ಬಿ.ಹೆಚ್.ರಸ್ತೆಯಲ್ಲಿ ಎರಡೇ ಚಕ್ರದಲ್ಲಿ ಓಡಿದ ಆಟೋ, ಟ್ರಾಫಿಕ್ ಸ್ಟೇಷನ್ ಎದುರಿಗೂ ನಡೆಯಿತು ಭಯಾನಕ ಸ್ಟಂಟ್

ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ | 08 ಅಕ್ಟೋಬರ್ 2018

ಚಾಲಕನೊಬ್ಬ ಆಟೋವನ್ನು ಅಡ್ಡಾದಿಡ್ಡಿ ಚಲಾಯಿಸಿ, ವಾಹನ ಚಾಲಕರಿಗೆ ಸಖತ್ ಕಿರಿಕಿರಿ ಮಾಡಿದ್ದಾನೆ. ಟ್ರಾಫಿಕ್ ಪೊಲೀಸ್ ಠಾಣೆಯ ಮುಂದೆಯೇ ಸ್ಟಂಟ್ ಮಾಡಿ, ಹುಚ್ಚಾಟ ಮೆರೆದಿದ್ದಾನೆ.

ಶಿವಮೊಗ್ಗದ ಬಿ.ಹೆಚ್.ರಸ್ತೆಯಲ್ಲಿ ಬೆಳಗ್ಗೆ ಘಟನೆ ನಡೆದಿದೆ. ವಿದ್ಯಾನಗರ, ಸಹ್ಯಾದ್ರಿ ಕಾಲೇಜು ಮುಂಭಾದಲ್ಲಿ ಚಾಲಕನೊಬ್ಬ ಹೇಗೆಂದರೆ ಹಾಗೆ ಆಟೋ ಓಡಿಸಿದ್ದಾನೆ. ಅಷ್ಟೇ ಅಲ್ಲ, ಆಟೋವನ್ನು ಒಂದು ಸೈಡ್’ಗೆ ಬಾಗುವಂತೆ ಓಡಿಸಿ, ರಸ್ತೆಯಲ್ಲಿದ್ದರು ಬೆಚ್ಚಿ ಬೀಳುವಂತೆ ಮಾಡಿದ್ದಾನೆ. ಈತನ ನಿರ್ಲಕ್ಷ್ಯದ ಚಾಲನೆಯಿಂದ ಇತರೆ ವಾಹನ ಚಾಲಕರು ಗಲಿಬಿಲಿಗೊಂಡಿದ್ದಾರೆ.

ಟ್ರಾಫಿಕ್ ಸ್ಟೇಷನ್ ಮುಂದೆಯೇ ಸ್ಟಂಟ್

ಕೆಎ 14 9094 (SMG No.1701) ನಂಬರ್’ನ ಆಟೋದ ಚಾಲಕ ಅತೀ ವೇಗ, ನಿರ್ಲಕ್ಷದಿಂದ ಚಾಲನೆ ಮಾಡಿದ್ದಾನೆ. ವಿದ್ಯಾನಗರದಲ್ಲಿರುವ ಟ್ರಾಫಿಕ್ ಪೊಲೀಸ್ ಠಾಣೆಯ ಎದುರಲ್ಲೇ, ಹೈವೇ ರಸ್ತೆಯಲ್ಲೇ ಸ್ಟಂಟ್ ಮಾಡಿದ್ದಾನೆ. ಈ ಆಟೋವನ್ನು ನಿರ್ಲಕ್ಷದಿಂದ ಚಲಾಯಿಸಿದವನ ವಿರುದ್ಧ ಕ್ರಮ ಕೈಗೊಳ್ಳಬೇಕಿದೆ.

ಕೆಲ ತಿಂಗಳ ಹಿಂದೆ, ಇದೇ ರೀತಿ ಬೈಕ್’ನಲ್ಲಿ ಸ್ಟಂಟ್ ಮಾಡುತ್ತಿದ್ದವರಿಗೆ, ಬಸ್ ಚಾಲಕರು, ಕಂಡಕ್ಟರ್’ಗಳು, ಸಾರ್ವಜನಿಕರು ಹಿಡಿದು ಹಿಗ್ಗಾಮುಗ್ಗಾ ಥಳಿಸಿದ್ದರು. ಸ್ಥಳಕ್ಕೆ ಬಂದ ಜಿಲ್ಲಾ ರಕ್ಷಣಾಧಿಕಾರಿ ಕೂಡ, ಯುವಕರಿಗೆ ಗೂಸ ಕೊಟ್ಟಿದ್ದರು. ಈಗ ಇದೇ ರಸ್ತೆಯಲ್ಲಿ, ಅದೂ ಶಾಲೆ, ಕಾಲೇಜಿನ ಮುಂದೆಯೇ ಸ್ಟಂಟ್ ಮಾಡಿದ್ದಾನೆ.

ಹೇಗಿತ್ತು ಆಟೋ ಸ್ಟಂಟ್? ವಿಡಿಯೋ ನೋಡಿ |

ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ | 7411700200

ಸುದ್ದಿಗಾಗಿ : 9964634494 | ಜಾಹೀರಾತಿಗಾಗಿ : 9972194422

Leave a Reply

error: Content is protected !!