ಕರುಣಾನಿಧಿ ನಿಧನಕ್ಕೆ ಶಿವಮೊಗ್ಗದಲ್ಲೂ ಸಂತಾಪ, ಅರ್ಧಕ್ಕೆ ಹಾರುತ್ತಿದೆ ರಾಷ್ಟ್ರಧ್ವಜ

ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ

ತಮಿಳುನಾಡು ಮಾಜಿ ಮುಖ್ಯಮಂತ್ರಿ ಎಂ.ಕರುಣಾನಿಧಿ ನಿಧನಕ್ಕೆ ಶಿವಮೊಗ್ಗದಲ್ಲೂ ಸಂತಾಪ ಸೂಚಿಸಲಾಗಿದೆ. ಜಿಲ್ಲಾಧಿಕಾರಿ ಕಚೇರಿ ಸೇರಿದಂತೆ ಸರ್ಕಾರಿ ಕಚೇರಿಗಳ ಮುಂದೆ ರಾಷ್ಟ್ರ ಧ್ವಜವನ್ನು ಅರ್ಧಕ್ಕೆ ಹಾರಿಸಲಾಗಿದೆ.

ದೇಶಾದ್ಯಂತ ಶೋಕಾಚರಣೆ ಇರುವುದರಿಂದ, ಎಲ್ಲಾ ಕಡೆಯೂ ರಾಷ್ಟ್ರಧ್ವಜವನ್ನು ಅರ್ಧಕ್ಕೆ ಹಾರಿಸಲಾಗುತ್ತಿದೆ. ಇನ್ನು, ಜಿಲ್ಲಾ ಜೆಡಿಎಸ್ ಕಚೇರಿ ಗಾಂಧಿ ಭವನದಲ್ಲಿ ಎರಡು ನಿಮಿಷ ಮೌನಾಚರಣೆ ಮಾಡಿ, ಕರುಣಾನಿಧಿ ಅವರ ನಿಧನಕ್ಕೆ ಸಂತಾಪ ಸೂಚಿಸಲಾಗಿದೆ. ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಶ್ರೀಕಾಂತ್, ಮೇಯರ್ ನಾಗರಾಜ ಕಂಕಾರಿ, ಮಾಜಿ ಮೇಯರ್ ಏಳುಮಲೈ, ಉತ್ತರ ಬ್ಲಾಕ್ ಅಧ್ಯಕ್ಷ ಸಬ್ಬೇಗೌಡ, ಕಾರ್ಯಾಧ್ಯಕ್ಷ ಸಿದ್ದಪ್ಪ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

ಇನ್ನು, ತಮಿಳ್ ತಾಯ್ ಸಂಘಂನ ಶಿವಮೊಗ್ಗ ಘಟಕದ ವತಯಿಂದಲೂ ಕರುಣಾನಿಧಿ ಅವರಿಗೆ ಸಂತಾಪ ಸೂಚಿಸಲಾಯಿತು. ಸಂಘದ ಅಧ್ಯಕ್ಷ ಡಿ.ರಾಜಶೇಖರಪ್ಪ, ಕಾರ್ಯದರ್ಶಿ ದಂಡಪಾಣಿ ಸೇರಿದಂತೆ ಹಲವರು ಸಂತಾಪ ಸಭೆಯಲ್ಲಿ ಪಾಲ್ಗೊಂಡಿದ್ದರು.

ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ | 7411700200

ಇತರೆ ಸುದ್ದಿಗಳು |

Leave a Reply

error: Content is protected !!