ಶಿವಮೊಗ್ಗ ಪಾಲಿಕೆಯಿಂದ 202 ಕೋಟಿಯ ಬಜೆಟ್, ಯಾವ್ಯಾವ ಏರಿಯಾಗೆ ಏನೇನೆಲ್ಲ ಘೋಷಣೆಯಾಗಿದೆ?

ಲೈವ್ ಕರ್ನಾಟಕ.ಕಾಂ | ಶಿವಮೊಗ್ಗ

ಮಹಾನಗರ ಪಾಲಿಕೆಯ ಕೊನೆಯ ಅವಧಿಯ ಬಜೆಟ್ ಮಂಡನೆಯಾಗಿದೆ. ಶಿವಮೊಗ್ಗ ನಗರದ ಜನತೆಗೆ ಈ ಸರಿ ಭಾರೀ ಕೊಡುಗೆಯನ್ನು ನೀಡಲಾಗಿದೆ. ಚುನಾವಣೆ ವರ್ಷವಾದ್ದರಿಂದ, ಜನರನ್ನು ತಮ್ಮತ್ತ ಸೆಳೆಯುವ ಪ್ರಯತ್ನವಾಗಿ, ಹೊಸ ಹೊಸ ಯೋಜನೆಗಳನ್ನು ಘೋಷಿಸಲಾಗಿದೆ. ಅಲ್ಲದೇ, ಸ್ಮಾರ್ಟ್ ಸಿಟಿ ಯೋಜನೆ ಅಡಿ, ಶಿವಮೊಗ್ಗ ನಗರಕ್ಕೆ ನವೀನ ರೂಪ ಕೊಡುವ ಪ್ಲಾನ್ ಕೂಡ ಈ ಆಯವ್ಯಯದಲ್ಲಿ ಅಡಕವಾಗಿದೆ.

ಮಹಾನಗರ ಪಾಲಿಕೆ ಸಭಾಂಗಣದಲ್ಲಿ, ಹಣಕಾಸು, ಕಂದಾಯ, ತೆರಿಗೆ ಸ್ಥಾಯಿ ಸಮಿತಿ ಅಧ್ಯಕ್ಷ ಐಡಿಯಲ್ ಗೋಪಿ ಬಜೆಟ್ ಮಂಡಿಸಿದರು. ನಾಲ್ಕನೇ ಬಾರಿಗೆ ಪಾಲಿಕೆಯಲ್ಲಿ ಬಜೆಟ್ ಮಂಡಿಸುತ್ತಿರುವ ಹೆಗ್ಗಳಿಕೆ ಐಡಿಯಲ್ ಗೋಪಿಯವರದ್ದು.

ಪಾಲಿಕೆ ಬಜೆಟ್ ಹೈಲೈಟ್ಸ್

ಮಹಾನಗರ ಪಾಲಿಕೆಯಲ್ಲಿ ಈ ಭಾರಿ 1.10 ಕೋಟಿ ರೂಪಾಯಿ ಉಳಿತಾಯ ಬಜೆಟ್ ಮಂಡಿಸಲಾಗಿದೆ. ಇನ್ನು, ಪ್ರಸಕ್ತ  ಸಾಲಿನ ಬಜೆಟ್ ಗಾತ್ರ 202 ಕೋಟಿ ರೂಪಾಯಿ.

ಬಜೆಟ್ನಲ್ಲಿ ಬಂಪರ್ ಕೊಡುಗೆ

ಮಹಾನಗರ ಪಾಲಿಕೆಯ ಪ್ರಸಕ್ತ ಬಜೆಟ್ನಲ್ಲಿ ಶಿವಮೊಗ್ಗದ ಜನರಿಗೆ, ಬಂಪರ್ ಕೊಡುಗೆ ನೀಡಲಾಗಿದೆ. ಈ ಬಾರಿಯ ವಿಶೇಷ ಯೋಜನೆಗಳ ಪಟ್ಟಿ ಇಲ್ಲಿದೆ.

 • ನಗರದ ನಾಲ್ಕು ಇಂದಿರಾ ಕ್ಯಾಂಟೀನ್ ದುರಸ್ಥಿ ಮತ್ತು ನಿರ್ವಹಣೆಗೆ 2.50 ಕೋಟಿ
 • ಪೈಪ್ ಕಾಂಪೋಸ್ಟಿಂಗ್ ಟೆಕ್ನಾಲಜಿ, ಮಳೆಕೊಯ್ಲು ಅಳವಡಿಸಿದ ಮನೆಗಳಿಗೆ ಕಂದಾಯ ರಿಯಾಯಿತಿ
 • ನಗರದ ವಿವಿಧೆಡೆ ಹಸಿರೀಕರಣಕ್ಕೆ 12 ಲಕ್ಷ
 • ಶೇ.24.1ರ ಯೋಜನೆಯಡಿ ಪೌರಕಾರ್ಮಿಕರಿಗೆ ಆರೋಗ್ಯ ವಿಮಾ ಪಾಲಿಸಿ
 • ಬಡವರಿಗೆ ಅಡುಗೆ ಅನಿಲ ವಿತರಣೆಗೆ 25 ಲಕ್ಷ
 • ಶವ ಸಂರಕ್ಷಣೆಗೆ ಐಸ್ ಬಾಕ್ಸ್ ಖರೀದಿಗೆ 5 ಲಕ್ಷ
 • 50 ಸಾವಿರ ಪರಿಸರ ಸ್ನೇಹಿ ಬ್ಯಾಗ್ ವಿತರಣೆ
 • ಪ್ರವಾಸಿ ಮಂದಿರ, ವಸತಿಗೃಹ ನಿರ್ಮಾಣಕ್ಕೆ 90 ಲಕ್ಷ
 • ತಾರಾಲಯ ಒಳಗೊಂಡಂತೆ ವಿಜ್ಞಾನ ಕೇಂದ್ರ ನಿರ್ಮಾಣಕ್ಕೆ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ

ಸ್ಮಾರ್ಟ್ ಸಿಟಿ ಪ್ಲಾನ್

 • ತುಂಗಾ ನದಿ ದಂಡೆಯನ್ನು ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸಲು 75 ಕೋಟಿ
 • ತುಂಗಾ ಎಡದಂಡೆಯ (ಹಂತ 1) ಪ್ರದೇಶದಲ್ಲಿ ಮನೋರಂಜನಾ ತಾಣ 11 ಕೋಟಿ
 • ನಗರದ ಹೃದಯಭಾಗದ ರಸ್ತೆಗಳ ಅಭಿವೃದ್ಧಿಗೆ 84 ಕೋಟಿ
 • ನೆಹರೂ ಕ್ರೀಡಾಂಗಣದ ಅಭಿವೃದ್ಧಿಗೆ 4.85 ಲಕ್ಷ
 • ಬೀದಿ ದೀಪಗಳಿಗೆ ಎಲ್ಇಡಿ ಅಳವಡಿಕೆಗೆ 15 ಕೋಟಿ
 • ತುಂಗಾ ಮೇಲ್ದಂಡೆ ಕಾಲುವೆ ಮೇಲೆ ಸೌರ ವಿದ್ಯುತ್ ಉತ್ಪಾದನೆಗೆ 255 ಕೋಟಿ
 • ಕಮಾಂಡ್ ಕಂಟ್ರೋಲ್ ಸೆಂಟರ್ ಸ್ಥಾಪಿಸಿ ಇ-ಆಡಳಿತ ವ್ಯವಸ್ಥೆ ಸುಗಮಗೊಳಿಸಲು 46.18 ಕೋಟಿ

ಕೊನೆಯ ಅವಧಿಯ ಬಜೆಟ್ ಆಗಿದ್ದರಿಂದ, ಭರ್ಜರಿ ಕೊಡುಗೆ ಕೊಡಲಾಗಿದೆ. ಆದರೆ ಈ ಪೈಕಿ ಹಲವು ಯೋಜನೆಗಳು ಹಿಂದಿನ ಬಜೆಟ್ನಲ್ಲಿ, ಬೇರೆ ಬೇರೆ ರೂಪದಲ್ಲಿ ಪ್ರಕಟವಾಗಿದ್ದವು. ಬಹುತೇಕ ಯೋಜನೆಗಳು ಅನುಷ್ಠಾನಕ್ಕೆ ಬಂದಿಲ್ಲ.

ಲೈವ್ ಕರ್ನಾಟಕ ವಾಟ್ಸಪ್ | 7411700200

Leave a Reply

error: Content is protected !!