ಶಿವಮೊಗ್ಗ ದಸರಾಗೆ ಸಿಕ್ತು ಚಾಲನೆ, ನೀತಿ ಸಂಹಿತೆ ಎಫೆಕ್ಟ್ ನಡುವೆ ನಾಡಹಬ್ಬ ಆಚರಣೆ

ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ | 10 ಅಕ್ಟೋಬರ್ 2018

ನೀತಿ ಸಂಹಿತೆ ಬಿಸಿಯ ನಡುವೆ ಶಿವಮೊಗ್ಗ ದಸರಾಗೆ ಚಾಲನೆ ಸಿಕ್ಕಿದೆ. ನಾಡ ದೇವತೆ ಚಾಮುಂಡಿಯ ವಿಗ್ರಹಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ, ಸಾಹಿತಿ ಹೆಚ್.ಎಸ್.ವೆಂಕಟೇಶಮೂರ್ತಿ, ನಾಡಹಬ್ಬಕ್ಕೆ ಚಾಲನೆ ನೀಡಿದರು.

ಶಿವಮೊಗ್ಗದ ಚಂಡಿಕಾ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ದಸರಾ ಉದ್ಘಾಟನಾ ಸಮಾರಂಭ ಆಯೋಜಿಸಲಾಗಿತ್ತು. ಲಾರಿ ಮೂಲಕ ನಾಡದೇವತೆಯ ಮೆರವಣಿಗೆ ನಡೆಸಲಾಯಿತು. ಜನಪ್ರತಿನಿಧಿಗಳು, ಅಧಿಕಾರಿಗಳು, ಸಾರ್ವಜನಿಕರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

ದೇಗುಲದಲ್ಲಿ ವಿಶೇಷ ಪೂಜೆ

ಚಂಡಿಕಾ ಪರಮೇಶ್ವರಿ ದೇವಸ್ಥಾನದಲ್ಲಿ ಸಿಂಹದ ಮೇಲೆ ಕುಳಿತ ಚಾಮುಂಡೇಶ್ವರಿ ಮೂರ್ತಿ ಮತ್ತು ವಿವಿಧ ದೇವರುಗಳ ಮೂರ್ತಿಗಳನ್ನು ಜೋಡಿಸಲಾಗಿದೆ. ಇದಕ್ಕೆ ವಿಶೇಷ ಪೂಜೆ ಸಲ್ಲಿಸಲಾಯ್ತು. ಈ ಸಂದರ್ಭ, ದಸರಾ ಉದ್ಘಾಟಕರಾದ ಸಾಹಿತಿ ಹೆಚ್.ಎಸ್.ವೆಂಕಟೇಶಮೂರ್ತಿ, ಜಿಲ್ಲಾಧಿಕಾರಿ ಕೆ.ಎ.ದಯಾನಂದ್ ಅವರನ್ನು ಸನ್ಮಾನಿಸಲಾಯ್ತು.

 

ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ | 7411700200

ಸುದ್ದಿಗಾಗಿ : 9964634494 | ಜಾಹೀರಾತಿಗಾಗಿ : 9972194422

Leave a Reply

error: Content is protected !!