ಬೆಂಗಳೂರಿನ ಹಾಗೆ ಶಿವಮೊಗ್ಗದಲ್ಲೂ ಫ್ರೀಡಂ ಪಾರ್ಕ್, ಮುಂದಿನ ನಾಡಹಬ್ಬ ಆಚರಣೆ ಇಲ್ಲೇ

ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ

ಶಿವಮೊಗ್ಗದಲ್ಲಿ ಬೆಂಗಳೂರು ಮಾದರಿ ಫ್ರೀಡಂ ಪಾರ್ಕ್ ಸ್ಥಾಪನೆ ಕುರಿತು ಮುಂದಿನ ವಾರ ಸಚಿವರು ಮತ್ತು ಅಧಿಕಾರಿಗಳ ಜೊತೆಗೆ ಸಭೆ ನಡೆಸಲು ಶಾಸಕ ಕೆ.ಎಸ್.ಈಶ್ವರಪ್ಪ ನಿರ್ಧರಿಸಿದ್ದಾರೆ. ಇದೇ ಕಾರಣಕ್ಕೆ ಹಳೇ ಜೈಲಿಗೆ ಭೇಟಿ ನೀಡಿದ್ದ ಈಶ್ವರಪ್ಪ, ಸ್ಥಳ ಪರಿಶೀಲನೆ ನಡೆಸಿದರು.

ನಗರದ ಲಕ್ಷ್ಮೀ ಟಾಕೀಸ್ ಬಳಿ ಇದ್ದ ಕಾರಾಗೃಹವನ್ನು, ಹೊಸ ಕೇಂದ್ರ ಜೈಲಿಗೆ ಶಿಫ್ಟ್ ಮಾಡಲಾಗಿದೆ. 46 ಎಕರೆ ವಿಸ್ತೀರಣದ ಹಳೇ ಜೈಲಿನಲ್ಲಿ, ಆರು ಎಕರೆ ವಿಸ್ತೀರ್ಣದಲ್ಲಿ ಕಟ್ಟಡವಿದೆ. ಉಳಿದ 40 ಎಕರೆ ಖಾಲಿ ಇದೆ. ಇದನ್ನು ಸಾರ್ವಜನಿಕ ಬಳಕೆಗೆ ಬಿಡಬೇಕು ಎಂಬ ಒತ್ತಾಯವಿದೆ. ಈ ಹಿನ್ನೆಲೆಯಲ್ಲಿ, ಜೈಲು ಆವರಣಕ್ಕೆ ಭೇಟಿ ನೀಡಿದ್ದ ಶಾಸಕ ಕೆ.ಎಸ್.ಈಶ್ವರಪ್ಪ, ಪರಿಶೀಲನೆ ನಡೆಸಿದರು.

ಈ ಬಾರಿ ದಸರಾ ಇಲ್ಲೇ

ಪರಿಶೀಲನೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಈಶ್ವರಪ್ಪ, ನಾಡಹಬ್ಬ ದಸರಾವನ್ನು ಈ ಬಾರಿ ಇಲ್ಲಿಯೇ ಆಚರಿಸಲಾಗುತ್ತದೆ. ಹಾಗಾಗಿ ಈ ಜಾಗವನ್ನು ಬಂಧಿಖಾನೆ ಇಲಾಖೆಯಿಂದ ಮಹಾನಗರ ಪಾಲಿಕೆಗೆ ವರ್ಗಾಯಿಸುವಂತೆ ಸಚಿವರು ಮತ್ತು ಅಧಿಕಾರಿಗಳ ಜೊತೆಗೆ ಸಭೆ ನಡೆಸುತ್ತೇನೆ. ಜುಲೈ 7ರಂದು ಬೆಂಗಳೂರಿನಲ್ಲಿ ಸಭೆ ನಡೆಸುತ್ತೇನೆ ಅಂತಾ ಸ್ಪಷ್ಟಪಡಿಸಿದರು.

ಜಿಲ್ಲಾಧಿಕಾರಿ ಡಾ.ಲೋಕೇಶ್, ಜಿಲ್ಲಾ ರಕ್ಷಣಾಧಿಕಾರಿ ಅಭಿನವ್ ಖರೆ, ಬಿಜೆಪಿ ಮುಖಂಡರಾದ ಚನ್ನಬಸಪ್ಪ, ಸುನಿತಾ ಅಣ್ಣಪ್ಪ, ಸೋಮಸುಂದರ್ ಸೇರಿದಂತೆ ಹಲವರಿದ್ದರು.

ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ | 7411700200

Leave a Reply

error: Content is protected !!