50 WORDS NEWS | ಕೋಟೆ ಆಂಜನೇಯನಿಗೆ ರಾಘವೇಂದ್ರ ವಿಶೇಷ ಪೂಜೆ, ಟಿಕೆಟ್’ಗೆ ಆಗ್ರಹಿಸಿ ಬಿಲ್ಲವರಿಂದ ಬಿಜೆಪಿಗೆ ಮನವಿ

ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ | 08 ಅಕ್ಟೋಬರ್ 2018

ಕೋಟೆ ಆಂಜನೇಯನಿಗೆ ರಾಘವೇಂದ್ರ ವಿಶೇಷ ಪೂಜೆ

ಲೋಕಸಭೆ ಉಪ ಚುನಾವಣೆಗೆ ಬಿಜೆಪಿ ಅಭ್ಯರ್ಥಿ ಅಂತಾ ಘೋಷಣೆಯಾದ ಹಿನ್ನೆಲೆ, ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ, ಇವತ್ತು ಬೆಳಗ್ಗೆ, ಬಿ.ವೈ.ರಾಘವೇಂದ್ರ ಭೇಟಿ. ವಿಶೇಷ ಪೂಜೆ ಸಲ್ಲಿಸಿದ ರಾಘವೇಂದ್ರ. ಈ ಸಂದರ್ಭ, ಬಿಜೆಪಿ ಜಿಲ್ಲಾಧ್ಯಕ್ಷ ರುದ್ರೇಗೌಡ, ಪ್ರಮುಖರಾದ ಪದ್ಮನಾಭ ಭಟ್ ಸೇರಿ ಹಲವರಿದ್ದರು.

ಬಿಲ್ಲವ ಸಮಾಜಕ್ಕೆ ಟಿಕೆಟ್ ನೀಡುವಂತೆ ಒತ್ತಾಯ

ಆವಿನಹಳ್ಳಿ ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ, ಬಿಜೆಪಿಯಿಂದ ಬಿಲ್ಲವ ಸಮಾಜದ ಮುಖಂಡ ಗೀಜಗಾರ್ ನಾಗರಾಜ್ ಅವರಿಗೆ ಟಿಕೆಟ್ ನೀಡುವಂತೆ ತಾಲೂಕು ಬಿಲ್ಲವ ಸಂಘ ಒತ್ತಾಯಿಸಿದೆ. ಅ.28ಕ್ಕೆ ಆವಿನಹಳ್ಳಿ ಜಿಲ್ಲಾ ಪಂಚಾಯಿತಿ ಕ್ಷೇತ್ರಕ್ಕೆ ಉಪಚುನಾವಣೆ ನಡೆಯಲಿದೆ. ಗೀಜಗಾರ್ ನಾಗರಾಜ್ ಅವರು ಬಹು ಸಮಯದಿಂದ ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದಾರೆ. ತಾಲೂಕಿನಲ್ಲಿ ಸುಮಾರು 16 ಸಾವಿರ ಬಿಲ್ಲವ ಮತಗಳಿವೆ. ಆವಿನಹಳ್ಳಿಯಲ್ಲಿ 3500 ಮತಗಳಿವೆ. ಇದು ಅವರಿಗೆ ಗೆಲುವಿಗೆ ಸಹಕಾರಿಯಾಗಲಿದೆ ಅಂತಾ ಮುಖಂಡು ಒತ್ತಾಯಿಸಿದ್ದಾರೆ.

ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ | 7411700200

ಸುದ್ದಿಗಾಗಿ : 9964634494 | ಜಾಹೀರಾತಿಗಾಗಿ : 9972194422

Leave a Reply

error: Content is protected !!