ಶಿವಮೊಗ್ಗದ ಮಲ್ಟಿಪ್ಲೆಕ್ಸ್​​​ಗೆ ಎರಡು ವಾರ, ಗೋಲ್ಮಾಲ್​​ಗೆ ಭರ್ಜರಿ ರೆಸ್ಪಾನ್ಸ್, ಕನ್ನಡಕ್ಕೆ ಪ್ರೇಕ್ಷಕರು ಡಲ್

ಶಿವಮೊಗ್ಗ : ಮಹಾನಗರಗಳ ಹಾಗೆ, ಮಲೆನಾಡ ಹೆಬ್ಬಾಗಿಲಲ್ಲೂ ಮಲ್ಟಿಪ್ಲೆಕ್ಸ್​ಗೆ ಭರ್ಜರಿ ರೆಸ್ಪಾನ್ಸ್ ಸಿಗಲು ಆರಂಭವಾಗಿದೆ. ಎರಡೇ ವಾರದಲ್ಲಿ ವೀಕ್ಷಕರ ಸಂಖ್ಯೆಯಲ್ಲಿ ಭಾರೀ ಏರಿಕೆ ಕಂಡು ಬಂದಿದೆ. ವಿಷಾದದ ಸಂಗತಿ ಅಂದರೆ ಕನ್ನಡ ಸಿನಿಮಾಗಳಿಗೆ ನಿರೀಕ್ಷಿಸಿದ ಮಟ್ಟಿಗೆ ಜನರು ಬರುತ್ತಿಲ್ಲ. ಇದೇ ಕಾರಣಕ್ಕೆ ಶೋಗಳು ಕೂಡ ಕ್ಯಾನ್ಸಲ್ ಆಗಿದ್ದಿದೆ.

ಸಿಟಿ ಸೆಂಟರ್​​ ಮಾಲ್​​ನಲ್ಲಿ ಶಿವಮೊಗ್ಗದ ಮೊದಲ ಮಲ್ಟಿಪ್ಲೆಕ್ಸ್ ಆರಂಭವಾಗಿದೆ. ಒಂದೇ ಸೂರಿನಡಿ ಇಲ್ಲಿ ನಾಲ್ಕು

ಶಿವಮೊಗ್ಗದ ಮಲ್ಟಿಪ್ಲೆಕ್ಸ್​

ಚಿತ್ರಮಂದಿರಗಳಿವೆ. ಪ್ರತೀ ದಿನ ನಾಲ್ಕು ವಿಭಿನ್ನ ಸಿನಿಮಾಗಳ ಐದೈದು ಶೋ ಇರುತ್ತದೆ. ಇನ್ನು, ಮಂಗಳೂರಿನಲ್ಲಿ ಮಲ್ಟಿಪ್ಲೆಕ್ಸ್ ನಿರ್ವಹಿಸಿ, ಅನುಭವ ಹೊಂದಿರುವ ಭಾರತ್ ಸಿನಿಮಾಸ್​, ಶಿವಮೊಗ್ಗದ ಜನರಿಗೂ ಮಲ್ಟಿಪ್ಲೆಕ್ಸ್​ನ ಫೀಲ್ ನೀಡುತ್ತಿದೆ. ಆರಂಭವಾಗಿ ಎರಡು ವಾರದಲ್ಲಿ, ಭಾರತ್ ಸಿನಿಮಾಸ್​ನ ಮಲ್ಟಿಪ್ಲೆಕ್ಸ್​​ನ ಕಡೆಗೆ ಬರುವ ಚಿತ್ರರಸಿಕರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.

ವೀಕೆಂಡ್​ನಲ್ಲಿ ಜನವೋ ಜನ : ಮಲ್ಟಿಪ್ಲೆಕ್ಸ್​ಗೆ ಬರುವ ಪ್ರೇಕ್ಷಕರ ಸಂಖ್ಯೆ ಉಳಿದ ವಾರಕ್ಕಿಂತಲೂ ವೀಕೆಂಡ್​ನಲ್ಲೇ ಹೆಚ್ಚು ಅನ್ನುತ್ತಾರೆ ಮಲ್ಟಿಪ್ಲೆಕ್ಸ್​ನ ಸಿಬ್ಬಂದಿ. ಶುಕ್ರವಾರ, ಶನಿವಾರ ಮತ್ತು ಭಾನುವಾರದಂದು ಕುಟುಂಬ ಸಹಿತವೋ, ಸ್ನೇಹಿತರ ಜೊತೆಗೋ ಬಂದು ಸಿನಿಮಾ ನೋಡುತ್ತಿದ್ದಾರೆ. ಇನ್ನು, ಎಲ್ಲಾ ಚಿತ್ರಮಂದಿರಗಳ ಹಾಗೆ ಸ್ಥಳದಲ್ಲೇ ಟಿಕೆಟ್ ವಿತರಿಸುವ ವ್ಯವಸ್ಥೆ ಇಲ್ಲಿದೆ. ಆದರೂ ಚಿತ್ರಪ್ರೇಮಿಗಳು ಆನ್​ಲೈನ್ ಮೂಲಕ ಟಿಕೆಟ್ ಬುಕ್ಕಿಂಗ್ ಮಾಡಿಕೊಳ್ಳುತ್ತಿದ್ದಾರೆ. ಬುಕ್ ಮೈ ಷೋ ಮೂಲಕ ಟಿಕೆಟ್ ಬುಕ್ ಮಾಡಿಕೊಂಡು ಬರುವವರ ಸಂಖ್ಯೆಯೇ ಹೆಚ್ಚಿದೆ ಅನ್ನುತ್ತಾರೆ ಭಾರತ್ ಸಿನಿಮಾಸ್​ನ ಸಿಬ್ಬಂದಿ.

ಕನ್ನಡ ಸಿನಿಮಾಗಳ ಕಲೆಕ್ಷನ್ ಡಲ್ : ಮಲ್ಟಿಪ್ಲೆಕ್ಸ್​ನಲ್ಲಿ ಕನ್ನಡ ಸೇರಿದಂತೆ ಬೇರೆ ಭಾಷೆಗಳ ಸಿನಿಮಾಗಳು ಒಟ್ಟಿಗೆ ಪ್ರದರ್ಶನಗೊಳ್ಳುತ್ತಿದೆ. ಆದರೂ ಎರಡು ವಾರದಲ್ಲಿ ಕನ್ನಡ ಚಿತ್ರಗಳಿಗೆ ಬಂದ ಪ್ರೇಕ್ಷಕರ ಸಂಖ್ಯೆ ಕಡಿಮೆ ಅನ್ನುತ್ತಾರೆ ಹೆಸರು ಬಹಿರಂಗಪಡಿಸಲು ಇಚ್ಛಿಸದ ಭಾರತ್ ಸಿನಿಮಾಸ್​ನ ಸಿಬ್ಬಂದಿ. ಇದೇ ಕಾರಣಕ್ಕೆ ಕೆಲವು ದಿನ ಕನ್ನಡ ಸಿನಿಮಾಗಳ ಮಾರ್ನಿಂಗ್ ಶೋಗಳನ್ನು ಕ್ಯಾನ್ಸಲ್ ಮಾಡಬೇಕಾಯಿತು ಎಂದು ತಿಳಿಸಿದರು. ಆದರೆ ವೀಕೆಂಡ್​​ನಲ್ಲಿನ ಟ್ರೆಂಡ್ ಸ್ವಲ್ಪ ಭಿನ್ನ. ಶುಕ್ರವಾರದಿಂದ ಭಾನುವಾರದವರೆಗೆ ಕನ್ನಡ ಸಿನಿಮಾಗಳು ಭರ್ಜರಿ ಪ್ರದರ್ಶನ ಕಾಣುತ್ತಿವೆಯಂತೆ. ಈವರೆಗೂ ಸತ್ಯ ಹರಿಶ್ಚಂದ್ರ, ದಯವಿಟ್ಟು ಗಮನಿಸಿ, ಕಟಕ, ನಿಶಬ್ದ 2 ಕನ್ನಡ ಚಿತ್ರಗಳು ಈ ಮಲ್ಟಿಪ್ಲೆಕ್ಸ್​ನಲ್ಲಿ ಪ್ರದರ್ಶನವಾಗಿದೆ.

Must Read: ಇದೆಂಥಾ ಅಗೌರವ? ದೇಶದ ಧ್ವಜವನ್ನೇ ಕತ್ತಲೆಯಲ್ಲಿಟ್ಟಿದೆ ಶಿವಮೊಗ್ಗ ಜಿಲ್ಲಾಡಳಿತ

ಇನ್ನು, ಹಿಂದಿ ಮತ್ತು ಇಂಗ್ಲೀಷ್ ಸಿನಿಮಾಗೆ ಭರ್ಜರಿ ಪ್ರೇಕ್ಷಕರು ಬರುತ್ತಿದ್ದಾರೆ. ಇಂಗ್ಲೀಷ್​ನ ಜಿಯೋ ಸ್ಟಾರ್ಮ್ 3ಡಿ ಚಿತ್ರಕ್ಕೆ ಪ್ರೇಕ್ಷಕರ ರೆಸ್ಪಾನ್ಸ್ ಚೆನ್ನಾಗಿದೆಯಂತೆ. ಹಿಂದಿಯ ಗೋಲ್ಮಾಲ್ ಅಗೇನ್​ಗೆ ಭಾರೀ ಸಂಖ್ಯೆಯಲ್ಲಿ ಪ್ರೇಕ್ಷಕರು ಬರುತ್ತಿದ್ದಾರೆ ಎನ್ನುತ್ತಾರೆ ಸಿಬ್ಬಂದಿ. ಒಟ್ಟಿನಲ್ಲಿ, ಶಿವಮೊಗ್ಗದ ಚಿತ್ರಪ್ರೇಮಿಗಳು ಮಲ್ಟಿಪ್ಲೆಕ್ಸ್​ನತ್ತ  ನಿಧಾನಕ್ಕೆ ಅಡಿಕ್ಟ್ ಆಗುತ್ತಿದ್ದಾರೆ. ಮತ್ತಷ್ಟು ಮಲ್ಟಿಪ್ಲೆಕ್ಸ್​ಗಳ ಆರಂಭಕ್ಕೆ ಇದು ಮುನ್ನುಡಿ ಬರೆದರೂ ಆಶ್ಚರ್ಯವಿಲ್ಲ.

Leave a Reply

error: Content is protected !!