ಬಿ.ವೈ.ರಾಘವೇಂದ್ರ ಕೋಟಿ ಕೋಟಿಯ ಒಡೆಯ, ಹೆಂಡತಿ, ತಮ್ಮನಿಗೆ ಲಕ್ಷ ಲಕ್ಷ ಸಾಲ, ಹಾಗಾದ್ರೆ ಒಟ್ಟು ಆಸ್ತಿ ಎಷ್ಟು?

ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ | 16 ಅಕ್ಟೋಬರ್ 2018

ಮಾಜಿ ಸಂಸದ ಹಾಗೂ ಲೋಕಸಭೆ ಉಪ ಚುನಾವಣೆ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಚುನಾವಣಾ ಆಯೋಗಕ್ಕೆ ಆಸ್ತಿ ವಿವರ ಸಲ್ಲಿಸಿದ್ದಾರೆ. ಅದರಲ್ಲಿ ಅವರು ಸುಮಾರು 63 ಕೋಟಿ ರೂ. ಆಸ್ತಿ ಘೋಷಿಸಿ ಕೊಂಡಿದ್ದಾರೆ.

2017-18ನೇ ಸಾಲಿಗೆ ಐಟಿ ಇಲಾಖೆಗೆ ಸಲ್ಲಿಸಲಾಗಿರವ ಮಾಹಿತಿ ಅನ್ವಯ ರಾಘವೇಂದ್ರ ಅವರು,  32.09 ಕೋಟಿ ರೂ. ಚರ ಹಾಗೂ 30.91 ಕೋಟಿ ರೂ. ಸ್ಥಿರ ಆಸ್ತಿ ಹೊಂದಿದ್ದಾರೆ.

ನಾಲ್ಕು ವರ್ಷದಲ್ಲಿ ಕೋಟಿ ಕೋಟಿ ಹೆಚ್ಚಳ

2014ರಲ್ಲಿ ಶಿಕಾರಿಪುರ ವಿಧಾನಸಭೆ ಉಪ ಚುನಾವಣೆಯಲ್ಲಿ ಇವರು ಚರ 18.34 ಕೋಟಿ ಹಾಗೂ ಸ್ಥಿರ  15.22 ಕೋಟಿ ರೂ. ಆದಾಯ ಹೊಂದಿರುವುದಾಗಿ ಘೋಷಿಸಿಕೊಂಡಿದ್ದರು. ನಾಲ್ಕು ವರ್ಷಗಳಲ್ಲಿ ಚರ ಆಸ್ತಿಯಲ್ಲಿ 13.74 ಕೋಟಿ, ಸ್ಥಿರ ಆಸ್ತಿಯಲ್ಲಿ 15.69 ಕೋಟಿ ಹೆಚ್ಚಳವಾಗಿದೆ. ಜತೆಗೆ, ಮಕ್ಕಳಾದ ಸುಭಾಷ್ ಹೆಸರಲ್ಲಿ 18.38 ಲಕ್ಷ, ಭಗತ್ ಹೆಸರಲ್ಲಿ 10.08 ಲಕ್ಷ ರೂ. ಆಸ್ತಿ ಇದೆ.

ರಾಘವೇಂದ್ರ ವಿರುದ್ಧ ಎಷ್ಟು ಕೇಸುಗಳಿವೆ?

ಕಳೆದ ವಿಧಾನಸಭೆ ಉಪ ಚುನಾವಣೆಯಲ್ಲಿ ಇವರ ಮೇಲೆ ಐದು ಪ್ರಕರಣಗಳಿದ್ದವು. ಈ ಸಲ ವಿವಿಧ ನ್ಯಾಯಾಲಯಗಳಲ್ಲಿ ನಾಲ್ಕು ಪ್ರಕರಣಗಳು ವಿಚಾರಣಾ ಹಂತದಲ್ಲಿವೆ.

ಹೆಂಡತಿಗೆಷ್ಟು, ತಮ್ಮನಿಗೆಷ್ಟು ಸಾಲ ಕೊಟ್ಟಿದ್ದಾರೆ?

ವಿವಿಧ ಕಂಪನಿಗಳಲ್ಲಿ ರಾಘವೇಂದ್ರ ದಂಪತಿ 10 ಕೋಟಿ ರೂ. ಬಂಡವಾಳ ತೊಡಗಿಸಿದ್ದಾರೆ. ಅಚ್ಚರಿಯ ಸಂಗತಿಯೆಂದರೆ, ಪತ್ನಿ ತೇಜಸ್ವಿನಿಗೆ 30 ಲಕ್ಷ, ಕಿರಿಯ ಸಹೋದರ ಬಿ.ವೈ.ವಿಜಯೇಂದ್ರ 20 ಲಕ್ಷ ರೂ. ಸಾಲ ಕೊಟ್ಟಿದ್ದಾರೆ.

ಎಲ್ಲೆಲ್ಲಿ ಎಷ್ಟು ಆಸ್ತಿ ಇದೆ?

ದಂಪತಿ ಬಳಿ 1.40 ಕೋಟಿ ಮೌಲ್ಯದ ಎರಡು ಕೆಜಿ ಚಿನ್ನ, ಇನ್ನೂರು ಗ್ರಾಂ ವಜ್ರ, 13 ಕೆಜಿ ಬೆಳ್ಳಿ ಇದೆ. ಶಿಕಾರಿಪುರ ತಾಲೂಕು ಚನ್ನಹಳ್ಳಿಯಲ್ಲಿ 11 ಎಕರೆ, ಬಂಡಿಬೈರನಹಳ್ಳಿಯಲ್ಲಿ 6 ಎಕರೆ, ಶಿವಮೊಗ್ಗ ನಗರ ಸಮೀಪದ ಪುರದಾಳದಲ್ಲಿ 2 ಎಕರೆ ಕೃಷಿ ಭೂಮಿ ಹೊಂದಿದ್ದಾರೆ.

ಶಿವಮೊಗ್ಗ ತಾಲೂಕು ಮಾಚೇನಹಳ್ಳಿಯಲ್ಲಿ 4.23 ಎಕರೆ, ಅರಕೆರೆಯಲ್ಲಿ 1 ಲಕ್ಷ ಚದರ ಅಡಿ ಮತ್ತು ಇದೇ ಗ್ರಾಮದಲ್ಲಿ 8 ಎಕರೆ, ಗಾಡಿಕೊಪ್ಪದಲ್ಲಿ 11 ಸಾವಿರ ಚ.ಅಡಿ, ಊರುಗಡೂರು ಬಳಿ 63 ಸಾವಿರ ಚ.ಅಡಿ, ಕಾಶಿಪುರ ಬಡಾವಣೆಯಲ್ಲಿ 31 ಸಾವಿರ ಚ.ಅಡಿ, ಗೋಪಾಳದಲ್ಲಿ 3 ಎಕರೆ ಭೂಮಿ ಇದೆ.

ಶಿಕಾರಿಪುರ ತಾಲೂಕು ಚನ್ನಹಳ್ಳಿ 2 ಎಕರೆ, ನಂದಿಹಳ್ಳಿಯಲ್ಲಿ 13 ಎಕರೆ, ಸ್ವಾಮಿ ವಿವೇಕಾನಂದ ನಗರದಲ್ಲಿ 2,400 ಚ.ಅಡಿ, ಪಟ್ಟಣದ ಮಾಳೇರಕೇರಿಯಲ್ಲಿ 2,100 ಚ.ಅಡಿ ಕೃಷಿಯೇತರ ಭೂಮಿ ಇದೆ. ಇವರ ಬಳಿ ನಾಲ್ಕು ಕಾರು, ಎರಡು ದ್ವಿಚಕ್ರ ವಾಹನ ಹಾಗೂ ಒಂದು ಟ್ರ್ಯಾಕ್ಟರ್ ಇದೆ.

ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ | 7411700200

ಸುದ್ದಿಗಾಗಿ : 9964634494 | ಜಾಹೀರಾತಿಗಾಗಿ : 9972194422

Leave a Reply

error: Content is protected !!