ರಹ ಮಾಡಿ, ಕೊಡವರ ನೆರವಿಗೆ ನಿಂತಿದ್ದಾರೆ. ವಿವಿಯ ವಿದ್ಯಾರ್ಥಿಗಳು, ಸಿಬ್ಬಂದಿಗಳಿಂದ ಹಣ ಸಂಗ್ರಹಿಸಿದ್ದಾರೆ.

ಶಿವಮೊಗ್ಗದಲ್ಲಿ ವಿವಿಧ ಸಂಘಟನೆಗಳು, ಸಾಮಾಜಿಕ ಹೋರಾಟಗಾರರು ಅಗತ್ಯ ವಸ್ತುಗಳನ್ನು ಸಂಗ್ರಹಿಸಿ, ಕೊಡಗು ಜಿಲ್ಲೆಗೆ ಕಳುಹಿಸಿಕೊಡುತ್ತಿದ್ದಾರೆ. ಇನ್ನು, ಕೊಡಗು ಜಿಲ್ಲೆಗೆ ವಸ್ತುಗಳನ್ನು ತಲುಪಿಸುವುದು ಹೇಗೆ ಅನ್ನುವುದು ಗೊತ್ತಾಗದೆ ಇರುವವರು, ಶಿವಮೊಗ್ಗದ ಪತ್ರಿಕೆ ಮತ್ತು ಟಿವಿ ಚಾನೆಲ್ ಕಚೇರಿಗಳಿಗೆ ಅವುಗಳನ್ನು ತಂದಿಡುತ್ತಿದ್ದಾರೆ. ನಗರದ ಪತ್ರಿಕಾ ಭವನಕ್ಕೂ ಜನ ಅಗತ್ಯ ವಸ್ತುಗಳನ್ನು ತಂದಡಿತ್ತಿದ್ದಾರೆ. ಇವುಗಳನ್ನು ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿರುವ ಸಾಂಕ್ರಾಮಿಕ ರೋಗ ತಡೆ ಘಟಕದ ಕಚೇರಿಗೆ ಮೂಲಕ ಕೊಡಗು ಜಿಲ್ಲೆಗೆ ಕಳುಹಿಸಲಾಗುತ್ತಿದೆ.

ಏನೇನೆಲ್ಲ ಸಂಗ್ರಹವಾಗಿದೆ?

ಶಿವಮೊಗ್ಗ ನಗರದ ವಿವಿಧೆಡೆ ಅಗತ್ಯ ವಸ್ತುಗಳನ್ನು ಸಂಗ್ರಹಿಸಿ, ಸಾಂಕ್ರಾಮಿಕ ರೋಗ ತಡೆ ಘಟಕದ ಕಚೇರಿಗೆ ತಲುಪಿಸಲಾಗತ್ತಿದೆ. ಈ ಸಂಬಂಧ ಶಿವಮೊಗ್ಗ ಲೈವ್.ಕಾಂ ಜೊತೆಗೆ ಮಾತನಾಡಿದ ಡಾ.ಶಂಕರಪ್ಪ, ಈವರೆಗೂ ಸುಮಾರು ಹತ್ತು ಲೀಟರ್’ನ ಎರಡು ಸಾವಿರ ಬಾಟಲ್ ಕುಡಿಯುವ ನೀರು, 300 ಎಂ.ಎಲ್’ನ ಐದು ಸಾವಿರ ಪೌಚ್ ಕುಡಿಯುವ ನೀರು, ಬ್ಲೀಚಿಂಗ್ ಪೌಡರ್, ಸೋಪುಗಳು, ಬಟ್ಟೆ, ಬ್ಲಾಂಕೆಟ್.. ಹೀಗೆ ಅನೇಕ ವಸ್ತುಗಳನ್ನು ತಂದು ಕೊಡುತ್ತಿದ್ದಾರೆ.’ ಎಂದರು.

ಟ್ರಾವೆಲ್ ಕರ್ನಾಟಕ ಸ್ವಯಂ ಸೇವಾ ಸಂಸ್ಥೆ, ಅಗತ್ಯ ವಸ್ತುಗಳು ಜೊತೆಗೆ ಒಳ ಉಡುಪುಗಳನ್ನು ಖರೀದಿಸಿ, ಸಂಕಷ್ಟದಲ್ಲಿರುವ ಕೊಡವರಿಗೆ ತಲುಪಿಸುವ ಸಹಾಸ ಮಾಡುತ್ತಿದೆ. ಇನ್ನು ತೀರ್ಥಹಳ್ಳಿ, ಸಾಗರ, ಭದ್ರಾವತಿ ಸೇರಿದಂತೆ ಜಿಲ್ಲೆಯ ವಿವಿಧಡೆ ಜನರು ಪರಿಹಾರ ಸಾಮಾಗ್ರಿ ಕಳುಹಿಸಿಕೊಡುತ್ತಿದ್ದಾರೆ.

ಹುಟ್ಟುಹಬ್ಬವನ್ನೂ ಲೆಕ್ಕಿಸದ ಅಧಿಕಾರಿ

ಪರಿಹಾರ ಸಾಮಾಗ್ರಿಗಳನ್ನು ಸಂಗ್ರಹಿಸಿ, ಅದನ್ನು ಕೊಡಗು ಜಿಲ್ಲೆಗೆ ತಲುಪಿಸುವುದು ಹೇಗೆ ಅನ್ನುವುದೇ ಬಹುತೇಕರಿಗೆ ಗೊಂದಲ. ಪರಿಹಾರ ಸಾಮಾಗ್ರಿಗಳನ್ನು ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿರುವ ಜಿಲ್ಲಾ ಸಾಂಕ್ರಾಮಿಕ ರೋಗ ತಡೆ ಘಟಕಕ್ಕೆ ತಲುಪಿಸಿದರೆ ಸಾಕು. ಅಲ್ಲಿಂದ ಕೊಡಗು ಜಿಲ್ಲೆಗೆ ತಲುಪಿಸುವ ವ್ಯವಸ್ಥೆ ಮಾಡಲಾಗುತ್ತಿದೆ. ಇವತ್ತು ಸಂಜೆ 7 ಗಂಟೆ ಒಳಗೆ ವಸ್ತುಗಳನ್ನು ತಲುಪಿಸಿದರೆ, ರಾತ್ರಿಯೇ ಪರಿಹಾರ ಸಾಮಾಗ್ರಿ ಕೊಡಗು ಜಿಲ್ಲೆಯ ಸೋಮವಾರಪೇಟೆಗೆ ತೆರಳಲಿದೆ.

ಇನ್ನು, ಸಾರ್ವಜನಿಕರು, ಸ್ವಯಂ ಸೇವಾ ಸಂಸ್ಥೆಗಳು, ತಲುಪಿಸುವ ಪರಿಹಾರ ಸಾಮಾಗ್ರಿಗಳನ್ನು, ಅಚ್ಚುಕಟ್ಟಾಗಿ ನಿರ್ವಹಿಸಿ, ಸಂತ್ರಸ್ತರಿಗೆ ತಲುಪುವರೆಗೆ ನಿಗಾ ವಹಿಸುವುದು ಸಾಮಾನ್ಯ ಕೆಲಸವಲ್ಲ. ಜಿಲ್ಲಾ ಸಾಂಕ್ರಾಮಿಕ ರೋಗ ತಡೆ ಘಟಕದ ಸರ್ವೇಕ್ಷಣಾಧಿಕಾರಿ ಡಾ.ಶಂಕರಪ್ಪ ಈ ಜವಾಬ್ದಾರಿ ನಿಭಾಯಿಸುತ್ತಿದ್ದಾರೆ. ಇವತ್ತು ಡಾ.ಶಂಕರಪ್ಪ ಅವರ ಹುಟ್ಟುಹಬ್ಬ. ಆದರೆ ತಮ್ಮ ಹುಟ್ಟುಹಬ್ಬದ ಸಂಭ್ರಮವನ್ನು ಬದಿಗೊತ್ತಿ, ಅವರು ಪರಿಹಾರ ಕಾರ್ಯದಲ್ಲಿ ಮಗ್ನರಾಗಿದ್ದಾರೆ. ಅಷ್ಟೇ ಅಲ್ಲಾ, ಪರಿಹಾರ ಸಾಮಾಗ್ರಿಗಳನ್ನು ತಲುಪಿಸಬೇಕಿದ್ದರೆ ತಮ್ಮನ್ನು ಸಂಪರ್ಕಿಸಬಹುದು ಅಂತಲೂ ತಿಳಿಸಿದ್ದಾರೆ. ಡಾ.ಶಂಕರಪ್ಪ ಅವರ ಮೊಬೈಲ್ ಸಂಖ್ಯೆ 9449843268.

ಆರೋಗ್ಯ, ಅರಣ್ಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಪರಿಹಾರ ಸಾಮಾಗ್ರಿಗಳ ಸಂಗ್ರಹದಲ್ಲಿ ತೊಡಗಿಸಿಕೊಂಡಿದ್ದಾರೆ.

ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ | 7411700200

Leave a Reply

error: Content is protected !!