ದಸರಾ ಮುಗಿಯುತ್ತಿದ್ದಂತೆ ಬಿರುಸಾಯ್ತು ರಾಜಕೀಯ ಚಟುವಟಿಕೆ, ಯಾವ್ಯಾವ ಪಕ್ಷ ಹೇಗೆ ಕ್ಯಾಂಪೇನ್ ಮಾಡ್ತಿದೆ ಗೊತ್ತಾ?

ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ | 20 ಅಕ್ಟೋಬರ್ 2018

ದಸರಾ ಮುಗಿಯುತ್ತಿದ್ದಂತೆ ಜಿಲ್ಲೆಯಲ್ಲಿ ರಾಜಕೀಯ ಚಟುವಟಿಕೆ ಬಿರುಸು ಪಡೆದುಕೊಂಡಿದೆ. ಬೈ ಎಲೆಕ್ಷನ್’ಗೆ ಅಬ್ಬರದ ಪ್ರಚಾರ ಪುನಾರಂಭಗೊಂಡಿದೆ.

ಯಾವ್ಯಾವ ಪಕ್ಷದ ಪಕ್ಷದ ಪ್ರಚಾರ ಹೇಗಿದೆ?

ಬಿಜೆಪಿ ಹೇಗೆಲ್ಲ ಪ್ರಚಾರ ಕೈಗೊಂಡಿದೆ?

ವಿಧಾನಸಭೆ ಚುನಾವಣೆ ಸಂದರ್ಭ ಬಿಜೆಪಿ ಪ್ರಚಾರ ನಡೆಸಿದ್ದ ಮಾದರಿಯಲ್ಲೇ ಈ ಬಾರಿಯೂ ಪ್ರಚಾರ ಆರಂಭಿಸಿದೆ. ಬೂತ್ ಕಮಿಟಿಗಳು, ಪೇಜ್ ಪ್ರಮುಖ್’ಗಳಿಗೆ ಜವಾಬ್ದಾರಿ ನೀಡಲಾಗಿದೆ. ಈಗಾಗಲೇ ಬೂತ್ ಮಟ್ಟದಲ್ಲಿ ಸಾಲು ಸಾಲು ‘ಬೈಠಕ್’ಗಳು ನಡೆಯುತ್ತಿವೆ. ಅಭ್ಯರ್ಥಿ ಬಿ.ವೈ.ರಾಘವೇಂದ್ರ ಪರ ಕ್ಯಾಂಪೇನ್ ನಡೆಸಲಾಗುತ್ತಿದೆ. ಇನ್ನು, ಮಾಜಿ ಸಿಎಂ ಯಡಿಯೂರಪ್ಪ ಭರ್ಜರಿಯಾಗಿ ಕ್ಯಾಂಪೇನ್ ನಡೆಸುತ್ತಿದ್ದಾರೆ. ಇವತ್ತು ಆಯನೂರಿನಲ್ಲಿ ಯಡಿಯೂರಪ್ಪ ತಮ್ಮ ಪುತ್ರ ರಾಘವೇಂದ್ರ ಪರ ಕ್ಯಾಂಪೆನ್ ನಡೆಸಿದರು.

ಜೆಡಿಎಸ್ – ಕಾಂಗ್ರೆಸ್’ನಿಂದಲೂ ಭರ್ಜರಿ ಕ್ಯಾಂಪೇನ್

ಉಪ ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಕಾಂಗ್ರೆಸ್ ಮತ್ತು ಜೆಡಿಎಸ್, ತಮ್ಮ ಒಮ್ಮತದ ಅಭ್ಯರ್ಥಿ ಮಧು ಬಂಗಾರಪ್ಪ ಪರವಾಗಿ ಬಿರುಸಿನ ಕ್ಯಾಂಪೇನ್ ನಡೆಸುತ್ತಿವೆ. ಈಗಾಗಲೇ ಸಮನ್ವಯ ಸಭೆ ನಡೆಸಲಾಗಿದ್ದು, ಯಾವ್ಯಾವ ಮುಖಂಡರು ಹೇಗೆ ಪ್ರಚಾರ ನಡೆಸಬೇಕು ಅನ್ನುವ ಕುರಿತು ಚರ್ಚಿಸಲಾಗಿದೆ.

ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ, ಮಾಜಿ ಸಿಎಂ ಸಿದ್ದರಾಮಯ್ಯ, ಸಚಿವ ಆರ್.ವಿ.ದೇಶಪಾಂಡೆ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಸೇರಿದಂತೆ ಹಲವರು ಪ್ರಚಾರಕ್ಕೆ ಆಗಮಿಸಿದ್ದಾರೆ. ಮತ್ತೊಂದೆಡೆ ತಳಮಟ್ಟದಲ್ಲೂ ಜೆಡಿಎಸ್, ಕಾಂಗ್ರೆಸ್ ಕಾರ್ಯಕರ್ತರು ಒಟ್ಟಾಗಿ ಕೆಲಸ ಮಾಡುವಂತೆ ಸೂಚಿಸಲಾಗಿದ್ದು, ಒಮ್ಮತದ ಅಭ್ಯರ್ಥಿಯನ್ನು ಗೆಲ್ಲಿಸುವಂತೆ ತಿಳಿಸಲಾಗಿದೆ.

ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ | 7411700200

ಸುದ್ದಿಗಾಗಿ : 9964634494 | ಜಾಹೀರಾತಿಗಾಗಿ : 9972194422

Leave a Reply

error: Content is protected !!