ಶಿವಮೊಗ್ಗದಲ್ಲಿ ಜೋರು ಮಳೆ, ಬಸವನಗುಡಿಯಲ್ಲಿ ಮರಕ್ಕೆ ಸಿಡಿಲು, ವಿವಿಧೆಡೆ ಪವರ್ ಕಟ್

ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ

ಶಿವಮೊಗ್ಗದಲ್ಲಿ ಇವತ್ತು ಮಳೆಯಾಗಿದೆ. ಭಾರಿ ಮಿಂಚು, ಜೋರು ಗುಡುಗು, ಗಾಳಿಯ ಜೊತೆಗೆ ಮಳೆ ಸುರಿದಿದೆ. ಇದರಿಂದ ನಗರದ ವಿವಿಧೆಡೆ ಕರೆಂಟ್ ಕಟ್ ಆಗಿದೆ. ಕೇಬಲ್ ವೈರ್’ಗಳು ತುಂಡಾಗಿವೆ.

ಸಂಜೆ ದಟ್ಟವಾಗಿ ಮೋಡ ಕವಿದಿತ್ತು. ಆದ್ದರಿಂದ ಜನರು ಬೇಗ ಮನೆ ಸೇರಿದ್ದರು. ಇನ್ನು, ಬಸವನಗುಡಿಯಲ್ಲಿ, ಸಿಡಿಲಿನಿಂದ ಮರಕ್ಕೆ ಬೆಂಕಿ ಹೊತ್ತಿಕೊಂಡಿದೆ. ತೆಂಗಿನ ಮರಕ್ಕೆ ಸಿಡಿಲು ಬಡಿದು, ಮರದಲ್ಲಿ ಬೆಂಕಿ ಕಾಣಿಸಿಕೊಂಡಿತು. ಇದರಿಂದ ಸ್ಥಳೀಯರಲ್ಲಿ ಆತಂಕ ಸೃಷ್ಟಿಯಾಗಿತ್ತು.

ಜೋರು ಮಳೆ, ಗಾಳಿಯಿಂದಾಗಿ ಶಿವಮೊಗ್ಗ ನಗರದ ವಿವಿಧೆಡೆ ಪವರ್ ಕಟ್ ಆಗಿದೆ. ಕೆಲವು ಕಡೆ ಕೆಲವೇ ಕೆಲವು ನಿಮಿಷದಷ್ಟು ಪವರ್ ಕಟ್ ಆಗಿದ್ದರೆ, ಉಳಿದರೆ ಒಂದು ಗಂಟೆಗೂ ಹೆಚ್ಚು ಹೊತ್ತಿನಿಂದ ಕರೆಂಟ್ ಇಲ್ಲ.

ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ | 7411700200

Leave a Reply

error: Content is protected !!