ಶಿವಮೊಗ್ಗ ಸೆಂಟ್ರಲ್ ಜೈಲಿನಲ್ಲಿ ಡಾಕ್ಟರ್ ಮೇಲೆ ಅಟ್ಯಾಕ್ ಮಾಡಿದ ಕೈದಿಗಳು, ಮುಂದೇನಾಯ್ತು ಗೊತ್ತಾ?

ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ | 19 ಅಕ್ಟೋಬರ್ 2018

ಚಿಕಿತ್ಸೆ ನೀಡೋಕೆ ಹೋಗಿದ್ದ ಡಾಕ್ಟರ್ ಮೇಲೆಯೇ ಕೈದಿಗಳು ಟ್ಯೂಬ್’ಲೈಟ್ ಚೂರುಗಳಿಂದ ಹಲ್ಲೆ ಮಾಡಿದ್ದಾರೆ. ಡಾಕ್ಟರ್ ಕಿವಿ ಭಾಗದಲ್ಲಿ ಗಾಯವಾಗಿದ್ದು, ಜೈಲು ಸಿಬ್ಬಂದಿಯ ಎಚ್ಚರಿಕೆಯಿಂದಾಗಿ ಅಪಾಯದಿಂದ ಪಾರಾಗಿದ್ದಾರೆ.

ಶಿವಮೊಗ್ಗ ಕೇಂದ್ರ ಕಾರಾಗೃಹದಲ್ಲಿ ಘಟನೆ ನಡೆದಿದೆ. ಅರ್ಬಾಜ್, ಶಾಬಾದ್ ಮತ್ತು ಅಲಿಯಾಸ್ ಎಂಬ ಕೈದಿಗಳು ಕೃತ್ಯ ಎಸಗಿದ್ದಾರೆ.

ಡಾಕ್ಟರ್ ಮೇಲೆ ಅಟ್ಯಾಕ್ ಮಾಡಿದ್ದೇಕೆ?

ಟ್ಯೂಬ್’ಲೈಟ್’ನಲ್ಲಿ ಬಡಿದಾಡಿಕೊಂಡು ಕೈದಿಗಳು ಗಾಯಗೊಂಡಿದ್ದರು. ವಿಚಾರ ತಿಳಿಯುತ್ತಿದ್ದಂತೆ ಕಾರಾಗೃಹದ ವೈದ್ಯಾಧಿಕಾರಿ ಡಾ.ರಘು ಪ್ರಸಾದ್ ಚಿಕಿತ್ಸೆ ನೀಡಲು ಧಾವಿಸಿದ್ದಾರೆ. ಚಿಕಿತ್ಸೆ ನಡೆಯುತ್ತಿದ್ದ ಸಂದರ್ಭ, ಕೈದಿಗಳು ತಮ್ಮನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಬೇಕು ಅಂತಾ ವೈದ್ಯಾಧಿಕಾರಿಯನ್ನು ಒತ್ತಾಯಿಸಿದ್ದಾರೆ. ಇದನ್ನು ಡಾ.ರಘು ಪ್ರಸಾದ್ ನಿರಾಕರಿಸಿದ್ದಾರೆ. ಕೋಪಗೊಂಡ ಕೈದಿಗಳು, ಟ್ಯೂಬ್’ಲೈಟ್ ಗಾಜಿನ ಚೂರುನಿಂದ ಡಾಕ್ಟರ್ ಮೇಲೆಯೇ ಅಟ್ಯಾಕ್ ಮಾಡಿದ್ದಾರೆ. ಇದರಿಂದ ಡಾ.ರಘುಪ್ರಸಾದ್ ಕಿವಿ ಭಾಗದಲ್ಲಿ ಗಾಯವಾಗಿದೆ.

ಕೈದಿಗಳ ಕಥೆ ಏನಾಯ್ತು?

ಪೊಲೀಸರ ಮಧ್ಯಪ್ರವೇಶದಿಂದ ಡಾಕ್ಟರ್ ಮೇಲೆ ಮತ್ತಷ್ಟು ದಾಳಿ ತಪ್ಪಿದೆ. ಇನ್ನು, ವೈದ್ಯರ ಮೇಲೆ ಹಲ್ಲೆ ನಡೆಸಿದ ಕೈದಿಗಳ ವಿರುದ್ಧ ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಕೈದಿಗಳನ್ನು ಬೆಳಗಾವಿಯ ಜೈಲಿಗೆ ವರ್ಗಾಯಿಸಲಾಗಿದೆ. ಈ ಮೂವರು ವಿರುದ್ಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಇವರನ್ನು ಶಿವಮೊಗ್ಗದ ಕೇಂದ್ರ ಕಾರಾಗೃಹದಲ್ಲಿ ಬಂಧಿಸಿಡಲಾಗಿತ್ತು.

ದಿನ ಭವಿಷ್ಯ | ಇವತ್ತು ನಿಮ್ ಭವಿಷ್ಯ ಹೇಗಿದೆ? ಯಾವ ರಾಶಿಯವರ ಶುಭಸಂಖ್ಯೆ ಎಷ್ಟು?

ಫೋನ್ ಮಾಡಿ ನಾನೇ ಉಪೇಂದ್ರ ಅಂದ್ರು ನಂಬಲಿಲ್ಲ, ಕೊನೆಗೆ ಉಪ್ಪಿ ಮಾಡಿದ್ದೇನು ಗೊತ್ತಾ?

ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ | 7411700200

ಸುದ್ದಿಗಾಗಿ : 9964634494 | ಜಾಹೀರಾತಿಗಾಗಿ : 9972194422

Leave a Reply

error: Content is protected !!