ಶಿವಮೊಗ್ಗ ನಗರದ ವಿವಿಧೆಡೆ ನಾಳೆ ಬೆಳಗ್ಗೆಯಿಂದ ಸಂಜೆವರೆಗೂ ಕರೆಂಟ್ ಇರಲ್ಲ

ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ

ಮೆಸ್ಕಾಂನ ಆಲ್ಕೋಳ ವಿದ್ಯುತ್ ವಿತರಣಾ ಕೇಂದ್ರದಲ್ಲಿ ನಾಳೆ ತುರ್ತು ನಿರ್ವಹಣೆ ಇದೆ. ವಿದ್ಯುತ್ ವಿತರಣಾ ಕೇಂದ್ರದ ಫೀಡರ್ 10 ಮತ್ತು 11ರಲ್ಲಿ ಐಪಿಡಿಎಸ್ ಯೋಜನೆಯ ನಿರ್ವಹಣೆ ಮಾಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ನಾಳೆ ನಗರದ ವಿವಿಧೆಡೆ ವಿದ್ಯುತ್ ವ್ಯತ್ಯಯವಾಗಲಿದೆ.

ಎಲ್ಲೆಲ್ಲಿ ಕರೆಂಟ್ ಇರಲ್ಲ?

ರಾಜೇಂದ್ರನಗರ, ರವೀಂದ್ರನಗರ, ಗಾಂಧಿನಗರ, ಎ.ಎನ್.ಕೆ.ರಸ್ತೆ, ಚನ್ನಪ್ಪ ಲೇಔಟ್, ಅಚ್ಯುತರಾವ್ ಲೇಔಟ್, ವೆಂಕಟೇಶ್’ನಗರ, ಲಕ್ಷ್ಮೀ ಟಾಕೀಸ್ ಸುತ್ತ, ಜೈಲ್ ರಸ್ತೆ, ನಂಜಪ್ಪ ಆಸ್ಪತ್ರೆ ಸುತ್ತ, ಪಾರ್ಕ್ ಬಡಾವಣೆ, ಆರ್.ಎಂ.ಆರ್.ರಸ್ತೆ,  ಸವಳಂಗ ರಸ್ತೆ, ಹನುಮಂತನಗರ, ವಿನಾಯಕ ನಗರ, ಜಯನಗರ, ಶಿವಮೂರ್ತಿ ಸರ್ಕಲ್ ಸುತ್ತ, ತಿಲಕ್ ನಗರ, ಜಿಲ್ಲಾ ಪಂಚಾಯತ್ ಕಚೇರಿ, ವಿನೋಬನಗರ, ಪೊಲೀಸ್ ಚೌಕಿ, ಮೇಧಾರಕೇರಿ, ನರಸಿಂಹ ಬಡಾವಣೆ ಹಾಗೂ  ಸುತ್ತಮುತ್ತಲ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.

ಜುಲೈ 31 ರಂದು ಬೆಳಿಗ್ಗೆ 10.00 ರಿಂದ ಸಂಜೆ 5.00 ಗಂಟೆಯವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಅಂತಾ, ಮೆಸ್ಕಾಂ ನಗರ ಉಪವಿಭಾಗ-3ರ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ | 7411700200

Leave a Reply

error: Content is protected !!