ಶುಂಠಿ ಹೊಲದಲ್ಲಿ ಬೆಳೆದಿದ್ದ ಗಾಂಜಾ ಸೀಸ್, ಬೆಳೆಗಾರರ ಮೇಲೆ ಕೇಸ್

ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ | 28 ಸೆಪ್ಟೆಂಬರ್ 2018

ಶುಂಠಿ ಹೊಲದ ಮೇಲೆ ದಾಳಿ ನಡೆಸಿದ ಅಬಕಾರಿ ಇಲಾಖೆ ಅಧಿಕಾರಿಗಳು, ಗಾಂಜಾ ಬೆಳೆ ವಶಕ್ಕೆ ಪಡೆದಿದ್ದಾರೆ. ಅಕ್ರಮವಾಗಿ ಗಾಂಜಾ ಬೆಳೆದಿರುವ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿ ಹೂವುಭರಿತ ಗಾಂಜಾ ಗಿಡಗಳನ್ನು ಸೀಸ್ ಮಾಡಲಾಗಿದೆ.

ಹೊಸನಗರ ತಾಲೂಕಿನ ಕಗಚಿ ಗ್ರಾಮದ ಸಿದ್ದಣ್ಣ ಪೂಜಾರಿ ಮತ್ತು ಪ್ರಕಾಶ್ ಎಂಬುವವರ ಶುಂಠಿ ಹೊಲದಲ್ಲಿ ಅಕ್ರಮವಾಗಿ ಗಾಂಜಾ ಬೆಳೆಯಲಾಗಿತ್ತು. ಸುಮಾರು 10 ಸಾವಿರ ರೂ. ಮೌಲ್ಯದ 16 ಹೂವುಭರಿತ ಗಾಂಜಾ ಗಿಡಗಳನ್ನು ವಶಕ್ಕೆ ಪಡೆಯಲಾಗಿದೆ. ಬೆಳೆಗಾರರು ನಾಪತ್ತೆಯಾಗಿದ್ದು, ಬಂಧನಕ್ಕೆ ಕ್ರಮ ಕೈಗೊಳ್ಳಲಾಗಿದೆ.

ಉಪ ಆಯುಕ್ತ ವೈ.ಆರ್.ಮೋಹನ್ ಅವರ ಸೂಚನೆ ಮೇರೆಗೆ, ಸಾಗರ ಉಪವಿಭಾಗದ ಅಬಕಾರಿ ಉಪ ಅಧೀಕ್ಷಕಿ ಲೀಲಾವತಿ ಅವರ ನಿರ್ದೇಶನದಲ್ಲಿ ತೀರ್ಥಹಳ್ಳಿ ಉಪವಿಭಾಗ ಸಿಬ್ಬಂದಿಗಳು,  ಅಬಕಾರಿ ನಿರೀಕ್ಷಕ ಶ್ರೀನಾಥ್, ಅಬಕಾರಿ ಉಪನಿರೀಕ್ಷಕ ಮೈಕೆಲ್ ಜಾನ್ಸನ್ ಸೇರಿದಂತೆ ಹಲವರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ | 7411700200

ಸುದ್ದಿಗಾಗಿ : 9964634494 | ಜಾಹೀರಾತಿಗಾಗಿ : 9972194422

Leave a Reply

error: Content is protected !!