ಮಹಿಳೆಗೆ ಒಲಿದ ಶಿವಮೊಗ್ಗ ಪಾಲಿಕೆ ಮೇಯರ್ ಪಟ್ಟ, ಯಾರವರು ಗೊತ್ತಾ?

ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ | 3 ಸೆಪ್ಟೆಂಬರ್ 2018

ಮಹಾನಗರ ಪಾಲಿಕೆ ಫಲಿತಾಂಶದ ಬೆನ್ನಿಗೆ ರಾಜ್ಯ ಸರ್ಕಾರ ಮೇಯರ್, ಉಪಮೇಯರ್ ಸ್ಥಾನಕ್ಕೆ ಮೀಸಲಾತಿ ಪ್ರಕಟಿಸಿದೆ.

ಮೇಯರ್ ಸ್ಥಾನಕ್ಕೆ ಪರಿಶಿಷ್ಟ ಜಾತಿ (ಮಹಿಳೆ) ಮತ್ತು ಉಪಮೇಯರ್ ಸಾಮಾನ್ಯ ವರ್ಗಕ್ಕೆ ಮೀಸಲಾಗಿದೆ.

ಹಾಗಾದರೆ ಯಾರಿಗೆ ಒಲಿಯಬಹುದು ಚುಕ್ಕಾಣಿ?

ಮೀಸಲಾತಿ ಆಧಾರದಲ್ಲಿ, ಬಿಜೆಪಿ ಪಕ್ಷದಲ್ಲಿ ಲತಾ ಗಣೇಶ್ ಅವರಿದ್ದಾರೆ. ಹಾಗಾಗಿ ಅವರಿಗೆ ಮೇಯರ್ ಸ್ಥಾನ ಬಹುತೇಕ ಖಚಿತವಾಗಿದೆ. ಇನ್ನು, ಉಪಮೇಯರ್ ಸ್ಥಾನಕ್ಕೆ ಇನ್ನು ಯಾರನ್ನೂ ಫೈನಲ್ ಮಾಡಿಲ್ಲ. ಈ ಸಂಬಂಧ ಶಿವಮೊಗ್ಗ ಲೈವ್.ಕಾಂ ಜೊತೆಗೆ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ ರುದ್ರೇಗೌಡ, ‘ಈಶ್ವರಪ್ಪ ಅವರೊಂದಿಗೆ ಚರ್ಚೆ ನಡೆಸಿ, ಮೇಯರ್ ಮತ್ತು ಉಪಮೇಯರ್ ಸ್ಥಾನ ಪ್ರಕಟಿಸುತ್ತೇವೆ’ ಅಂತಾ ತಿಳಿಸಿದ್ದಾರೆ.

ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ | 7411700200

ಈ ಮೇಲ್ ಐಡಿ | shivamoggalive@gmail.com

Leave a Reply

error: Content is protected !!