ಬ್ಯಾಂಕ್ ಮ್ಯಾನೇಜರ್ ಅಂತಾ ಹೊಸನಗರದ ವ್ಯಕ್ತಿಗೆ ಕರೆ ಮಾಡಿದ, ಎಟಿಎಂ ಪಿನ್ ತಗೊಂಡ, ಮುಂದೇನಾಯ್ತು ಗೊತ್ತಾ?

ಶಿವಮೊಗ್ಗ ಲೈವ್.ಕಾಂ | ಹೊಸನಗರ | 12 ಅಕ್ಟೋಬರ್ 2018

ಬ್ಯಾಂಕ್ ಮ್ಯಾನೇಜರ್ ಅಂತಾ ಹೇಳಿಕೊಂಡು ವ್ಯಕ್ತಿಯೊಬ್ಬರಿಗೆ ಕರೆ ಮಾಡಿದ ವಂಚಕನೊಬ್ಬ, ಅವರಿಂದ ಡೆಬಿಟ್ ಕಾರ್ಡ್ ನಂಬರ್, ಪಾಸ್’ವರ್ಡ್ ಮತ್ತು ಆಧಾರ್ ನಂಬರ್ ಪಡೆದುಕೊಂಡಿದ್ದಾರೆ. ಅಷ್ಟೇ ಅಲ್ಲ, ಅಕೌಂಟ್’ನಲ್ಲಿದ್ದ 43 ಸಾವಿರ ಹಣವನ್ನು ಲಪಟಾಯಿಸಿದ್ದಾನೆ.

ಹೊಸನಗರದ ನಿಟ್ಟೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಲಗಾರ್ ಗ್ರಾಮದ ಮಂಜುನಾಥ್ ಹಣ ಕಳೆದುಕೊಂಡವರು. ಮಂಗಳವಾರ ಬೆಳಗ್ಗೆ ವಂಚಕನೊಬ್ಬ ಕರೆ ಮಾಡಿ ತನನ್ನು ಕೆನರಾ ಬ್ಯಾಂಕ್ ಮ್ಯಾನೇಜರ್ ಎಂದು ಪರಿಚಯಿಸಿಕೊಂಡಿದ್ದಾನೆ. ತಮ್ಮ ಎಟಿಎಂ ಕಾರ್ಡ್ ಬ್ಲಾಕ್ ಆಗಿದೆ. ಅದನ್ನು ಸರಿಪಡಿಸಲು ಎಟಿಎಂ ಕಾರ್ಡ್ ಡಿಟೇಲ್ಸ್ ಬೇಕು ಅಂತಾ ಕೇಳಿದ್ದಾನೆ. ಡೆಬಿಟ್ ಕಾರ್ಡ್ ಪಾಸ್’ವರ್ಡ್, ಆಧಾರ್ ನಂಬರ್ ಕೂಡ ಪಡೆದುಕೊಂಡಿದ್ದಾನೆ.

ಬಳಿಕ ಫೋನ್’ಗೆ ಒಟಿಪಿ ನಂಬರ್ ಬಂದಿದೆ ಅದನ್ನು ತಿಳಿಸಿ ಅಂತಾ ಕೇಳಿದ್ದಾನೆ. ಒಟಿಪಿ ಪಡೆದುಕೊಂಡ ವಂಚಕ ಹಣವನ್ನು ಡ್ರಾ ಮಾಡಿಕೊಂಡಿದ್ದಾನೆ. ಆದರೆ ಇಷ್ಟೆಲ್ಲ ಆಗುವವರೆಗೂ ಆತನ ಫೋನ್ ಕರೆ ಕಟ್ ಮಾಡದೇ, ಮಂಜುನಾಥ್ ಅವರಿಗೆ ಅನುಮಾನ ಬಾರದಂತೆ ನೋಡಿಕೊಂಡಿದ್ದಾನೆ.

ಈ ಸಂಬಂಧ ಮಂಜುನಾಥ್ ಅವರು ಭದ್ರಾವತಿ ಸೈಬರ್ ಕ್ರೈಂ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣದ ತನಿಖೆ ನಡೆಯುತ್ತಿದೆ.

ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ | 7411700200

ಸುದ್ದಿಗಾಗಿ : 9964634494 | ಜಾಹೀರಾತಿಗಾಗಿ : 9972194422

Leave a Reply

error: Content is protected !!