ಶಿವಮೊಗ್ಗ ಜಯನಗರ ಪೊಲೀಸ್ ಸ್ಟೇಷನ್​​ಗೆ ಹೊಸ ಕಟ್ಟಡ, ಸ್ಥಳ ಪರಿಶೀಲನೆ ನಡೆಸಿದ ಜಿಲ್ಲಾ ರಕ್ಷಣಾಧಿಕಾರಿ

ಲೈವ್ ಕರ್ನಾಟಕ.ಕಾಂ | ಶಿವಮೊಗ್ಗ

ಜಯನಗರ ಪೊಲೀಸ್ ಠಾಣೆಯ ನೂತನ ಕಟ್ಟಡ ನಿರ್ಮಾಣಕ್ಕೆ ಮುಹೂರ್ತ ಫಿಕ್ಸ್ ಆಗಿದೆ. ಸೋಮವಾರ ಬೆಳಗ್ಗೆ 10 ಗಂಟೆಗೆ ಸ್ಟೇಷನ್ ನೂತನ ಕಟ್ಟಡದ ಗುದ್ದಲಿ ಪೂಜೆ ನೆರವೇರಲಿದೆ.

ಜಿಲ್ಲಾಧಿಕಾರಿ ಕಚೇರಿ ಹಿಂಭಾಗ, ಆರ್​ಟಿಓ ಕಚೇರಿ ಪಕ್ಕದಲ್ಲಿ ಜಯನಗರ ಪೊಲೀಸ್ ಠಾಣೆಗೆ ನೂತನ ಕಟ್ಟಡ ನಿರ್ಮಿಸಲಾಗುತ್ತಿದೆ. ಇನ್ನು, ಸ್ಟೇಷನ್ ಹೇಗಿರುತ್ತೆ, ಎಲ್ಲೆಲ್ಲಿ ಏನೇನು ಬರುತ್ತೆ ಅನ್ನುವ ಕುರಿತು ಜಿಲ್ಲಾ ರಕ್ಷಣಾಧಿಕಾರಿ ಅಭಿನವ್ ಖರೆ ಸ್ಥಳ ಪರಿಶೀಲನೆ ನಡೆಸಿದರು.

ಶನಿವಾರ ಸ್ಥಳ ಪರಿಶೀಲನೆ ನಡೆಸಿದ ಜಿಲ್ಲಾ ರಕ್ಷಣಾಧಿಕಾರಿ ಅಭಿನವ್ ಖರೆ, ಆ ಬಳಿಕ ಗುದ್ದಲಿ ಪೂಜೆಗೆ ಅನುಮತಿ ನೀಡಿದರು.

ಈಗಿನ ಜಿಲ್ಲಾಧಿಕಾರಿ ಕಚೇರಿ ಇರುವ ಜಾಗದಲ್ಲಿ ಜಯನಗರ ಪೊಲೀಸ್ ಠಾಣೆಯ ಕಟ್ಟಡವಿತ್ತು. ಹೊಸ ಡೀಸಿ ಆಫೀಸ್ ನಿರ್ಮಾಣವಾಗುವ ಸಂದರ್ಭ, ಆರ್​​ಟಿಓ ಕಚೇರಿ ಪಕ್ಕದಲ್ಲಿದ್ದ ಪಾರಂಪರಿಕ ಕಟ್ಟಡಕ್ಕೆ ಸ್ಟೇಷನ್ ಶಿಫ್ಟ್ ಆಯಿತು. 1915ರಲ್ಲಿ ನಿರ್ಮಾಣವಾಗಿದ್ದ ಕಟ್ಟಡದಲ್ಲಿ ಜಯನಗರ ಪೊಲೀಸ್ ಠಾಣೆ ಇತ್ತು. ಇತ್ತೀಚಗೆ ಈ ಕಟ್ಟಡವನ್ನು ಕೆಡವಲಾಯಿತು. ಆದ್ದರಿಂದ ಜಯನಗರ ಪೊಲೀಸ್ ಠಾಣೆಯಲ್ಲಿ ಸರ್ವೋದಯ ಕಾಲೇಜು ಬಳಿ ಶಿಫ್ಟ್ ಮಾಡಲಾಗಿದೆ.

ಲೈವ್ ಕರ್ನಾಟಕ ವಾಟ್ಸಪ್ | 7411700200

(ವಾಟ್ಸಪ್ ಮಾಡಿ, ಶಿವಮೊಗ್ಗದ ನ್ಯೂಸ್ ಪಡೆಯಿರಿ. ನಾವು ವಾಟ್ಸಪ್ ಗ್ರೂಪ್ ಮಾಡುವುದಿಲ್ಲ. ನಿಮಗೆ ಪ್ರತ್ಯೆಕವಾಗಿ ನ್ಯೂಸ್ ಕಳುಹಿಸುತ್ತೇವೆ. ಇನ್ನು, ನಿಮ್ಮೂರಿನ ಕಾರ್ಯಕ್ರಮಗಳು, ಸಭೆ, ಸಮಾರಂಭಗಳು, ನ್ಯೂಸ್ ಆಗುವಂತಹ ಘಟನೆಗಳಿದ್ದರೆ, ಕೂಡಲೇ ನಮಗೆ ವಾಟ್ಸಪ್ ಮಾಡಿ. ಸುಳ್ ಸುದ್ದಿಗಳನ್ನು ಕಳುಹಿಸಬೇಡಿ, ನಾವು ಅಂತಹ ಸುದ್ದಿ ಪ್ರಕಟಿಸುವುದಿಲ್ಲ)

One Response

  1. Sudeep February 12, 2018

Leave a Reply

error: Content is protected !!