ಶಿವಮೊಗ್ಗ, ತುಮಕೂರು ಹೈವೇ ಇನ್ಮುಂದೆ ನಾಲ್ಕು ಪಥ, ಕಾಮಗಾರಿಗೆ ಮುಹೂರ್ತ ಫಿಕ್ಸ್

ಲೈವ್ ಕರ್ನಾಟಕ.ಕಾಂ | ಶಿಕಾರಿಪುರ

ಶಿವಮೊಗ್ಗ ಜನರ ಬಹು ವರ್ಷದ ಬೇಡಿಕೆ ಕೊನೆಗೂ ಈಡೇರುತ್ತಿದೆ. ಇದರಿಂದ ಶಿವಮೊಗ್ಗ ಮತ್ತು ಬೆಂಗಳೂರು ಮತ್ತಷ್ಟು ಹತ್ತಿರವಾಗಲಿವೆ. ಎರಡೂ ಜಿಲ್ಲೆಗಳ ನಡುವಿನ ರಸ್ತೆ ಪ್ರಯಾಣದ ಅವಧಿ ಮತ್ತಷ್ಟು ಕಡಿಮೆ ಆಗಲಿದೆ. ಶಿವಮೊಗ್ಗ ಮತ್ತು ತುಮಕೂರು ನಡುವೆ ಚತುಷ್ಪತ ರಸ್ತೆ ನಿರ್ಮಾಣ ಕಾಮಗಾರಿಗೆ ಮುಹೂರ್ತ ಫಿಕ್ಸ್ ಆಗಿದೆ.

ಶಿವಮೊಗ್ಗದಿಂದ ತುಮಕೂರಿನವರೆಗ ಸದ್ಯ ದ್ವಿಪತ ರಸ್ತೆಯಿದೆ. ಇದನ್ನು ಚತುಷ್ಪತ ರಸ್ತೆಯಾಗಿ ಬದಲಾಯಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಫೆಬ್ರವರಿ 19ರಂದು ಶಂಕುಸ್ಥಾಪನೆಯೂ ನೆರವೇರಲಿದೆ. ಈ ಕುರಿತು ಶಿಕಾರಿಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದ ಬಿ.ಎಸ್.ಯಡಿಯೂರಪ್ಪ, ಶಿವಮೊಗ್ಗ – ತುಮಕೂರು ಚತುಷ್ಪತ ರಸ್ತೆ ನಿರ್ಮಾಣಕ್ಕೆ 3600 ಕೋಟಿ ವೆಚ್ಚವಾಗಲಿದೆ ಎಂದ ತಿಳಿಸಿದರು.

ಇದನ್ನೂ ಓದಿ | ದಿಢೀರ್ ಎದುರುಬದುರಾದರು ಕಾಗೋಡು ತಿಮ್ಮಪ್ಪ, ಯಡಿಯೂರಪ್ಪ, ಮುಂದೇನಾಯ್ತು ಗೊತ್ತಾ?

ಶಿವಮೊಗ್ಗ, ಹೊನ್ನಾಳಿ ಮತ್ತು ಹಾವೇರಿ ರಸ್ತೆಗಳನ್ನು ಉನ್ನತೀಕರಿಸಲು ಕೇಂದ್ರ ಸರ್ಕಾರ ಯೋಜಿಸಿದೆ. ಇದು ಕೂಡ ಜನರಿಗೆ ತುಂಬಾ ಅನುಕೂಲ ಆಗಲಿದೆ. ಇನ್ನು, ಸಿಗಂದೂರಿಗೆ ಸೇತುವೆ ಮತ್ತು ಸಂಪರ್ಕ ರಸ್ತೆ ಕಲ್ಪಿಸಲು ಕೇಂದ್ರ ಸರ್ಕಾರ 1200 ಕೋಟಿ ಅನುದಾನ ನೀಡಲಿದೆ. ಇದು ತಮ್ಮ ಪ್ರಾಮಾಣಿಕ ಪ್ರಯತ್ನದ ಫಲ ಎಂದು ಯಡಿಯೂರಪ್ಪ ತಿಳಿಸಿದರು.

2 Comments

  1. AV Ravikumar February 18, 2018
  2. ಮಲ್ಲಪ್ಪ February 18, 2018

Leave a Reply

error: Content is protected !!