ಭಾರತ್ ಬಂದ್, ಶಿವಮೊಗ್ಗದಲ್ಲಿ ಇವತ್ತು ಏನೇನಿರುತ್ತೆ? ಯಾವ್ಯಾವ ಸೇವೆ ಸಿಗೋದಿಲ್ಲ ಗೊತ್ತಾ?

ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ | 09 ಸೆಪ್ಟೆಂಬರ್ 2018

ಕಾಂಗ್ರೆಸ್ ಪಕ್ಷ ಕರೆ ನೀಡಿರುವ ಭಾರತ್ ಬಂದ್’ಗೆ ಶಿವಮೊಗ್ಗದಲ್ಲಿ ಅನೇಕ ಸಂಘಟನೆಗಳು ಕೈ ಜೋಡಿಸಿವೆ. ಹಾಗಾಗಿ ಬೆಳಗ್ಗೆಯಿಂದಲೇ ಶಿವಮೊಗ್ಗದಲ್ಲಿ ಬಂದ್ ಬಸಿ ತಟ್ಟುವ ಸಾಧ್ಯತೆ ಇದೆ. ಹಾಗಾದರೆ, ನಾಳೆ (ಸೆಪ್ಟೆಂಬರ್ 10, 2018) ಏನೇನಿರುತ್ತೆ? ಏನೇನಿರಲ್ಲ?

ಸ್ಕೂಲು, ಕಾಲೇಜು

ಶಾಲೆ, ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಈ ಸಂಬಂಧ ಜಿಲ್ಲಾಧಿಕಾರಿ ದಯಾನಂದ್ ಆದೇಶ ಹೊರಡಿಸಿದ್ದಾರೆ.

ಬಸ್ಸು, ಆಟೋ

ಖಾಸಗಿ ಬಸ್ ಮಾಲೀಕರು ಬಂದ್’ಗೆ ಬೆಂಬಲ ಘೋಷಿಸಿದ್ದಾರೆ. ಹಾಗಾಗಿ, 600ಕ್ಕೂ ಹೆಚ್ಚು ಖಾಸಗಿ ಬಸ್’ಗಳು ನಾಳೆ ರಸ್ತೆಗಿಳಿಯುವುದಿಲ್ಲ. ಶಿವಮೊಗ್ಗ ಸಿಟಿ ಸರ್ವಿಸ್ ಬಸ್ಸುಗಳು ಕೂಡ ಬಂದ್’ಗೆ ಬೆಂಬಲ ಸೂಚಿಸಿವೆ. ಆದರೆ ಬಸ್ ನಿಲ್ಲಿಸುವ ಕುರಿತು ಆಯಾ ಬಸ್ ಮಾಲೀಕರೇ ನಿರ್ಧರಿಸಲಿದ್ದಾರೆ ಅಂತಾ ಸಿಟಿ ಬಸ್ ಮಾಲೀಕರ ಸಂಘದ ಅಧ್ಯಕ್ಷ ರಾಘವೇಂದ್ರ ತಿಳಿಸಿದ್ದಾರೆ.

KSRTC ಬಸ್’ಗಳು ಎಂದಿನಂತೆ ಸಂಚರಿಸಲಿವೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ಕೆ.ಎಂ.ಅಶ್ರಫ್ ಶಿವಮೊಗ್ಗ ಲೈವ್.ಕಾಂಗೆ ತಿಳಿಸಿದ್ದಾರೆ. ನಗರದಲ್ಲಿ ಆಟೋ ಸಂಚಾರ ಸ್ಥಗಿತಗೊಳಿಸಲಾಗುತ್ತದೆ ಅಂತಾ ಕರ್ನಾಟಕ ಸಂಘ ಆಟೋ ಚಾಲಕರ ಸಂಘದ ಕಾರ್ಯದರ್ಶಿ ಮುಜೀಬ್ ಸ್ಪಷ್ಟಪಡಿಸಿದ್ದಾರೆ.

ಪೆಟ್ರೋಲ್ ಬಂಕ್’ಗಳು ಬಂದ್ ಮಾಡಲ್ಲ

ಬಂದ್’ಗೆ ನಮ್ಮ ಬೆಂಬಲ ಇಲ್ಲ. ಜನರಿಗೆ ಅಗತ್ಯ ವಸ್ತುಗಳ ಬಗ್ಗೆ ಯಾವುದೇ ಕೊರತೆ ಆಗುವುದಿಲ್ಲ ಎಂದು ಪೆಟ್ರೋಲ್ ಬಂಕ್ ಮಾಲೀಕರ ಸಂಘದ ಮುಖಂಡ ಡಿ.ಎಸ್.ಅರುಣ್ ತಿಳಿಸಿದರು.

ದಿನಬಳಕೆ ಸೇವೆಗಳಿಗಿಲ್ಲ ವ್ಯತ್ಯಯ

ಬಂದ್ ಇದ್ದರೂ ದಿನ ಬಳಕೆ ವಸ್ತುಗಳ ಪೂರೈಕೆಯಲ್ಲಿ ಯಾವುದೇ ವ್ಯತ್ಯಯವಾಗುವುದಿಲ್ಲ. ಹಾಲು, ನ್ಯೂಸ್ ಪೇಪರ್, ಆಸ್ಪತ್ರೆ, ಮೆಡಿಕಲ್ ಸ್ಟೋರ್’ಗಳು ಎಂದಿನಂತೆ ತೆರೆದಿರಲಿವೆ.

ಸರ್ಕಾರಿ ಕಚೇರಿಗಳು ಬಂದ್ ಇಲ್ಲ

ಸರ್ಕಾರಿ ಕಚೇರಿಗಳಿಗೆ ರಜೆ ಘೋಷಣೆ ಮಾಡಿಲ್ಲ. ನಾಳೆ ಸರ್ಕಾರಿ ಕಚೇರಿಗಳು ಎಂದಿನಂತೆಯೇ ಸೇವೆ ಸಲ್ಲಿಸಲಿವೆ. ಬ್ಯಾಂಕ್’ಗಳು ಕೂಡ್ ಬಂದ್ ಆಗುವುದಿಲ್ಲ ಅಂತಾ ಶಿವಮೊಗ್ಗದ ಲೀಡ್ ಬ್ಯಾಂಕ್ ತಿಳಿಸಿದೆ. ಹಾಗಾಗಿ ಬ್ಯಾಂಕ್ ವ್ಯವಹಾರಗಳು ನಡೆಯುತ್ತವೆ.

ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ | 741170200

ಈ ಮೇಲ್ ಐಡಿ | shivamoggalive@gmail.com

Leave a Reply

error: Content is protected !!