ಶಿವಮೊಗ್ಗಕ್ಕೆ ಪೊಲೀಸ್ ಮಹಾನಿರ್ದೇಶಕಿ, ಎಲೆಕ್ಷನ್ ಬಂದೋಬಸ್ತ್ ಕುರಿತು ಪರಿಶೀಲನೆ

ಲೈವ್ ಕರ್ನಾಟಕ.ಕಾಂ | ಶಿವಮೊಗ್ಗ

ನ್ಯಾಯಸಮ್ಮತ ಮತ್ತು ಶಾಂತಿಯುತ ಚುನಾವಣೆ ನಡೆಸಲು ಪೊಲೀಸ್ ಇಲಾಖೆ ಫುಲ್ ರೆಡಿಯಾಗಿದೆ. ಬಂದೋಬಸ್ತ್ ಪರಿಶೀಲನೆಗೆ ಪೊಲೀಸ್ ಮಹಾನಿರ್ದೇಶಕಿ ಶಿವಮೊಗ್ಗಕ್ಕೆ ಭೇಟಿ ನೀಡಿದರು. ಪೊಲೀಸ್ ಅಧಿಕಾರಿಗಳ ಜೊತೆಗೆ ಮಹತ್ವದ ಮೀಟಿಂಗ್ ನಡೆಸಿದರು.

ಡಿಜಿಪಿ ನೀಲಮಣಿ ರಾಜು ಶಿವಮೊಗ್ಗಕ್ಕೆ ಭೇಟಿ ನೀಡಿ, ಚುನಾವಣೆ ಸಿದ್ಧತೆ ಕುರಿತು ಪರಿಶೀಲನೆ ನಡೆಸಿದರು. ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆಗೆ ಚರ್ಚೆ ನಡೆಸಿದರು.

ಭೇಟಿಗೂ ಮೊದಲು ವಿಡಿಯೋ ಕಾನ್ಫರೆನ್ಸ್

ಡಿಜಿಪಿ ನೀಲಮಣಿ ರಾಜು ಅವರು, ಶಿವಮೊಗ್ಗ ಭೇಟಿಗೂ ಮೊದಲು, ವಲಯ ಐಜಿಪಿ ಮತ್ತು ಜಿಲ್ಲಾ ರಕ್ಷಣಾಧಿಕಾರಿ ಜೊತೆಗೆ ವಿಡಿಯೋ ಕಾನ್ಫರೆನ್ಸ್ ನಡೆಸಿದ್ದರು. ಬಂದೋಬಸ್ತ್ ಕುರಿತು ಸಂಪೂರ್ಣ ಮಾಹಿತಿ ಪಡೆದುಕೊಂಡಿದ್ದರು. ನಂತರ ಶಿವಮೊಗ್ಗಕ್ಕೆ ಭೇಟಿ ನೀಡಿದ್ದಾರೆ. ಇನ್ನು, ಡಿಜಿಪಿ ನೀಲಮಣಿ ರಾಜು ಅವರಿಗೆ ಶಿವಮೊಗ್ಗ ಪೊಲೀಸರು ಗೌರವ ವಂದನೆ ಸಲ್ಲಿಸಿದರು.

ಸೂಕ್ಷ್ಮ ಪ್ರದೇಶವಾದರೂ ಶಿವಮೊಗ್ಗದಲ್ಲಿ ಹೈಸೆಕ್ಯೂರಿಟಿ

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಡಿಜಿಪಿ ನೀಲಮಣಿ ರಾಜು ಅವರು, ನ್ಯಾಯಸಮ್ಮತ ಮತ್ತು ಶಾಂತಿಯುತ ಚುನಾವಣೆ ನಡೆಸಲು ಪೊಲೀಸ್ ಇಲಾಖೆ ಸನ್ನದ್ಧವಾಗಿದೆ. ಶಿವಮೊಗ್ಗ ಅತಿಸೂಕ್ಷ್ಮ ಕೇಂದ್ರವಾಗಿದೆ. ಇಲ್ಲಿ ಶಾಂತಿ ಕಾಪಾಡುವಲ್ಲಿ ಪೊಲೀಸ್ ಇಲಾಖೆ ಯಶಸ್ವಿಯಾಗಿದೆ ಎಂದರು.

ಡಿಜಿಪಿ ಭೇಟಿಯ ವಿಡಿಯೋ ನೋಡಿ |

ಲೈವ್ ಕರ್ನಾಟಕ.ಕಾಂ ವಾಟ್ಸಪ್ ನಂಬರ್ | 7411700200

Leave a Reply

error: Content is protected !!