ಶಿವಮೊಗ್ಗ – ಬೆಂಗಳೂರು ಇಂಟರ್’ಸಿಟಿ ರೈಲು ತಾಳಗುಪ್ಪದವರೆಗೆ ವಿಸ್ತರಣೆ, ಯಾರಿಗೆಲ್ಲ ಅನೂಕೂಲ? ಟೈಮಿಂಗ್ಸ್ ಏನು?

ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ | 05 ಅಕ್ಟೋಬರ್ 2018

ಶಿವಮೊಗ್ಗ – ಬೆಂಗಳೂರು ಇಂಟರ್’ಸಿಟಿ ರೈಲನ್ನು ತಾಳಗುಪ್ಪದವರೆಗೆ ವಿಸ್ತರಿಸಲಾಗಿದೆ. ಈ ಸಂಬಂಧ ರೈಲ್ವೆ ಇಲಾಖೆಯ ಮೈಸೂರು ವಿಭಾಗ ಆದೇಶ ಹೊರಡಿಸಿದೆ. ಅಕ್ಟೋಬರ್ 10ರಿಂದ ರೈಲು ತಾಳಗುಪ್ಪದವರೆಗೆ ಹೋಗಲಿದೆ.

ಬಹು ವರ್ಷದ ಬೇಡಿಕೆಯನ್ನು ರೈಲ್ವೆ ಇಲಾಖೆ ಇದೀಗ ಈಡೇರಿಸಿದೆ. ಇನ್ನು, ತಾಳಗುಪ್ಪದವರೆಗೆ ಇಂಟರ್’ಸಿಟಿ ರೈಲನ್ನು ವಿಸ್ತರಿಸಿದ್ದರೂ, ಶಿವಮೊಗ್ಗ – ಬೆಂಗಳೂರಿನ ನಡುವಿನ ಸಂಚಾರದ ಸಮಯದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ.

ತಾಳಗುಪ್ಪದಿಂದ ಎಷ್ಟೊತ್ತಿಗೆ ಹೊರಡುತ್ತೆ?

ಬೆಳಗಿನ ಜಾವ 3.50ಕ್ಕೆ ತಾಳಗುಪ್ಪದಿಂದ ಹೊರಡುವ ರೈಲು ಬೆಳಗ್ಗೆ 6.05ಕ್ಕೆ ಶಿವಮೊಗ್ಗ ತಲುಪಲಿದೆ. ಶಿವಮೊಗ್ಗದಿಂದ ಎಂದಿನಂತೆ 6.40ಕ್ಕೆ ಹೊರಡಲಿದೆ.

ತಾಳಗುಪ್ಪಕ್ಕೆ ಎಷ್ಟೊತ್ತಿಗೆ ತಲುಪುತ್ತೆ?

ಬೆಂಗಳೂರಿನಿಂದ ಮಧ್ಯಾಹ್ನ 3ಕ್ಕೆ ಹೊರಟು ಸಂಜೆ 7.55ಕ್ಕೆ ಶಿವಮೊಗ್ಗ ತಲುಪಲಿದೆ. ರಾತ್ರಿ 8 ಗಂಟೆಗೆ ಶಿವಮೊಗ್ಗದಿಂದ ಹೊರಟು ರಾತ್ರಿ 10.20ಕ್ಕೆ ತಾಳಗುಪ್ಪ ತಲುಪಲಿದೆ. ಇನ್ನು, ಇಂಟರ್’ಸಿಟಿ ರೈಲಿಗೆ ಆನಂದಪುರದಲ್ಲೂ ನಿಲಿಗಡೆ ಕಲ್ಪಿಸಲಾಗಿದೆ.

ಯಾರಿಗೆಲ್ಲೆ ಉಪಯೋಗ ಆಗಲಿದೆ?

ಇಂಟರ್’ಸಿಟಿ ರೈಲನ್ನು ತಾಳಗುಪ್ಪದವರೆಗೆ ವಿಸ್ತರಣೆ ಮಾಡಿರುವುದು, ಸಾಗರ, ಸೊರಬ, ಶಿಕಾರಿಪುರ ತಾಲೂಕಿನ ಜನರಿಗೆ ಹೆಚ್ಚಿನ ಅನುಕೂಲವಾಗಲಿದೆ. ಅಷ್ಟೇ ಅಲ್ಲ, ಉತ್ತರ ಕನ್ನಡ ಜಿಲ್ಲೆಯ ಶಿರಸಿ, ಸಿದ್ದಾಪುರ, ಯಲ್ಲಾಪುರ ತಾಲೂಕುಗಳ ಪ್ರಯಾಣಿಕರಿಗೂ ಅನುಕೂಲವಾಗಲಿದೆ.

ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ | 7411700200

ಸುದ್ದಿಗಾಗಿ : 9964634494 | ಜಾಹೀರಾತಿಗಾಗಿ : 9972194422

One Response

  1. ಮಧು October 5, 2018

Leave a Reply

error: Content is protected !!