ಶಿವಮೊಗ್ಗ ನಗರದಲ್ಲಿ ಪೊಲೀಸ್ ರೂಟ್ ಮಾರ್ಚ್

ಲೈವ್ ಕರ್ನಾಟಕ.ಕಾಂ | ಶಿವಮೊಗ್ಗ

ವಿಧಾನಸಭೆ ಚುನಾವಣೆ ಅಧಿಸೂಚನೆ ಪ್ರಕಟಗೊಳ್ಳುತ್ತಿದ್ದಂತೆ ಜಿಲ್ಲೆಯಾದ್ಯಂತ ಪೊಲೀಸ್ ಮತ್ತು ಅರೆಸೇನಾಪಡೆ ರೂಟ್ ಮಾರ್ಚ್ ನಡೆಸುತ್ತಿದೆ. ಇವತ್ತು ಶಿವಮೊಗ್ಗ ನಗರದ ವಿವಿಧೆಡೆ ರೂಟ್ ಮಾರ್ಚ್ ನಡೆಸಲಾಯಿತು.

ಡಿಎಆರ್ ಮೈದಾನದಿಂದ ಮಿಳಘಟ್ಟ, ಅಣ್ಣಾ ನಗರ, ಟಿಪ್ಪು ನಗರ, ಗೋಪಾಳ, ಬೈಪಾಸ್ ರಸ್ತೆ, ವಿದ್ಯಾನಗರ, ಬಿ.ಹೆಚ್.ರಸ್ತೆ, ಗಾಂಧಿ ಬಜಾರ್, ಅಮೀರ್ ಅಹಮದ್ ಸರ್ಕಲ್, ನೆಹರೂ ರೋಡ್ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ರೋಟ್ ಮಾರ್ಚ್ ನಡೆಸಲಾಯಿತು.

ಜಿಲ್ಲಾ ರಕ್ಷಣಾಧಿಕಾರಿ ಅಭಿನವ್ ಖರೆ ನೇತೃತ್ವದಲ್ಲಿ ನಡೆದ ಪೊಲೀಸ್ ರೂಟ್ ಮಾರ್ಚ್ ನಲ್ಲಿ DySP ಸುದರ್ಶನ್, ದೊಡ್ಡ ಪೇಟೆ ಸರ್ಕಲ್ ಇನ್ಸ್ ಪೆಕ್ಟರ್ ಹರೀಶ್ ಪಟೇಲ್, ಕೋಟೆ ಸರ್ಕಲ್ ಇನ್ಸ್ ಪೆಕ್ಟರ್ ದೇವರಾಜ್ ಇದ್ದರು. 10 ಸಬ್ ಇನ್ಸ್ ಪೆಕ್ಟರ್ ಗಳು, ಆರ್.ಎ.ಎಫ್ ನ 120 ಸಿಬ್ಬಂದಿ ರೂಟ್ ಮಾರ್ಚ್ ನಲ್ಲಿ ಪಾಲ್ಗೊಂಡಿದ್ದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾ ರಕ್ಷಣಾಧಿಕಾರಿ ಅಭಿವನ್ ಖರೆ, ಮತದಾರರಲ್ಲಿ ಭರವಸೆ ಮೂಡಿಸುವ ಸಲುವಾಗಿ ರೂಟ್ ಮಾರ್ಚ್ ಮಾಡಲಾಗುತ್ತಿದೆ. ಭಯ, ಆತಂಕವಿಲ್ಲದೆ ಎಲ್ಲರೂ ಮತದಾನ ಮಾಡಬೇಕು ಅನ್ನುವುದು ರೂಡ್ ಮಾರ್ಚ್ ನ ಪ್ರಮುಖ ಉದ್ದೇಶ ಎಂದರು. ಇನ್ನು, ನಾಳೆ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವ ಹಿನ್ನೆಲೆ, ಭದ್ರತೆ ಹೆಚ್ಚಿಸಲಾಗಿದೆ. ಶಿಕಾರಿಪುರಕ್ಕೆ ಹೆಚ್ಚುವರಿ ಸಿಬ್ಬಂದಿ ನಿಯೋಜಿಸಲಾಗಿದೆ ಎಂದು ತಿಳಿಸಿದರು.

ಲೈವ್ ಕರ್ನಾಟಕ.ಕಾಂ ವಾಟ್ಸಪ್ ನಂಬರ್ | 7411700200

Leave a Reply

error: Content is protected !!