ಹೆಂಡತಿಯನ್ನು ಕೊಂದು ಪೆಟ್ರೋಲ್ ಹಾಕಿ ಬೆಂಕಿ ಹೆಚ್ಚಿದ್ದ ಗಂಡ ಅರೆಸ್ಟ್

ಲೈವ್ ಕರ್ನಾಟಕ.ಕಾಂ | ಸೊರಬ

ಅರೆ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾದ ಮಹಿಳೆಯ ಮೃತದೇಹದ ಗುರುತು ಪತ್ತೆ ಹೆಚ್ಚುವಲ್ಲಿ, ಸಫಲರಾದ ಆನವಟ್ಟಿ ಪೊಲೀಸರು, 24 ಗಂಟೆಯಲ್ಲಿ ಮಹಿಳೆಯ ಹತ್ಯೆಗೈದ ಆರೋಪಿಯ ಕೈಗೆ ಕೋಳ ತೊಡಿಸಿದ್ದಾರೆ.

ಸಾಯಿರಾಬಾನು (38) ಮೃತ ಮಹಿಳೆ. ಆಕೆಯ ಗಂಡನೇ ಹತ್ಯೆ ಮಾಡಿ, ಕೊರಳಿಗೆ ಹಗ್ಗ ಕಟ್ಟಿ, ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದ ಆರೋಪಿ. ಈ ಸಂಬಂಧ ಉಮರ್ ಬೇಗ್​ನನ್ನು (40) ಆನವಟ್ಟಿ ಪೊಲೀಸರು ಅರೆಸ್ಟ್​  ಮಾಡಿದ್ದಾರೆ.

ಸಣ್ಣ ಕಿರಿಕ್​ನಿಂದ ಕೊಲೆ

ಉಮರ್ ಬೇಗ್ ಮತ್ತು ಸಾಯಿರಾಬಾನು ಮದುವೆಯಾಗಿ 19 ವರ್ಷ. ಅದರೆ ಸಣ್ಣಪುಟ್ಟ ವಿಚಾರಕ್ಕೂ ಇಬ್ಬರು ಜಗಳ ಆಡುತ್ತಿದ್ದರು. ಇದೇ ಕಾರಣಕ್ಕೆ ಸಾಯಿರಾಬಾನು ಮಕ್ಕಳೊಂದಿಗೆ ಶಿರಾಳಕೊಪ್ಪದಲ್ಲಿರುವ ತವರು ಮನೆಗೆ ತೆರಳಿದ್ದರು. ಮೂರು ತಿಂಗಳ ಹಿಂದೆ ಉಮರ್ ಬೇಗ್ ಕೂಡ ಅಲ್ಲಿಗೆ ಹೋಗಿದ್ದ. ಮೂರು ದಿನದ ಹಿಂದೆ ಸಾಯಿರಾಬಾನು ಜೊತೆಗೆ ಸೊರಬ ತಾಲೂಕಿನ ನೆಗವಾಡಿ ಬಳಿ ಬೈಕ್​ನಲ್ಲಿ ಹೋಗುತ್ತಿದ್ದಾಗ, ಜಗಳವಾಗಿದೆ.

ಮಾತಿಗೆ ಮಾತು ಬೆಳೆದು ಉಮರ್ ಬೇಗ್, ಸಾಯಿರಾಬಾನು ಹತ್ಯೆ ಮಾಡಿದ್ದ. ಆ ಬಳಿಕ ಕೊರಳಿಗೆ ಹಗ್ಗ ಹಾಕಿ ಬಿಗಿದು, ನಡುತೋಪಿನಲ್ಲಿ ಶವವಿಟ್ಟು, ಬೈಕ್​ನಲ್ಲಿದ್ದ ಪೆಟ್ರೋಲ್ ತಂದು ಸುರಿದು ಬೆಂಕಿ ಹಚ್ಚಿದ್ದ. ಸಾಯಿರಾಬಾನು ಮೃತದೇಹ ಅರ್ಧ ಸುಟ್ಟು ಕರಕಲಾಗಿತ್ತು.

ಗುರುತು ಸಿಗದ ಸ್ಥಿತಿಯಲ್ಲಿದ್ದ ಶವದ ಫೋಟೊ ಕ್ಲಿಕ್ಕಿಸಿ, ಸೋಷಿಯಲ್ ಮೀಡಿಯಾದ ಮೂಲಕ ಆನವಟ್ಟಿ ಪೊಲೀಸರು ಪತ್ತೆ ಹಚ್ಚಿದ್ದಾರೆ. ಮೃತ ಮಹಿಳೆಯ ಗಂಡ ತಾನೇ ಕೃತ್ಯ ಎಸಗಿದ್ದಾಗಿ ತೊಪ್ಪೊಪ್ಪಿಕೊಂಡಿದ್ದಾನೆ.

  • ಅಭಿನವ್ ಖರೆ, ಜಿಲ್ಲಾ ರಕ್ಷಣಾಧಿಕಾರಿ

ವಾಟ್ಸಪ್​ನಿಂದ ಸೀರೆಯ ಗುರುತು

ಗುರುತು ಪತ್ತೆ ಹಚ್ಚಲು ಸಾಧ್ಯವಾಗದ ಸ್ಥಿತಿಯಲ್ಲಿದ್ದ ಮಹಿಳೆಯ ಶವದ ಫೋಟೊವನ್ನು ಆನವಟ್ಟಿ ಪೊಲೀಸರು ವಾಟ್ಸಪ್​ನಲ್ಲಿ ತಮ್ಮ ಮೂಲಗಳಿಗೆ ಕಳಿಸಿದ್ದರು. ಶಿರಾಳಕೊಪ್ಪದಲ್ಲಿರುವ ಸಾಯಿರಾಬಾನು ಕುಟುಂಬದವರಿಗೆ ಫೋಟೊ ತಲುಪಿದ್ದು, ಸುಡದೆ ಉಳಿದಿದ್ದ ಸೀರೆಯ ಭಾಗವನ್ನು ಗಮನಿಸಿ, ಗುರುತು ಪತ್ತೆ ಹಚ್ಚಿದ್ದರು. ಆ ಬಳಿಕ ಕಾರ್ಯಾಚರಣೆ ನಡೆಸಿದ ಆನವಟ್ಟಿ ಪೊಲೀಸರು, ಉಮರ್ ಬೇಗ್​ನ ಜಾಡು ಹಿಡಿದು, ಆತನನ್ನು ಅರೆಸ್ಟ್  ಮಾಡಿದ್ದಾರೆ.

ಲೈವ್ ಕರ್ನಾಟಕ ವಾಟ್ಸಪ್ | 7411700200

(ವಾಟ್ಸಪ್ ಮಾಡಿ, ಶಿವಮೊಗ್ಗದ ನ್ಯೂಸ್ ಪಡೆಯಿರಿ. ನಾವು ವಾಟ್ಸಪ್ ಗ್ರೂಪ್ ಮಾಡುವುದಿಲ್ಲ. ನಿಮಗೆ ಪ್ರತ್ಯೆಕವಾಗಿ ನ್ಯೂಸ್ ಕಳುಹಿಸುತ್ತೇವೆ. ಇನ್ನು, ನಿಮ್ಮೂರಿನ ಕಾರ್ಯಕ್ರಮಗಳು, ಸಭೆ, ಸಮಾರಂಭಗಳು, ನ್ಯೂಸ್ ಆಗುವಂತಹ ಘಟನೆಗಳಿದ್ದರೆ, ಕೂಡಲೇ ನಮಗೆ ವಾಟ್ಸಪ್ ಮಾಡಿ. ಸುಳ್ ಸುದ್ದಿಗಳನ್ನು ಕಳುಹಿಸಬೇಡಿ, ನಾವು ಅಂತಹ ಸುದ್ದಿ ಪ್ರಕಟಿಸುವುದಿಲ್ಲ)

Leave a Reply

error: Content is protected !!