ಗೋಪಿ ಸರ್ಕಲ್​ನಲ್ಲಿ ಸಾವಿರಾರು ಜನರಿಂದ ಮಾನವ ಸರಪಳಿ

ಲೈವ್ ಕರ್ನಾಟಕ.ಕಾಂ | ಶಿವಮೊಗ್ಗ

‘ಸೌಹಾರ್ದತೆಗಾಗಿ ಕರ್ನಾಟಕ’ ಘೋಷವಾಕ್ಯದೊಂದಿಗೆ ರಾಜ್ಯವ್ಯಾಪಿ ಮಾನವ ಸರಪಳಿ ನಿರ್ಮಿಸಿ ಸೌಹಾರ್ದತೆಯ ಅಗತ್ಯವನ್ನು ಸಾರಲಾಯಿತು. ಅದೇ ರೀತಿ ಶಿವಮೊಗ್ಗದಲ್ಲಿಯೂ ಸಾವಿರಾರು ಮಂದಿ ಸೌಹಾರ್ದ ಮಾನವ ಸರಪಳಿ ರಚಿಸಿದರು.

ಶಿವಮೊಗ್ಗದ ಗೋಪಿ ಸರ್ಕಲ್​ನಲ್ಲಿ ಮಾನವ ಸರಪಳಿ ರಚಿಸಲಾಯಿತು. ಸಾರ್ವಜನಿಕರು, ಚಿಂತಕರು, ಸ್ವಾಮೀಜಿಗಳು, ಪಾದ್ರಿಗಳು, ಮೌಲ್ವಿಗಳು, ವಿದ್ಯಾರ್ಥಿಗಳು ಸೇರಿದಂತೆ ಸಾವಿರಾರು ಜನರು ಇದರಲ್ಲಿ ಪಾಲ್ಗೊಂಡಿದ್ದರು. ಶಾಸಕ ಪ್ರಸನ್ನಕುಮಾರ್ ಸೇರಿದಂತೆ ರಾಜಕೀಯ ಪಕ್ಷದ ಪ್ರಮುಖರು ಕೂಡ ಪಾಲ್ಗೊಂಡಿದ್ದರು.

ಕರ್ನಾಟಕ ಶಾಂತಿಯ ತೋಟ

ಇದೇ ಸಂದರ್ಭ ಮಾತನಾಡಿದ ಚಿಂತಿಕ ಪ್ರೊ.ರಾಜೇಂದ್ರ ಚೆನ್ನಿ, ಕರ್ನಾಟಕ ಶಾಂತಿ, ಸೌಹಾರ್ದತೆಗೆ ಹೆಸರಾಗಿದೆ. ಇದು ಸರ್ವಜನಾಂಗದ ಶಾಂತಿಯ ತೋಟ. ಇತ್ತೀಚಗೆ ಇಲ್ಲಿ ಕೋಮು ಸೌಹಾರ್ದ ಕದಡುವ ಪ್ರಯತ್ನ ನಡೆಯುತ್ತಿದೆ. ಇದಕ್ಕೆ ಆಸ್ಪದ ನೀಡದೆ, ಶಾಂತಿ ಕಾಪಾಡಬೇಕು ಎಂದು ಮನವಿ ಮಾಡಿದರು.

ಇದೇ ಸಂದರ್ಭ, ಮಾನವ ಸರಪಳಿ ರಚಿಸಿದ್ದ ಸಾವಿರಾರು ಜನರು ಶಾಂತಿ ಸೌಹಾರ್ದತೆ ಕದಡಲು ಆಸ್ಪದ ನೀಡುವುದಿಲ್ಲ ಮತ್ತು ಕರ್ನಾಟಕದ ಸೌಹಾರ್ದ ಪರಂಪರೆಯನ್ನು ಕಾಪಾಡುವ ಪ್ರತಿಜ್ಞೆ ಸ್ವೀಕರಿಸಿದರು.

ಲೈವ್ ಕರ್ನಾಟಕ ವಾಟ್ಸಪ್ | 7411700200

(ವಾಟ್ಸಪ್ ಮಾಡಿ, ಶಿವಮೊಗ್ಗದ ನ್ಯೂಸ್ ಪಡೆಯಿರಿ. ನಾವು ವಾಟ್ಸಪ್ ಗ್ರೂಪ್ ಮಾಡುವುದಿಲ್ಲ. ನಿಮಗೆ ಪ್ರತ್ಯೆಕವಾಗಿ ನ್ಯೂಸ್ ಕಳುಹಿಸುತ್ತೇವೆ. ಇನ್ನು, ನಿಮ್ಮೂರಿನ ಕಾರ್ಯಕ್ರಮಗಳು, ಸಭೆ, ಸಮಾರಂಭಗಳು, ನ್ಯೂಸ್ ಆಗುವಂತಹ ಘಟನೆಗಳಿದ್ದರೆ, ಕೂಡಲೇ ನಮಗೆ ವಾಟ್ಸಪ್ ಮಾಡಿ. ಸುಳ್ ಸುದ್ದಿಗಳನ್ನು ಕಳುಹಿಸಬೇಡಿ, ನಾವು ಅಂತಹ ಸುದ್ದಿ ಪ್ರಕಟಿಸುವುದಿಲ್ಲ)

Leave a Reply

error: Content is protected !!