ಸಂಗಮೇಶ್ವರ್’ಗೆ ಸಚಿವ ಸ್ಥಾನ ನೀಡುವಂತೆ ಒತ್ತಾಯ, ಬೆಂಗಳೂರಿನಲ್ಲಿ ಸಿದ್ದರಾಮಯ್ಯ ಮನೆ ಮುಂದೆ ಯುವ ಕಾಂಗ್ರೆಸಿಗರ ಘೋಷಣೆ

ಶಿವಮೊಗ್ಗ ಲೈವ್.ಕಾಂ | ಬೆಂಗಳೂರು | 03 ಅಕ್ಟೋಬರ್ 2018

ಭದ್ರಾವತಿ ಶಾಸಕ ಸಂಗಮೇಶ್ವರ್ ಅವರಗೆ ಸಚಿವ ಸ್ಥಾನ ನೀಡಬೇಕು ಅನ್ನುವ ಆಗ್ರಹಕ್ಕೆ ಮರುಜೀವ ಬಂದಿದೆ. ಬೆಂಗಳೂರಿಗೆ ತೆರಳಿರುವ ಶಿವಮೊಗ್ಗದ ಯುವ ಕಾಂಗ್ರೆಸ್ ಕಾರ್ಯಕರ್ತರು, ಪ್ರಮುಖರನ್ನು ಭೇಟಿಯಾಗಿ, ಮಂತ್ರಿ ಪಟ್ಟ ನೀಡಬೇಕು ಅಂತಾ ಒತ್ತಾಯಿಸುತ್ತಿದ್ದಾರೆ.

ಸಚಿವ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿಯಾದ ಯುವ ಕಾಂಗ್ರೆಸಿಗರು, ಸಂಗಮೇಶ್ವರ್ ಅವರನ್ನು ಮಿನಿಸ್ಟರ್ ಮಾಡಬೇಕು ಆಗ್ರಹಿಸಿದರು. ಜಿಲ್ಲೆಯ ಏಕೈಕ ಕಾಂಗ್ರೆಸ್ ಶಾಸಕರನ್ನು ಮಂತ್ರಿ ಮಾಡಿದರೆ ಪಕ್ಷ ಸಂಘಟನೆ ಸುಲಭ ಅಂತಾ ಡಿ.ಕೆ.ಶಿವಕುಮಾರ್ ಅವರಿಗೆ ಮನರಿಕೆ ಮಾಡಿಕೊಟ್ಟರು. ಇನ್ನು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮನೆ ಮುಂದೆ, ಶಾಸಕ ಸಂಗಮೇಶ್ವರ್ ಪರವಾಗಿ ಘೋಷಣೆ ಕೂಗಿದರು. ಮಿನಿಸ್ಟರ್ ಪಟ್ಟ ನೀಡಬೇಕು ಅಂತಾ ಒತ್ತಾಯಿಸಿದರು.

ಸಿದ್ದರಾಮಯ್ಯ ಅವರ ಭೇಟಿಗೆ ಅವಕಾಶ ಸಿಕ್ಕಿದ್ದು, ಭದ್ರಾವತಿ ಶಾಸಕರನ್ನು ಮಂತ್ರಿ ಮಾಡುವ ಕುರಿತು ಚರ್ಚಿಸಲಿದ್ದಾರೆ. ಸಚಿವ ಸಂಪುಟ ವಿಸ್ತರಣೆಗೆ ನಿರ್ಧರಿಸಿರುವ ಹಿನ್ನೆಲೆ, ಈ ಬೇಡಿಕೆಗೆ ಮರುಜನ್ಮ ಸಿಕ್ಕಿದೆ.

ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ | 7411700200

ಸುದ್ದಿಗಾಗಿ : 9964634494 | ಜಾಹೀರಾತಿಗಾಗಿ : 9972194422

Leave a Reply

error: Content is protected !!