‘ಹತ್ತು ಓಟು ಪಡೆಯೋರಷ್ಟೇ ಅಲ್ಲ, ಪಕ್ಷದಿಂದ ಪಕ್ಷಕ್ಕೆ ಹಾರಿದವರೂ ಸೊರಬದಲ್ಲಿ ನನ್ನ ಪ್ರತಿಸ್ಪರ್ಧಿ’

ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ

ತಮ್ಮ ವಿರುದ್ಧ ಚುನಾವಣೆಗೆ ಸ್ಪರ್ಧಿಸಿರುವವರೆಲ್ಲ ತಮ್ಮ ಪ್ರತಿಸ್ಪರ್ಧಿಗಳೇ ಅಂತಾ ಸೊರಬ ಶಾಸಕ ಮಧು ಬಂಗಾರಪ್ಪ ತಿಳಿಸಿದ್ದಾರೆ. ಹಾಗೇ, ಮಾಜಿ ಸಚಿವ ಕುಮಾರ ಬಂಗಾರಪ್ಪ ಅವರ ಹೆಸರು ಹೇಳದೆ, ರಾಜಕೀಯ ಅಸ್ಥಿತ್ವ ಉಳಿಸಿಕೊಳ್ಳಲು ಒಂದು ರಾಜಕೀಯ ಪಕ್ಷದಿಂದ ಮತ್ತೊಂದು ರಾಜಕೀಯ ಪಕ್ಷಕ್ಕೆ ಹಾರಿದವರು ಕೂಡ ತಮ್ಮ ಪ್ರತಿಸ್ಪರ್ಧಿಯೇ ಅಂತಾ ಟಾಂಗ್ ನೀಡಿದ್ದಾರೆ.

ಶಿವಮೊಗ್ಗದಲ್ಲಿ ಇವತ್ತು ಸುದ್ದಿಗಾರರೊಂದಿಗೆ ಮಾತನಾಡಿದ ಮಧು ಬಂಗಾರಪ್ಪ, ರಾಜ್ಯದಲ್ಲಿಯೇ ಸೊರಬ ಕ್ಷೇತ್ರವನ್ನು ಮಾದರಿ ಕ್ಷೇತ್ರ ಮಾಡಬೇಕು ಎಂಬ ಕನಸಿದೆ. ಈಗಾಗಲೇ ಐದು ವರ್ಷ ಕ್ಷೇತ್ರದ ಅಭಿವೃದ್ಧಿ ಮಾಡಿದ್ದಾನೆ. ಅದನ್ನು ಜನ ಗಮನಿಸಿದ್ದಾರೆ ಎಂದರು.

ಅಭಿವೃದ್ಧಿ ಆಧಾರದ ಮೇಲೆ ಕಳೆದ ಬಾರಿಗಿಂತಲೂ, ಎರಡು ಪಟ್ಟು ಹೆಚ್ಚು ಅಂತರದಿಂದ ಗೆಲ್ಲಿಸುವ ಭರವಸೆ ಇದೆ ಅಂತಾ ಮಧು ಬಂಗಾರಪ್ಪ ತಿಳಿಸಿದರು.

ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ | 7411700200

Leave a Reply

error: Content is protected !!