ಅತೀ ಹೆಚ್ಚು ರೌಡಿಶೀಟರ್​​ಗಳನ್ನು ಹೊಂದಿರುವ ಜಿಲ್ಲೆಗಳ ಪಟ್ಟಿಯಲ್ಲಿ ಶಿವಮೊಗ್ಗಕ್ಕೆ ಎರಡನೇ ಸ್ಥಾನ

ಲೈವ್ ಕರ್ನಾಟಕ.ಕಾಂ | ಶಿವಮೊಗ್ಗ

ರಾಜ್ಯದಲ್ಲಿ ಅತೀ ಹೆಚ್ಚು ರೌಡಿಶೀಟರ್​ಗಳಿರುವ ಜಿಲ್ಲೆಗಳ ಪೈಕಿ, ಶಿವಮೊಗ್ಗಕ್ಕೆ ಎರಡನೇ ಸ್ಥಾನ. ಚುನಾವಣೆ ಸಮೀಪಿಸುತ್ತಿರುವುದರಿಂದ, ರೌಡಿಶೀಟರ್​ಗಳ ಮೇಲೆ ನಿಗಾ ಹೆಚ್ಚಾಗಿದೆ. ಪ್ರತೀ ಬೂತ್ ಮಟ್ಟದಲ್ಲೂ ರೌಡಿಶೀಟರ್​​ಗಳ ಮೇಲೆ ಪೊಲೀಸರು ಕಣ್ಗಾವಲು ಇರಿಸಿದ್ದಾರೆ.

ಕಲಬುರ್ಗಿ ಹೊರತುಪಡಿಸಿ ಶಿವಮೊಗ್ಗ ಜಿಲ್ಲೆಯಲ್ಲಿಯೇ ಅತೀ ಹೆಚ್ಚು ರೌಡಿಶೀಟರ್​ಗಳಿದ್ದಾರೆ. ಶಿವಮೊಗ್ಗ ಜಿಲ್ಲೆಯಲ್ಲಿ 2700 ರೌಡಿಶೀಟರ್​ಗಳಿದ್ದಾರೆ. ಕೋಮುಭಾವನೆ ಕೆರಳಿಸುವ 150 ಗೂಂಡಾಗಳೂ ಇದ್ದಾರೆ. ಚುನಾವಣೆ ಹಿನ್ನೆಲೆಯಲ್ಲಿ ಕಳೆದ ಎಂಟು ತಿಂಗಳಿಂದ ಇವರ ಮೇಲೆ ನಿಗಾ ಇರಿಸಲಾಗಿದೆ. ಜಿಲ್ಲೆಯಲ್ಲಿ 1721 ಬೂತ್​ಗಳಿವೆ. ಪ್ರತೀ ಬೂತ್​ ಮಟ್ಟದಲ್ಲೂ ರೌಡಿ ಶೀಟರ್​​ಗಳು, ಗೂಂಡಾಗಳ ಮೇಲೆ ಕಣ್ಣಿಡಲಾಗಿದೆ.

ಬೆಂಗಳೂರು ದೊಡ್ಡ ನಗರ. ಅದನ್ನು ಹೊರತುಪಡಿಸಿದರೆ. ಕಲಬುರ್ಗಿಯಲ್ಲಿ ಅತೀ ಹೆಚ್ಚು ರೌಡಿಶೀಟರ್​ಗಳಿದ್ದಾರೆ. ಆ ನಂತರದ ಸ್ಥಾನ ಶಿವಮೊಗ್ಗ ಜಿಲ್ಲೆಯದ್ದು. ಚುನಾವಣೆ ಸಂದರ್ಭ ಗೂಂಡಾಗಳು, ರೌಡಿಶೀಟರ್​ಗಳಿಂದ ಸಮಸ್ಯೆಯಾದರೆ ಯಾವ ಪಕ್ಷದವರು ದೂರು ನೀಡಿದರೂ ಕ್ರಮ ಕೈಗೊಳ್ಳುತ್ತೇವೆ.

ಅಭಿನವ್ ಖರೆ, ಜಿಲ್ಲಾ ರಕ್ಷಣಾಧಿಕಾರಿ

ಶಸ್ತ್ರಾಸ್ತ್ರಗಳ ಪರಿಶೀಲನೆ ಕಂಪ್ಲೀಟ್​

ಚುನಾವಣೆ ಸಮೀಪಿಸುತ್ತಿರುವುದರಿಂದ ಶಸ್ತ್ರಾಸ್ತ್ರಗಳನ್ನು ಜಪ್ತಿ ಮಾಡಿಕೊಳ್ಳಲಾಗುತ್ತಿದೆ. ಅದಕ್ಕೂ ಮುಂಚೆ ಪೊಲೀಸರು ಶಸ್ತ್ರಾಸ್ತ್ರಗಳನ್ನ ಪರೀಶಲನೆ ನಡೆಸುತ್ತಿದ್ದಾರೆ. ಜಿಲ್ಲೆಯಾದ್ಯಂತ ಶೇ.85ರಷ್ಟು ಪರಿಶೀಲನೆ ಮುಗಿದಿದೆ ಎಂದು ಜಿಲ್ಲಾ ರಕ್ಷಣಾಧಿಕಾರಿ ಅಭಿನವ್ ಖರೆ ತಿಳಿಸಿದರು.

ಲೈವ್ ಕರ್ನಾಟಕ ವಾಟ್ಸಪ್ | 7411700200

(ವಾಟ್ಸಪ್ ಮಾಡಿ, ಶಿವಮೊಗ್ಗದ ನ್ಯೂಸ್ ಪಡೆಯಿರಿ. ನಾವು ವಾಟ್ಸಪ್ ಗ್ರೂಪ್ ಮಾಡುವುದಿಲ್ಲ. ನಿಮಗೆ ಪ್ರತ್ಯೆಕವಾಗಿ ನ್ಯೂಸ್ ಕಳುಹಿಸುತ್ತೇವೆ. ಇನ್ನು, ನಿಮ್ಮೂರಿನ ಕಾರ್ಯಕ್ರಮಗಳು, ಸಭೆ, ಸಮಾರಂಭಗಳು, ನ್ಯೂಸ್ ಆಗುವಂತಹ ಘಟನೆಗಳಿದ್ದರೆ, ಕೂಡಲೇ ನಮಗೆ ವಾಟ್ಸಪ್ ಮಾಡಿ. ಸುಳ್ ಸುದ್ದಿಗಳನ್ನು ಕಳುಹಿಸಬೇಡಿ, ನಾವು ಅಂತಹ ಸುದ್ದಿ ಪ್ರಕಟಿಸುವುದಿಲ್ಲ)

Leave a Reply

error: Content is protected !!