ಶಿವಮೊಗ್ಗದ ನವುಲೆಯಲ್ಲಿ ಡಾ.ರಾಜ್ ಮೊಮ್ಮಗನ ಅದ್ಧೂರಿ ಮದುವೆ, ದೊಡ್ಮನೆ ಸ್ಟಾರ್ ಗಳು ಭಾಗಿ

ಲೈವ್ ಕರ್ನಾಟಕ.ಕಾಂ | ಶಿವಮೊಗ್ಗ

ಅದ್ಧೂರಿಯಾಗಿ ನೆರವೇರಿತು ಡಾ.ರಾಜ್ ಮೊಮ್ಮಗನ ಮದುವೆ. ಸ್ಯಾಂಡಲ್ ವುಡ್ ದೊಡ್ಮನೆಯ ಕಲ್ಯಾಣಕ್ಕೆ ಸಾಕ್ಷಿಯಾದರು ತಾರೆಗಳು.

ಶಿವಮೊಗ್ಗದ ಸವಳಂಗ ರಸ್ತೆಯ ಸರ್ಜಿ ಕನ್ವೆಷನ್ ಹಾಲ್ ನಲ್ಲಿ, ಡಾ.ರಾಜ್ ಕುಮಾರ್ ಅವರ ಪುತ್ರಿ ಲಕ್ಷ್ಮೀ ಅವರ ಪುತ್ರ ಷಣ್ಮುಖ ಮತ್ತು ಸಾಗರ ಮೂಲದ ವಕೀಲ ಬರೂರಿನ ನಾಗರಾಜ್ ಅವರ ಮಗಳು ಸಿಂಧು ಸಪ್ತಪದಿ ತುಳಿದರು.

ಮದುವೆ ಸಂಭ್ರಮದಲ್ಲಿ ಡಾ.ರಾಜ್ ಕುಮಾರ್ ಕುಟುಂಬದ ಎಲ್ಲಾ ಸದಸ್ಯರು ಪಾಲ್ಗೊಂಡಿದ್ದರು. ನಟರಾದ ಶಿವರಾಜ್ ಕುಮಾರ್, ಪುನಿತ್ ರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್, ವಿಜಯ ರಾಘವೇಂದ್ರ, ವಿನಯ್ ರಾಜ್, ರಾಮ್ ಕುಮಾರ್, ಧನಂಜಯ್ ಮದುವೆಯಲ್ಲಿ ಸಂಭ್ರಮದಿಂದ ಪಾಲ್ಗೊಂಡಿದ್ದರು.

ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ.ಗೋವಿಂದು, ಮಾಜಿ ಸಚಿವ ಕುಮಾರ ಬಂಗಾರಪ್ಪ ಕಲ್ಯಾಣೋತ್ಸವದಲ್ಲಿ ಪಾಲ್ಗೊಂಡಿದ್ದರು.

ಸ್ಯಾಂಡಲ್ ವುಡ್ ದೊಡ್ಮನೆ ಮದುವೆಯಲ್ಲಿ ಕೆಲವೇ ಕೆಲವು ಆಪ್ತರು, ನೆಂಟರು, ಇಷ್ಟರಿಗಷ್ಟೇ ಆಹ್ವಾನವಿತ್ತು.

ಆಹ್ವಾನ ಇದ್ದವರಿಗಷ್ಟೇ ಕಲ್ಯಾಣ ಮಂಟಪದ ಒಳಗೆ ಪ್ರವೇಶ ಇತ್ತು. ಆದ್ದರಿಂದ ಸ್ಟಾರ್ ಗಳನ್ನು ನೋಡಲು ಅಭಿಮಾನಿಗಳು ಗೇಟ್ ನಿಂದ ಹೊರಗೆ ಕಾದು ನಿಂತಿದ್ದರು.

ಲೈವ್ ಕರ್ನಾಟಕ.ಕಾಂ. ವಾಟ್ಸಪ್ | 7411700200

Leave a Reply

error: Content is protected !!