ರಾತ್ರೋರಾತ್ರಿ ಅರಣ್ಯಾಧಿಕಾರಿ ಕಾರು ತಡೆದ ಗ್ರಾಮಸ್ಥರು, ಬಾಗಿಲು ತೆರೆದು ನೋಡಿದವರಿಗೆ ಕಾದಿತ್ತು ಶಾಕ್

ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ | 07 ಅಕ್ಟೋಬರ್ 2018

ಅರಣ್ಯ ಇಲಾಖೆ ಅಧಿಕಾರಿಯೊಬ್ಬರು ಕಾರಿನಲ್ಲಿ ಬೀಟೆ ಮತ್ತು ಸಾಗುವಾನಿ ನಾಟವನ್ನು ಸಾಗಿಸುತ್ತಿದ್ದ ಸಂದರ್ಭದಲ್ಲಿ ಗ್ರಾಮಸ್ಥರ ಕೈಗೆ ಸಿಕ್ಕಿಬಿದ್ದಿರುವ ಘಟನೆ ನರಸಿಂಹರಾಜಪುರ ರಸ್ತೆ ಉಂಬ್ಳೆಬೈಲು ಗ್ರಾಮದಲ್ಲಿ ನಡೆದಿದೆ.

ಉಂಬ್ಳೆಬೈಲಿನಿಂದ ಭದ್ರಾವತಿ ಕಡೆಗೆ ನೀಲಿ ಮಾರುತಿ ವ್ಯಾಗನಾರ್ ಕಾರಿನಲ್ಲಿ (KA 34 M 2972) ಬೀಟೆ ಮತ್ತು ಸಾಗುವಾನಿ ನಾಟ ಸಾಗಿಸುತ್ತಿದ್ದರು. ಗ್ರಾಮದಲ್ಲಿ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಕಾರನ್ನು ಯುವಕನೊಬ್ಬ ಗಮನಿಸಿದ್ದು ಅದರೊಳಗೆ ಬಿಳಿ ಪ್ಲಾಸ್ಟಿಕ್ ಚೀಲಗಳನ್ನು ಸುತ್ತಿದ ನಾಟಗಳು ಕಂಡುಬಂದಿವೆ.

ಗುಂಪುಗೂಡಿದ ಜನ, ಚಾಲಕ ಎಸ್ಕೇಪ್

ಈ ಸಮಯದಲ್ಲಿ ಯುವಕ ಕಾರು ಚಾಲಕನನ್ನು ಒಳಗೇನಿದೆ ಎಂದು ಕೇಳಿದಾಗ ಸರಿಯಾದ ಆತ ಸರಿಯಾದ ಉತ್ತರ ಕೊಡಲಿಲ್ಲ ಇದರಿಂದ ಅನುಮಾನಗೊಂಡ ಯುವಕ ಕಾರು ಬಾಗಿಲು ತೆಗೆದು ನೋಡಿದಾಗ ನಾಟ ಇರುವುದು ಬೆಳಕಿಗೆ ಬಂದಿದೆ.

ಕೂಡಲೆ ಆತ ಅಕ್ಕಪಕ್ಕದವರನ್ನು ಕೂಗಿ ಕರೆಯುತ್ತಿದ್ದಂತೆ ಚಾಲಕ ಅಲ್ಲಿಂದ ಪರಾರಿಯಾಗಿದ್ದಾನೆ.

ಕಾರಿನಲ್ಲಿ ಏನೇನೆಲ್ಲ ಇತ್ತು?

ಕಾರಿನಲ್ಲಿ ನಾಲ್ಕು ಅಡಿಉದ್ದ ತಲಾ ಅರ್ಧ ಅಡಿ ಅಗಲದ ಹತ್ತು ತುಂಡುಗಳಿದ್ದವು.

ಕಾರು ಉಂಬಳೆಬೈಲು ಅರಣ್ಯ ವಲಯದ ಫಾರೆಸ್ಟರ್ ಒಬ್ಬರದೆಂದು ಗೊತ್ತಾಗಿದೆ. ಜನರು ಜಮಾವಣೆಗೊಂಡು ಪ್ರತಿಭಟನೆ ನಡೆಸಿ ಫಾರೆಸ್ಟರ್ ಮತ್ತು ಆವರ ಬೆಂಬಲಿಗರ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ವಿಷಯ ತಿಳಿಯುತ್ತಿದ್ದಂತೆ ವಲಯ ಅರಣ್ಯಾಧಿಕಾರಿ ಸ್ಥಳಕ್ಕೆ ಆಗಮಿಸಿ ನಾಟ ಸಮೇತ ಕಾರು ವಶಪಡಿಸಿಕೊಂಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುವಂತೆ ವಲಯ ಅರಣ್ಯಾಧಿಕಾರಿಗೆ ಸೂಚನೆ ನೀಡಲಾಗಿದೆ. ಪ್ರಕರಣದಲ್ಲಿ ಯಾರೆ ಭಾಗಿಯಾಗಿದ್ದರೂ ಬಿಡದೆ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಅಂತಾ ಉಪ ಅರಣ್ಯ ಸಂರಕ್ಷಣಾಧಿಕಾರಿ ಚಲುವರಾಜ್ ತಿಳಿಸಿದ್ದಾರೆ.

ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ | 7411700200

ಸುದ್ದಿಗಾಗಿ : 9964634494 | ಜಾಹೀರಾತಿಗಾಗಿ : 9972194422

Leave a Reply

error: Content is protected !!