ಶಿವಮೊಗ್ಗದಲ್ಲಿ ಅಪ್ರಾಪ್ತೆಯ ಮದುವೆಗೆ ಯತ್ನ, ಹಸೆಮಣೆ ಏರುವ ಮುಂಚೆ ಪೊಲೀಸ್ ಎಂಟ್ರಿ

ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ | 11 ಅಕ್ಟೋಬರ್ 2018

ಇವತ್ತು ನಡೆಯಬೇಕಿದ್ದ ಅಪ್ರಾಪ್ತೆಯ ಮದುವೆ ತಡೆಯಲು ಮಕ್ಕಳ ರಕ್ಷಣಾ ಘಟಕ ಸಿಬ್ಬಂದಿ ಹಾಗೂ ಪೊಲೀಸರು ಯಶಸ್ವಿಯಾಗಿದ್ದಾರೆ.

ತಾಲ್ಲೂಕಿನ ಹಾಡೋನಹಳ್ಳಿಯ 15 ವರ್ಷದ ಬಾಲಕಿಗೆ ತರೀಕೆರೆ ತಾಲೂಕಿನ ಮಾರುತಿ (23) ಜತೆ ಗುರುವಾರ ತುಂಗ ಭದ್ರಾ ಸಂಗಮ ಸ್ಥಳ ಕೂಡಲಿಯಲ್ಲಿ ಮದುವೆ ನಿಶ್ಚಯವಾಗಿತ್ತು. ಈ ಬಗ್ಗೆ ಖಚಿತ ಮಾಹಿತಿ ಬಂದ ಹಿನ್ನೆಲೆ ಬುಧವಾರ ಮಕ್ಕಳ ರಕ್ಷಣ ಘಟಕದ ಸಿಬ್ಬಂದಿ, ಶಿವಮೊಗ್ಗ ಗ್ರಾಮಾಂತರ ಪೊಲೀಸರ ಜತೆ ಹಾಡೋನಹಳ್ಳಿಗೆ ಭೇಟಿ ನೀಡಿ ಪೋಷಕರಿಗೆ ತಿಳಿ ಹೇಳಿ ಮದುವೆ ನಿಲ್ಲಿಸಲು ಯಶಸ್ವಿಯಾಗಿದ್ದಾರೆ.

ಅಲ್ಲದೇ ಬಾಲಕಿಗೆ ಮಕ್ಕಳಾ ರಕ್ಷಣಾ ಘಟಕದಲ್ಲಿ ಆಶ್ರಯ ನೀಡಲಾಗಿದ್ದು ಕೌನ್ಸೆಲಿಂಗ್ ನಡೆಸಲಾಗುತ್ತಿದೆ. ಎರಡೂ ಕಡೆಯ ಪೋಷಕರಿಗೂ ಪೊಲೀಸರು, ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿ ಎಚ್ಚರಿಕೆ ನೀಡಿದ್ದಾರೆ  

ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ | 7411700200

ಸುದ್ದಿಗಾಗಿ : 9964634494 | ಜಾಹೀರಾತಿಗಾಗಿ : 9972194422

Leave a Reply

error: Content is protected !!