ಫೇಸ್‍ಬುಕ್‍ನಲ್ಲೂ ಸಿಗುತ್ತಾರೆ ಶಿವಮೊಗ್ಗ ಜಿಲ್ಲಾಧಿಕಾರಿ, ನೇರವಾಗಿ ಸಲ್ಲಿಸಬಹುದು ದೂರು ದುಮ್ಮಾನವನ್ನು

ಲೈವ್ ಕರ್ನಾಟಕ.ಕಾಂ | ಶಿವಮೊಗ್ಗ

ಇನ್ಮುಂದೆ ಶಿವಮೊಗ್ಗ ಜಿಲ್ಲಾಧಿಕಾರಿ ಭೇಟಿ ತುಂಬಾನೇ ಸುಲಭ. ನೀವಿದ್ದಲ್ಲಿಂದಲೇ ಹೇಳಿಕೊಳ್ಳಬಹುದು ನಿಮ್ಮೂರಿನ ಸಮಸ್ಯೆಯನ್ನು. ಒಂದೇ ಒಂದು ಬಟನ್ ಒತ್ತಿದರೆ ಸಿಗುತ್ತಾರೆ ಡೀಸಿ.

ಹೌದು. ಶಿವಮೊಗ್ಗ ಜಿಲ್ಲಾಧಿಕಾರಿ ಜನರಿಗೆ ಮತ್ತಷ್ಟು ಹತ್ತಿರವಾಗಿದ್ದಾರೆ. ದೂರು, ದುಮ್ಮಾನಗಳನ್ನು ಅವರಿಗೆ ನೇರವಾಗಿ ತಲುಪಿಸಬಹುದಾಗಿದೆ. ಶಿವಮೊಗ್ಗ ಡಿ.ಸಿ ಸೋಷಿಯಲ್ ಮೀಡಿಯಾಗೆ ಎಂಟ್ರಿ ಕೊಟ್ಟಿದ್ದಾರೆ. ಫೇಸ್‍ಬುಕ್‍ನಲ್ಲಿ ಡಿ.ಸಿ ಅವರ ಖಾತೆ ತೆರೆದಿದ್ದಾರೆ. ಸದ್ಯ 1750ಕ್ಕೂ ಅಧಿಕ ಮಂದಿ ಜಿಲ್ಲಾಧಿಕಾರಿ ಫೇಸ್‍ಬುಕ್‍ ಖಾತೆಗೆ ಫ್ರೆಂಡ್ ಆಗಿದ್ದಾರೆ.

ಹೇಗಿದೆ ಡೀಸಿ ಫೇಸ್‍ಬುಕ್ ಖಾತೆ?

ಶಿವಮೊಗ್ಗ ಜಿಲ್ಲಾಧಿಕಾರಿ ಡಾ.ಲೋಕೇಶ್‍, ನಾಲ್ಕು ಗೋಡೆ ಮಧ್ಯೆ ಕೆಲಸ ಮಾಡುವ ಅಧಿಕಾರಿಯಲ್ಲ. ಪ್ರತಿದಿನ ಒಂದಿಲ್ಲೊಂದು ಕಡೆ ಸಡನ್ ವಿಸಿಟ್, ಸ್ಪಾಟ್ ವಿಸಿಟ್‍ಗಳು ಇರುತ್ತವೆ. ಜಿಲ್ಲಾಧಿಕಾರಿ ಡಾ.ಲೋಕೇಶ್‍, ಯಾವಾಗ, ಎಲ್ಲಿಗೆ ದಿಢೀರ್ ಭೇಟಿ ನೀಡುತ್ತಾರೆ ಅನ್ನುವುದು ಅವರ ಕಾರು ಚಾಲಕನಿಗೂ ಗೊತ್ತಾಗುವುದಿಲ್ಲ, ಗನ್‍ಮ್ಯಾನ್‍ಗೂ ತಿಳಿಯುವುದಿಲ್ಲ. ಹೀಗೆ, ಸದಾ ಜನರ ಮಧ್ಯೆ ಇರುವ ಡಿಸಿ, ಈಗ ಇನ್ನಷ್ಟು ಹತ್ತಿರವಾಗಲು ನಿರ್ಧರಿಸಿ, ಫೇಸ್‍ಬುಕ್‍ಗೆ ಎಂಟ್ರಿ ಕೊಟ್ಟಿದ್ದಾರೆ.

ಫೇಸ್‍ಬುಕ್‍ನಲ್ಲಿ DEPUTY COMMISSIONER SHIVAMOGGA ಹೆಸರಿನಲ್ಲಿ ಫೇಸ್‍ಬುಕ್ ಖಾತೆ ತೆರೆಯಲಾಗಿದೆ. ಪ್ರೊಫೈಲ್ ಪಿಕ್ಚರ್‍ನಲ್ಲಿ ಜಿಲ್ಲಾಧಿಕಾರಿ ಡಾ.ಲೋಕೇಶ್ ಅವರ ಫೋಟೊ ಇದೆ. ಕವರ್ ಫೋಟೋದಲ್ಲಿ ಜಿಲ್ಲಾ ರಕ್ಷಣಾಧಿಕಾರಿ, ಜಿಲ್ಲಾ ಪಂಚಾಯಿತಿ ಸಿಇಓ, ಹೆಚ್ಚುವರಿ ಡಿಸಿ ಸೇರಿದಂತೆ ಅಧಿಕಾರಿಗಳ ಟೀಮ್‍ ಜೊತೆಗೆ, ಜಿಲ್ಲಾಧಿಕಾರಿ ಡಾ.ಲೋಕೇಶ್‍ ಅವರು, ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮೀಟಿಂಗ್ ನಡೆಸಿದ ಫೋಟೊ ಅಪ್‍ಲೋಡ್ ಮಾಡಲಾಗಿದೆ.

ನಾಗರೀಕರೊಬ್ಬರು ಜಿಲ್ಲಾಧಿಕಾರಿಗೆ ಫೇಸ್‍ಬುಕ್‍ ಮೂಲಕ ದೂರು ಸಲ್ಲಿಸಿರುವುದು

ಡಿ.ಸಿ.ಫೇಸ್‍ಬುಕ್‍ನಲ್ಲಿ ಏನೇನೆಲ್ಲ ಅಪ್‍ಲೋಡ್ ಆಗಿದೆ?

ಜಿಲ್ಲಾಧಿಕಾರಿ ಅವರ ಫೇಸ್‍ಬುಕ್‍ ಖಾತೆಯಲ್ಲಿ ಪ್ರಮುಖ ಮೀಟಿಂಗ್‍ಗಳ ಫೋಟೊ, ಸ್ಪಾಟ್ ವಿಸಿಟ್‍ನ ಭಾವಚಿತ್ರ ಮತ್ತು ಅವುಗಳಿಗೆ ಸಂಬಂಧಿಸಿದ ಮಾಹಿತಿಗಳನ್ನು ಅಪ್‍ಲೋಡ್ ಮಾಡಲಾಗುತ್ತಿದೆ. ಇದರಿಂದ ಜಿಲ್ಲಾಧಿಕಾರಿಗಳ ಕೆಲಸ ಕಾರ್ಯದ ಅಪ್‍ಡೇಟ್ ಸಾರ್ವಜನಿಕರಿಗೆ ಸುಲಭವಾಗಿ ಲಭ್ಯವಾಗುತ್ತಿದೆ. ಇನ್ನು, ಜಿಲ್ಲಾಧಿಕಾರಿ ಫೇಸ್‍ಬುಕ್ ಖಾತೆ ತೆರಯುತ್ತಿದ್ದಂತೆ, ಸಾರ್ವಜನಿಕರು ಸ್ಪಂದಿಸಲು ಆರಂಭಿಸಿದ್ದಾರೆ. ಫ್ರೆಂಡ್ ರಿಕ್ವೆಸ್ಟ್ ಗಳಷ್ಟೇ ಅಲ್ಲ, ತಮ್ಮೂರಿನ ದೂರು, ದುಮ್ಮಾನಗಳನ್ನು ಜಿಲ್ಲಾಧಿಕಾರಿ ಗಮನಕ್ಕೆ ತರಲು ಆರಂಭಿಸಿದ್ದಾರೆ.

ಜನರ ಮಧ್ಯೆಯೇ ಇರುವ ಜಿಲ್ಲಾಧಿಕಾರಿ, ಈಗ ಸೋಷಿಯಲ್ ಮೀಡಿಯಾ ಮೂಲಕ ಮತ್ತಷ್ಟು ಹತ್ತಿರವಾಗಿದ್ದಾರೆ. ಜನರ ಅಹವಾಲುಗಳನ್ನು ನೇರವಾಗಿ ಪರಿಹರಿಸಲು ಮುಂದಾಗಿದ್ದಾರೆ.

ಲೈವ್ ಕರ್ನಾಟಕ ವಾಟ್ಸಪ್ | 7411700200

(ವಾಟ್ಸಪ್ ಮಾಡಿ, ಶಿವಮೊಗ್ಗದ ನ್ಯೂಸ್ ಪಡೆಯಿರಿ. ನಾವು ವಾಟ್ಸಪ್ ಗ್ರೂಪ್ ಮಾಡುವುದಿಲ್ಲ. ನಿಮಗೆ ಪ್ರತ್ಯೆಕವಾಗಿ ನ್ಯೂಸ್ ಕಳುಹಿಸುತ್ತೇವೆ. ಇನ್ನು, ನಿಮ್ಮೂರಿನ ಕಾರ್ಯಕ್ರಮಗಳು, ಸಭೆ, ಸಮಾರಂಭಗಳು, ನ್ಯೂಸ್ ಆಗುವಂತಹ ಘಟನೆಗಳಿದ್ದರೆ, ಕೂಡಲೇ ನಮಗೆ ವಾಟ್ಸಪ್ ಮಾಡಿ. ಸುಳ್ ಸುದ್ದಿಗಳನ್ನು ಕಳುಹಿಸಬೇಡಿ, ನಾವು ಅಂತಹ ಸುದ್ದಿ ಪ್ರಕಟಿಸುವುದಿಲ್ಲ)

One Response

  1. shafi February 23, 2018

Leave a Reply

error: Content is protected !!