ಅಪರಿಚಿತ ಮೊಬೈಲ್ ನಂಬರ್’ನಿಂದ ಬೆದರಿಕೆ ಕರೆ, ನೇಣು ಬಿಗಿದು ವಿದ್ಯಾರ್ಥಿನಿ ಆತ್ಮಹತ್ಯೆ

ಶಿವಮೊಗ್ಗ ಲೈವ್.ಕಾಂ  | ಶಿವಮೊಗ್ಗ

ಅಪರಿಚಿತ ಮೊಬೈಲ್ ನಂಬರ್’ನಿಂದ ಬರುತ್ತಿದ್ದ ಬೆದರಿಕೆ ಕರೆ ಮತ್ತು ಮೆಸೇಜ್’ಗಳಿಗೆ ಹೆದರಿ, ವಿದ್ಯಾರ್ಥಿನಿಯೊಬ್ಬಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ಸಂಬಂಧ ಕುಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆಯನೂರು ಸಮೀಪದ ಚಾಮುಂಡಿಪುರದಲ್ಲಿ ಕುಮಾರ್ ನಾಯ್ಕ ಎಂಬುವವರ ಮಗಳು ಕೆ.ಪವಿತ್ರಾ (18) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ. ಕಳೆದೊಂದು ತಿಂಗಳಿಂದ ಅಪರಿಚಿತ ಮೊಬೈಲ್ ನಂಬರ್’ನಿಂದ ಪವಿತ್ರಾ ಮೊಬೈಲ್’ಗೆ ಬೆದರಿಕೆ ಕರೆಗಳು ಬರುತ್ತಿದ್ದವು. ಮೆಸೇಜ್’ಗಳೂ ಬರುತ್ತಿದ್ದವು. ಇದರಿಂದ ಮನನೊಂದು ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೋಷಕರು ಆರೋಪಿಸಿದ್ದಾರೆ.

ಫಸ್ಟ್ ಕ್ಲಾಸ್’ನಲ್ಲಿ ಪಾಸ್ ಆಗಿದ್ದಳು

ಪವಿತ್ರಾ, ಶಿವಮೊಗ್ಗದ ಬಸವೇಶ್ವರ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಓದುತ್ತಿದ್ದಳು. ಮೊನ್ನೆ ಬಂದ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಫಸ್ಟ್ ಕ್ಲಾಸ್ ಮಾರ್ಕ್ಸ್ ಪಡೆದಿದ್ದಳು. ಇದರಿಂದ ಮನೆಯಲ್ಲಿ ಸಂತಸವಿತ್ತು. ಆದರೆ ಇದೇ ಸಂದರ್ಭ ಬಂದ ಬೆದರಿಕೆ ಕರೆ, ಪವಿತ್ರಾಳನ್ನು ಬಲಿ ಪಡೆದಿದೆ.

ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ | 7411700200

Leave a Reply

error: Content is protected !!