ಕೊಟ್ಟಿಗೆಯಿಂದ ಎತ್ತು ಕದ್ದೊಯ್ದು, ಸಾಯಿಸಿ, ಕಾರಿನಲ್ಲಿ ಮಾಂಸ ಸಾಗಿಸುತ್ತಿದ್ದ ಕೇಸ್, ಒಬ್ಬನ ಅರೆಸ್ಟ್

ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ

ಕೊಟ್ಟಿಗೆಯಲ್ಲಿದ್ದ ಎತ್ತು ಕದ್ದೊಯ್ದು ಸಾಯಿಸಿ, ಮಾಂಸವನ್ನು ಕಾರಿನಲ್ಲಿ ಸಾಗಿಸುತ್ತಿದ್ದ ಪ್ರಕರಣ ಸಂಬಂಧ, ತುಂಗಾ ನಗರ ಪೊಲೀಸರು ಒಬ್ಬನನ್ನು ವಶಕ್ಕೆ ಪಡೆದಿದ್ದಾರೆ. ಬಂಧಿತನನ್ನು ಶಿವಮೊಗ್ಗದ ಇಲ್ಯಾಸ್ ನಗರದ ಶಫಿಕ್ ಅಹ್ಮದ್ ಎಂದು ಗುರುತಿಸಲಾಗಿದೆ.

ಪ್ರಕರಣದಲ್ಲಿ ಮೂರ್ನಾಲ್ಕು ಮಂದಿಯ ಕೈವಾಡವಿರುವ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಒಬ್ಬನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ. ಮಂಡ್ಲಿ ನಿವಾಸಿ ಚಂದ್ರಶೇಖರ್ ಎಂಬುವವರಿಗೆ ಸೇರಿದ ಎತ್ತನ್ನು ಕದ್ದು, ಸಾಯಿಸಿ, ಮಾಂಸವನ್ನು ಕಾರಿನಲ್ಲಿ ಸಾಗಿಸಲಾಗುತ್ತಿತ್ತು.

ವಿಚಾರ ತಿಳಿಯುತ್ತಿದ್ದಂತೆ ಗ್ರಾಮಸ್ಥರು ಕಾರನ್ನು ಬೆನ್ನಟ್ಟಿದ್ದರು. ಟಿಪ್ಪುನಗರದ ಸಮೀಪ ಆರೋಪಿಗಳು ಕಾರು ಬಿಟ್ಟು ಪರಾರಿಯಾಗಿದ್ದರು. ಈ ಹಿನ್ನೆಲೆಯಲ್ಲಿ, ಕಾರನ್ನು ಪೊಲೀಸರ ವಶಕ್ಕೆ ಒಪ್ಪಿಸಲಾಗಿತ್ತು. ಇನ್ನು, ಗೋಕಳ್ಳರನ್ನು ಕೂಡಲೇ ಬಂಧಿಸಿ, ಕಠಿಣ ಕ್ರಮಕೈಗೊಳ್ಳುವಂತೆ  ಆಗ್ರಹಿಸಿ, ಹಿಂದೂಪರ ಸಂಘಟನೆಯ ಕಾರ್ಯಕರ್ತರು ಮತ್ತು ಮಂಡ್ಲಿ ಗ್ರಾಮಸ್ಥರು ಭಾನುವಾರ ತುಂಗಾನಗರ ಪೊಲೀಸ್ ಠಾಣೆ ಎದರು ಪ್ರತಿಭಟನೆ ನಡೆಸಿದ್ದರು.

ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ | 7411700200

Leave a Reply

error: Content is protected !!