ನಾಡ ಕಚೇರಿಗೆ ದಿಢೀರ್ ಭೇಟಿ ನೀಡಿದ ಜಿಲ್ಲಾಧಿಕಾರಿ, ಏನೇನೆಲ್ಲ ಪರಿಶೀಲಿಸಿದರು? ಏನೆಲ್ಲ ಬದಲಾವಣೆಗೆ ಸೂಚಿಸಿದರು?

ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ | 11 ಅಕ್ಟೋಬರ್ 2018

ನಾಡ ಕಚೇರಿಗೆ ದಿಢೀರ್ ಭೇಟಿ ನೀಡಿದ ಜಿಲ್ಲಾಧಿಕಾ ಕೆ.ಎ.ದಯಾನಂದ್, ಸಿಬ್ಬಂದಿಗಳ ಕಾರ್ಯವೈಖರಿಯನ್ನು ಪರಿಶೀಲಿಸಿದರು. ಅಷ್ಟೇ ಅಲ್ಲ, ಸಾರ್ವಜನಿಕರೊಂದಿಗೆ ಚರ್ಚೆಸಿ, ಸೇವೆಯ ಕುರಿತು ಮಾಹಿತಿ ಪಡೆದುಕೊಂಡರು. ಇದೇ ವೇಳೆ ಹಲವು ಸೂಚನೆ ನೀಡಿದ ಜಿಲ್ಲಾಧಿಕಾರಿ, ಅನುಪಾಲನಾ ವರದಿ ನೀಡುವಂತೆ ಉಪ ತಹಶೀಲ್ದಾರ್ ಅವರಿಗೆ ತಿಳಿಸಿದ್ದಾರೆ.

ನಿದಿಗೆ ನಾಡ ಕಚೇರಿಗೆ ಇವತ್ತು ಜಿಲ್ಲಾಧಿಕಾರಿ ದಿಢೀರ್ ಭೇಟಿ ನೀಡಿದರು. ಗ್ರಾಮ ಲೆಕ್ಕಾಧಿಕಾರಿಗಳಿಂದ ಮೊಬೈಲ್ ಆಪ್ ಮೂಲಕ ಬೆಳೆ ಸಮೀಕ್ಷೆ ಕಾರ್ಯದ ಪ್ರಗತಿ ಕುರಿತು ಮಾಹಿತಿ ಪಡೆದರು. ಬೆಳೆ ಸಮೀಕ್ಷೆಯ ಅಂದಾಜು ಪಟ್ಟಿ ಪರಿಶೀಲಿಸಿದರು.

ನಾಡ ಕಚೇರಿಯಲ್ಲಿ ಕಡತಗಳ ನಿರ್ವಹಣೆ ಸರಿಯಾಗಿಲ್ಲದ್ದನ್ನು ಗಮನಿಸಿದ ಜಿಲ್ಲಾಧಿಕಾರಿ ಗರಂ ಆದರು. ಫೈಲ್’ಗಳನ್ನು ಸಮರ್ಪಕವಾಗಿ ನಿರ್ವಹಿಸಬೇಕು ಅಂತಾ ವಾರ್ನಿಂಗ್ ನೀಡಿದರು. ಇದೇ ವೇಳೆ ಕಚೇರಿ ಸುತ್ತಲು ಸ್ವಚ್ಛತೆಗೆ ಆದ್ಯತೆ ನೀಡುವಂತೆ ಸೂಚಿಸಿದರು. ಇನ್ನು, ಸಾರ್ವಜನಿಕರೊಂದಿಗೆ ಚರ್ಚೆ ನಡೆಸಿದ ಜಿಲ್ಲಾಧಿಕಾರಿ ದಯಾನಂದ್, ಸಿಬ್ಬಂದಿ ಕೊರತೆಯಿಂದ ಸೇವೆ  ಸರಿಯಾಗಿ ಲಭ್ಯವಾಗದೆ ಇರುವ ಕುರಿತು ಮಾಹಿತಿ ಪಡೆದುಕೊಂಡರು.

ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ | 7411700200

ಸುದ್ದಿಗಾಗಿ : 9964634494 | ಜಾಹೀರಾತಿಗಾಗಿ : 9972194422

Leave a Reply

error: Content is protected !!