ಬಂಗಾರಪ್ಪ ಕನಸು ನನಸು ಮಾಡಲು ಒಂಭತ್ತು ವರ್ಷದ ಬಳಿಕ ಮಧುಗೆ ಸಿಕ್ಕಿದೆ ಚಾನ್ಸ್ , ಏನದು ಕನಸು? ಈಗ ನನಸಾಗುತ್ತಾ?

ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ  | 15 ಅಕ್ಟೋಬರ್ 2018

ತಮ್ಮ ತಂದೆ, ಮಾಜಿ ಸಿಎಂ ಬಂಗಾರಪ್ಪ ಕನಸು ಈಡೇರಿಸಲು ಮಧ ಬಂಗಾರಪ್ಪ ಅವರಿಗೆ ಭರ್ಜರಿ ಅವಕಾಶ ಸಿಕ್ಕಿದೆ. ಇದು ಅಂತಿಂಥಾ ಅವಕಾಶವಲ್ಲ. ಬರೋಬರಿ ಒಂಭತ್ತು ವರ್ಷದ ಬಳಿಕ ಈ ಚಾನ್ಸ್ ಲಭ್ಯವಾಗಿದೆ.

ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ವಿರುದ್ಧ ಮಧು ಬಂಗಾರಪ್ಪ ಕಣಕ್ಕಿಳಿಯುತ್ತಿದ್ದಾರೆ. ಗೆಲ್ಲುವ ವಿಶ್ವಾಸದಲ್ಲೂ ಇದ್ದಾರೆ. ಉಪ ಚುನಾವಣೆಯಲ್ಲಿ ಮಧು ಬಂಗಾರಪ್ಪ ಗೆಲುವು ಸಾಧಿಸಿದರೆ, ತಂದೆ ಸೋಲಿನ ಸೇಡು ತೀರಿಸಿಕೊಂಡಂತೆ ಆಗಲಿದೆ. ಮಧು ಬಂಗಾರಪ್ಪ ಲೆಕ್ಕಾಚಾರ ಉಲ್ಟ ಹೊಡೆದರೆ, ರಾಘವೇಂದ್ರ ಮತ್ತು ಬಿಜೆಪಿ ಜಿಲ್ಲೆಯಲ್ಲಿ ಮತ್ತಷ್ಟು ಪ್ರಬಲವಾಗಲು ಅವಕಾಶವಾಗಲಿದೆ.

ಏನದು ಒಂಭತ್ತು ವರ್ಷದ ಕನಸು?

2009ರ ಲೋಕಸಭೆ ಚುನಾವಣೆಯಲ್ಲಿ ಯಡಿಯೂರಪ್ಪ ಪುತ್ರ ಬಿ.ವೈ.ರಾಘವೇಂದ್ರ ಕಣಕ್ಕಿಳಿದಿದ್ದರು. ಅವರ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿಯಾಗಿ ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಸ್ಪರ್ಧಿಸಿದ್ದರು. ಅಖಾಡದಲ್ಲಿದ್ದಿದ್ದು ರಾಘವೇಂದ್ರ ಆದರೂ, ಆ ಚುನಾವಣೆ ಯಡಿಯೂರಪ್ಪ ಮತ್ತು ಬಂಗಾರಪ್ಪ ನಡುವೆ ನೇರಾನೇರ ಸ್ಪರ್ಧೆ ಅನ್ನುವಂತಾಗಿತ್ತು.

ಚುನಾವಣೆಯಲ್ಲಿ ಬಿ.ವೈ.ರಾಘವೇಂದ್ರ 4,82,783 ಮತಗಳನ್ನು ಪಡೆದರು. ಬಂಗಾರಪ್ಪ 4,29,890 ಮತ ಗಳಿಸಿದ್ದರು. ರಾಘವೇಂದ್ರ 52,893 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಈ ಸೋಲು ಬಂಗಾರಪ್ಪ ಅವರನ್ನು ಬಹುವಾಗಿ ಕಾಡಿತ್ತು. ಈಗ ಬಂಗಾರಪ್ಪ ಅವರ ಕನಸು ನನಸು ಮಾಡಲು ಮಧು ಬಂಗಾರಪ್ಪ ಅವರಿಗೆ ಚಾನ್ಸ್ ಸಿಕ್ಕಿದೆ.

ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ | 7411700200

ಸುದ್ದಿಗಾಗಿ : 9964634494 | ಜಾಹೀರಾತಿಗಾಗಿ : 9972194422

Leave a Reply

error: Content is protected !!