ಶಿವಮೊಗ್ಗದಲ್ಲಿ ರೈಲ್ವೆ ಗೇಟ್ ರಿಪೇರಿ, ಚನ್ನಗಿರಿ ರಸ್ತೆ ಬಂದ್, ಬದಲಿ ಮಾರ್ಗದಲ್ಲಿ ವಾಹನ ಸಂಚಾರ

ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ  | 12 ಅಕ್ಟೋಬರ್ 2018

ರೈಲ್ವೆ ಹಳಿಯ ರಿಪೇರಿ ಕಾರ್ಯ ನಡೆಯುತ್ತಿರುವುದರಿಂದ, ಶಿವಮೊಗ್ಗ – ಚನ್ನಗಿರಿ ರಸ್ತೆಯನ್ನು ಬಂದ್ ಮಾಡಲಾಗಿದೆ. ಬದಲಿ ಮಾರ್ಗದಲ್ಲಿ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ಇವತ್ತು ರಾತ್ರಿವರೆಗೂ ರಿಪೇರಿ ಕಾರ್ಯ ನಡೆಯಲಿದೆ.

ತುಂಗಾ ನದಿಯ ಹೊಸ ಸೇತುವೆಯಿಂದ ಎಡಗಡೆಗೆ ತಿರುಗುವ ಕಡೆಗೆ ಬ್ಯಾರಿಕೇಡ್’ಗಳನ್ನು ಹಾಕಲಾಗಿದೆ. ಮಾಹಿತಿ ಗೊತ್ತಿಲ್ಲದೇ ಈ ಮಾರ್ಗದಲ್ಲಿ ಬರುವ ವಾಹನ ಸವಾರರು ಬ್ಯಾರಿಕೇಡ್’ಗಳ ಮುಂದೆ ವಾಹನ ನಿಲ್ಲಿಸಿ, ಮಾಹಿತಿ ಪಡೆದುಕೊಂಡು ಬದಲಿ ಮಾರ್ಗದತ್ತ ತೆರಳುತ್ತಿದ್ದಾರೆ. ಇದರಿಂದ ಹೊಸ ಸೇತುವೆ ಮುಂದೆ ಸಂಚಾರ ದಟ್ಟಣೆ ಉಂಟಾಗುತ್ತಿದೆ.

ಬದಲಿ ಮಾರ್ಗದಲ್ಲಿ ವಾಹನ ಸಂಚಾರ

ಇನ್ನು, ರೈಲ್ವೆ ಹಳಿ ರಿಪೇರಿ ಹಿನ್ನೆಲೆ, ವಾಹನಗಳ ಸಂಚಾರಕ್ಕೆ ಬದಲಿ ಮಾರ್ಗ ಸೂಚಿಸಲಾಗಿದೆ. ಶಿವಮೊಗ್ಗ ಭದ್ರಾವತಿ ಹೈವೇ ರಸ್ತೆಯಲ್ಲಿ ರಾಷ್ಟ್ರೀಯ ಹೆದ್ದಾರಿ 13ರಲ್ಲಿ ಯಲವಟ್ಟಿ ಮಾರ್ಗದ ಮೂಲಕ, ಚನ್ನಗಿರಿ ರಸ್ತೆಯನ್ನು ಸೇರಬಹುದಾಗಿದೆ. ಇದೇ ಮಾರ್ಗದಲ್ಲಿ ಈಗ ವಾಹನಗಳು ಸಂಚರಿಸುತ್ತಿವೆ.

ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ | 7411700200

ಸುದ್ದಿಗಾಗಿ : 9964634494 | ಜಾಹೀರಾತಿಗಾಗಿ : 9972194422

Leave a Reply

error: Content is protected !!