50 WORDS NEWS | ಪಾಲಿಕೆ ಆಯುಕ್ತೆ ಚಾರುಲತಾಗೆ ಗನ್ ಮ್ಯಾನ್ ಭದ್ರತೆ, ಶಿವಮೊಗ್ಗಕ್ಕೆ ಬಂದರು ಎಲೆಕ್ಷನ್ ವೀಕ್ಷಕರು

ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ | 19 ಅಕ್ಟೋಬರ್ 2018

ಉಪ ಚುನಾವಣೆ ವೀಕ್ಷಕರ ಆಗಮನ

ಲೋಕಸಭೆ ಉಪ ಚುನಾವಣೆಯ ಸಾಮಾನ್ಯ ವೀಕ್ಷಕರಾಗಿ ಹಿರಿಯ ಐಎಎಸ್ ಅಧಿಕಾರಿ ಸಂಜಯ್ ಕುಮಾರ್ ರಾಕೇಶ್ ಶಿವಮೊಗ್ಗಕ್ಕೆ ಆಗಮಿಸಿದ್ದಾರೆ. ಚುನಾವಣೆ ಸಂಬಂಧ ದೂರುಗಳಿದ್ದಲ್ಲಿ ಸಾರ್ವಜನಿಕರು ಇವರನ್ನು ಭೇಟಿಯಾಗಿ ಮನವಿ ಸಲ್ಲಿಸಬಹುದು. ಪ್ರತಿದಿನ ಸಂಜೆ 5 ರಿಂದ 6 ಗಂಟೆರೆಗೆ ಸಾಗರ ರಸ್ತೆಯ ಲೋಕೋಪಯೋಗಿ ಇಲಾಖೆ ಪ್ರವಾಸಿ ಮಂದಿರದಲ್ಲಿ ಇವರ ಭೇಟಿಗೆ ಅವಕಾಶವಿದೆ. ಮಾಹಿತಿಗೆ 8277017691 ಸಂಪರ್ಕಿಸಹುದು.

ಪಾಲಿಕೆ ಆಯುಕ್ತರಿಗೆ ಪೊಲೀಸ್ ಸೆಕ್ಯೂರಿಟಿ

ಲೋಕಸಭೆ ಉಪ ಚುನಾವಣೆ ಮಾದರಿ ನೀತಿ ಸಂಹಿತೆ ನೋಡಲ್ ಅಧಿಕಾರಿ ಆಗಿರುವ ಮಹಾನಗರ ಪಾಲಿಕೆ ಆಯುಕ್ತೆ ಚಾರುಲತಾ ಸೋಮಲ್ ಅವರಿಗೆ ಗನ್’ಮ್ಯಾನ್ ಭದ್ರತೆ ಒದಗಿಸಲಾಗಿದೆ. ಇತ್ತೀಚೆಗಷ್ಟೇ ಬಿಜೆಪಿ ಪಾಲಿಕೆ ಸದಸ್ಯ ಚನ್ನಬಸಪ್ಪ ಅವರ ವಿರುದ್ಧ ಕರ್ತವ್ಯಕ್ಕೆ ಅಡ್ಡಿ, ಮಾನಸಿಕವಾಗಿ ಕುಗ್ಗುವಂತೆ ಮಾಡಿದ್ದಾರೆ ಅಂತಾ ಚಾರುಲತಾ ಸೋಮಲ್ ಅವರು ದೂರು ನೀಡಿದ್ದರು. ಇದರ ಬೆನ್ನಿಗೆ ಗನ್’ಮ್ಯಾನ್ ಭದ್ರತೆ ಒದಗಿಸಲಾಗಿದೆ.

ದಿನ ಭವಿಷ್ಯ | ಇವತ್ತು ನಿಮ್ ಭವಿಷ್ಯ ಹೇಗಿದೆ? ಯಾವ ರಾಶಿಯವರ ಶುಭಸಂಖ್ಯೆ ಎಷ್ಟು?

ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ | 7411700200

ಸುದ್ದಿಗಾಗಿ : 9964634494 | ಜಾಹೀರಾತಿಗಾಗಿ : 9972194422

Leave a Reply

error: Content is protected !!