ಬಹು ವರ್ಷದ ಮರಕ್ಕೆ ಕೊಡಲಿ, ಹೊಳೆ ಬಸ್ ಸ್ಟಾಪ್ ಬಳಿ ಪರಿಸರ ಪ್ರಿಯರಿಂದ ಪ್ರೊಟೆಸ್ಟ್

ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ  | 12 ಅಕ್ಟೋಬರ್ 2018

ಬಹು ವರ್ಷದ ಅರಳಿ ಮರವನ್ನು ಕಡಿಯುತ್ತಿದ್ದದ್ದನ್ನು ತಡೆದ ಪರಿಸರ ಪ್ರಿಯರು, ಶಿವಮೊಗ್ಗದ ಹೊಳೆ ಬಸ್ ಸ್ಟಾಪ್’ನಲ್ಲಿ ಪ್ರತಿಭಟನೆ ನಡೆಸಿದರು. ಬಳಿಕ ಮರ ಕಡಿಯುವುದಿಲ್ಲ ಅಂತಾ ಜಾಗದ ಮಾಲೀಕರು ಭರವಸೆ ನೀಡಿದ ಹಿನ್ನೆಲೆ, ಪ್ರತಿಭಟನೆ ವಾಪಸ್ ಪಡೆಯಲಾಗಿದೆ.

ಬೆಕ್ಕಿನ ಕಲ್ಮಠದ ಮುಂಭಾದಲ್ಲಿ ಖಾಸಗಿ ಜಾಗದಲ್ಲಿ ಅರಳಿ ಮರವಿದೆ. ಇದನ್ನು ಇವತ್ತು ಬೆಳಗ್ಗೆ ಕಡಿಯಲಾಗುತ್ತಿತ್ತು. ಹಾಗಾಗಿ ಪರಿಸರ ಪ್ರಿಯರು, ಮರ ಕಡಿಯುವುದನ್ನು ನಿಲ್ಲಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದರು. ಕೋಟೆ ಠಾಣೆ ಪೊಲೀಸರ ಎಂಟ್ರಿ ಬಳಿಕ, ಮರ ಕಡಿಯುವುದಿಲ್ಲ ಅಂತಾ ಜಾಗದ ಮಾಲೀಕರು ಭರವಸೆ ನೀಡಿದರು. ಇದರಿಂದ ಪರಿಸರ ಪ್ರಿಯರು ಪ್ರತಿಭಟನೆ ಹಿಂಪಡೆದರು.

ಇನ್ನು, ಅರಣ್ಯ ಇಲಾಖೆಯಿಂದ ಅನುಮತಿ ಪಡೆಯದೆ, ಮರ ಕಡಿದಿದ್ದರಿಂದ ಜಾಗದ ಮಾಲೀಕರ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ ಎಂದು ತಿಳಿದು ಬಂದಿದೆ.

ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ | 7411700200

ಸುದ್ದಿಗಾಗಿ : 9964634494 | ಜಾಹೀರಾತಿಗಾಗಿ : 9972194422

Leave a Reply

error: Content is protected !!