ವಿಷ ಸೇವಿಸಿ ಸೆಲ್ಫಿ ವಿಡಿಯೋ ಮಾಡಿದ್ದ ಟಿಪ್ಪು ನಗರದ ಬಿಂದಾಸ್ ನೂರುಲ್ಲಾ ಸಾವು

ಲೈವ್ ಕರ್ನಾಟಕ.ಕಾಂ | ಶಿವಮೊಗ್ಗ

ವಿಷ ಸೇವಿಸಿ, ಸೆಲ್ಫಿ ವಿಡಿಯೋ ಮಾಡಿಟ್ಟು ಆತ್ಮಹತ್ಯೆಗೆ ಯತ್ನಿಸಿದ್ದ ಶಿವಮೊಗ್ಗದ ಆಟೋ ಚಾಲಕರೊಬ್ಬರು ಇವತ್ತು ಕೊನೆ ಉಸಿರೆಳೆದಿದ್ದಾರೆ. ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣದ ಜಿಲ್ಲಾಧ್ಯಕ್ಷ ಮಂಜುನಾಥ್ ಕೊಟ್ಯಾನ್ ಕಿರುಕುಳವೇ ಆತ್ಮಹತ್ಯೆಗೆ ಕಾರಣ ಎಂದು ಆಟೋ ಚಾಲಕ ವಿಡಿಯೋದಲ್ಲಿ ಆರೋಪಿಸಿದ್ದರು.

ಶಿವಮೊಗ್ಗದ ಟಿಪ್ಪು ನಗರ ನಿವಾಸಿ ಬಿಂದಾಸ್ ನೂರುಲ್ಲಾ ಮೃತ ದುರ್ದೈವಿ. ಜನವರಿ 11ರಂದು ನೂರುಲ್ಲಾ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ಅಲ್ಲದೇ ತಮ್ಮ ಆತ್ಮಹತ್ಯೆಗೆ ಕಾರಣವೇನು ಎಂಬುದನ್ನು ಸೆಲ್ಫಿ ವಿಡಿಯೋ ಮಾಡಿದ್ದರು. ಈ ವಿಡಿಯೋ ಶಿವಮೊಗ್ಗದಲ್ಲಿ ವೈರಲ್ ಆಗಿತ್ತು. ಇನ್ನು, ವಿಷ ಸೇವಿಸಿದ್ದ ನೂರುಲ್ಲಾ ಅವರನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗಿದೆ, ನೂರುಲ್ಲಾ ಇವತ್ತು ಕೊನೆ ಉಸಿರೆಳೆದಿದ್ದಾರೆ.

ಸೆಲ್ಫಿ ವಿಡಿಯೋದಲ್ಲಿ ಏನೇನು ಹೇಳಿದ್ದರು..?

ಕರ್ನಾಟಕ ರಕ್ಷಣಾ ವೇದಿಕೆಯ ಪ್ರವೀಣ್ ಶೆಟ್ಟಿ ಬಣದಲ್ಲಿ ಕಾರ್ಯಕರ್ತನಾಗಿದ್ದೆ. ಕರ್ನಾಟಕ ರಾಜ್ಯೋತ್ಸವ ಮಾಡುವ ಸಲುವಾಗಿ, ಸುಮಾರು ಒಂದೂವರೆ ಲಕ್ಷ ಹಣ ಸಂಗ್ರಹಿಸಲಾಗಿತ್ತು. ಆದರೆ ರಾಜ್ಯೋತ್ಸವ ಕಾರ್ಯಕ್ರಮ ಮಾಡಲಿಲ್ಲ. ಆಟೋ ಖರೀದಿಗಾಗಿ ಸುಮಾರು 15 ಸಾವಿರ ಸಾಲ ಬೇಕಾಗಿತ್ತು. ಕರವೇ ಪ್ರವೀಣ್​ ಶೆಟ್ಟಿ ಬಣದ ಅಧ್ಯಕ್ಷ ಮಂಜುನಾಥ ಕೊಟ್ಯಾನ್ ಸಂಗ್ರಹವಾದ ಹಣದಿಂದಲೇ ಸಾಲ ನೀಡಿದ್ದರು. ಆ ಬಳಿಕ ನಾನು ಪ್ರವೀಣ್ ಶೆಟ್ಟಿ ಬಣ ತೊರೆದು, ನಾರಾಯಣಗೌಡರ ಬಣಕ್ಕೆ ಬಂದೆ. ಇದನ್ನು ಸಹಿಸದೇ ಮಂಜುನಾಥ ಕೊಟ್ಯಾನ್ ಹಣ ಹಿಂದಿರುಗಿಸುವಂತೆ ಪೀಡಿಸಿದರು. 15 ಸಾವಿರಕ್ಕೆ 20 ಸಾವಿರ ರೂಪಾಯಿ ಕೊಡುವಂತೆ ಕಿರುಕುಳ ನೀಡಿದರು. ಇದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಅಂತಾ ನೂರುಲ್ಲಾ ಸೆಲ್ಫಿ ವಿಡಿಯೋದಲ್ಲಿ ಹೇಳಿದ್ದರು.

ಯಾರು ಈ ಬಿಂದಾಸ್ ನೂರುಲ್ಲಾ?

ಶಿವಮೊಗ್ಗದ ಬಹುತೇಕರು ಬಿಂದಾಸ್ ನೂರುಲ್ಲಾ ಅವರನ್ನು ನೋಡಿರುತ್ತಾರೆ. ಅವರ ಆಟೋವನ್ನಂತು ಎಲ್ಲರೂ ಅಚ್ಚರಿಯಿಂದಲೇ ಗಮನಿಸಿರುತ್ತಾರೆ. ಯಾಕೆಂದರೆ ಬಿಂದಾಸ್ ನೂರುಲ್ಲಾ ಅವರ ಆಟೋದ ತುಂಬಾ, ಕನ್ನಡ, ಕರ್ನಾಟಕದ ಕುರಿತು ಫೋಟೊಗಳಿದ್ದವು. ಸಾಹಿತಿಗಳು ಭಾವಚಿತ್ರಗಳು ರಾರಾಜಿಸುತ್ತಿದ್ದವು. ಇದೇ ಆಟೋದಿಂದ ನೂರುಲ್ಲಾ ಫುಲ್ ಫೇಮಸ್ ಆಗಿದ್ದರು. ವಿಪರ್ಯಾಸ ಅಂದರೆ ಅದೇ ಆಟೋಗೆ ಸಾಲ ಮಾಡಿಕೊಂಡು, ಸಾಲ ಕೊಟ್ಟವರ ಕಿರುಕುಳಕ್ಕೆ ಬೇಸತ್ತು ವಿಷ ಸೇವಿಸಿ, ಸಾವನ್ನಪ್ಪಿದ್ದಾರೆ. [ಬಿಂದಾಸ್ ನೂರುಲ್ಲಾ ಆಟೋ ಹೇಗಿತ್ತು? ಕ್ಲಿಕ್ ಮಾಡಿ ಫುಲ್ ವಿಡಿಯೋ ನೋಡಿ]

ಈ ಕುರಿತು ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ಬಿಂದಾಸ್ ನೂರುಲ್ಲಾ ಹೇಳಿದ್ದೇನು? ಇಲ್ಲಿದೆ ಫುಲ್ ವಿಡಿಯೋ

ಲೈವ್ ಕರ್ನಾಟಕ ವಾಟ್ಸಪ್ | 7411700200

(ವಾಟ್ಸಪ್ ಮಾಡಿ, ಶಿವಮೊಗ್ಗದ ನ್ಯೂಸ್ ಪಡೆಯಿರಿ. ನಾವು ವಾಟ್ಸಪ್ ಗ್ರೂಪ್ ಮಾಡುವುದಿಲ್ಲ. ನಿಮಗೆ ಪ್ರತ್ಯೆಕವಾಗಿ ನ್ಯೂಸ್ ಕಳುಹಿಸುತ್ತೇವೆ. ಇನ್ನು, ನಿಮ್ಮೂರಿನ ಕಾರ್ಯಕ್ರಮಗಳು, ಸಭೆ, ಸಮಾರಂಭಗಳು, ನ್ಯೂಸ್ ಆಗುವಂತಹ ಘಟನೆಗಳಿದ್ದರೆ, ಕೂಡಲೇ ನಮಗೆ ವಾಟ್ಸಪ್ ಮಾಡಿ. ಸುಳ್ ಸುದ್ದಿಗಳನ್ನು ಕಳುಹಿಸಬೇಡಿ, ನಾವು ಅಂತಹ ಸುದ್ದಿ ಪ್ರಕಟಿಸುವುದಿಲ್ಲ)

Leave a Reply

error: Content is protected !!