ನಾಡಹಬ್ಬದ ಸಂಭ್ರಮದಲ್ಲಿ ಶಾಸಕ ಈಶ್ವರಪ್ಪಗೆ ತಟ್ಟಿತು ನೀತಿ ಸಂಹಿತೆ ಬಿಸಿ

ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ | 10 ಅಕ್ಟೋಬರ್ 2018

ದಸರಾ ಕಾರ್ಯಕ್ರಮಕ್ಕೆ ಆಗಮಿಸಿದ್ದ ಶಾಸಕ ಕೆ.ಎಸ್.ಈಶ್ವರಪ್ಪ ಅವರಿಗೆ, ನೀತಿ ಸಂಹಿತೆಯ ಬಿಸಿ ತಟ್ಟಿದೆ. ನಾಡಹಬ್ಬದ ಉದ್ಘಾಟನಾ ಸಮಾರಂಭಕ್ಕೆ ಆಗಮಿಸಿದರೂ, ವೇದಿಕೆ ಮುಂಭಾಗದಲ್ಲೇ ಕೂರುವಂತಾಯ್ತು.

ಶಾಸಕ ಈಶ್ವರಪ್ಪ ಅವರು ವೇದಿಕೆ ಮೇಲೆ ಹತ್ತಲಿಲ್ಲ. ಜನರೊಂದಿಗೆ ವೇದಿಕೆ ಮುಂಭಾದಲ್ಲಿ ಕುಳಿತು, ಉದ್ಘಾಟನಾ ಸಮಾರಂಭವನ್ನು ಕಣ್ತುಂಬಿಕೊಂಡರು. ಕೆಲಹೊತ್ತು ಸಾಹಿತಿ ಹೆಚ್.ಎಸ್.ವೆಂಕಟೇಶಮೂರ್ತಿ ಅವರ ಭಾಷಣ ಕೇಳಿ ಹೊರಟರು.

ಅನುಮತಿ ಕೇಳಿ ಸನ್ಮಾನ ಸ್ವೀಕರಿಸಿದರು

ಇನ್ನು, ಚಂಡಿಕಾ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಆಗಮಿಸಿದ ಈಶ್ವರಪ್ಪ ಅವರಿಗೆ ದೇವಸ್ಥಾನದ ಸಮಿತಿ ವತಿಯಿಂದ ಸನ್ಮಾನ ಮಾಡಲಾಯಿತು. ಆದರೆ ಸನ್ಮಾನ ಸ್ವೀಕರಿಸುವ ಮೊದಲು, ಈಶ್ವರಪ್ಪ ಅವರು ಜಿಲ್ಲಾಧಿಕಾರಿ ಅವರತ್ತ ತಿರುಗಿ ಸನ್ಮಾನ ಸ್ವೀಕರಿಸಬಹುದೇ ಅಂತಾ ಪ್ರಶ್ನಿಸಿದರು. ಜಿಲ್ಲಾಧಿಕಾರಿ ಸೂಚಿಸಿದ ಬಳಿಕ ಸನ್ಮಾನ ಸ್ವೀಕರಿಸಿದರು.

ಮತ್ತೊಂದೆಡೆ ಸ್ವಾಗತ ಭಾಷಣದ ಸಂದರ್ಭದಲ್ಲೂ, ಶಾಸಕರು, ಕಾರ್ಪೊರೇಟರ್’ಗಳ ಹೆಸರು ಹೇಳಲಿಲ್ಲ. ನೀತಿ ಸಂಹಿತೆಯ ಪರಿಣಾಮ, ಜನಪ್ರತಿನಿಧಿಗಳು ಅಂತಲೇ ಕರೆದು ಸ್ವಾಗತಿಸಲಾಯ್ತು.

ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ | 7411700200

ಸುದ್ದಿಗಾಗಿ : 9964634494 | ಜಾಹೀರಾತಿಗಾಗಿ : 9972194422

Leave a Reply

error: Content is protected !!