BREAKING NEWS |ಸೂಕ್ತ ದಾಖಲೆಯಿಲ್ಲದೆ ಶಿವಮೊಗ್ಗಕ್ಕೆ ಸಾಗಿಸುತ್ತಿದ್ದ ಹತ್ತು ಲಕ್ಷ ರೂ. ವಶಕ್ಕೆ

ಲೈವ್ ಕರ್ನಾಟಕ.ಕಾಂ | ಶಿವಮೊಗ್ಗ

ದಾವಣಗೆರೆಯಿಂದ ಶಿವಮೊಗ್ಗಕ್ಕೆ ತೆರಳುತ್ತಿದ್ದ ಕಾರು ತಪಾಸಣೆ ನಡೆಸಿದಾಗಿ, 10 ಲಕ್ಷ ರೂ. ಹಣ ಇರುವುದು ಪತ್ತೆಯಾಗಿದೆ. ಮಡಿಕೆ ಚೀಲೂರು ಚೆಕ್ ಪೋಸ್ಟ್ ನಲ್ಲಿ ಕಾರು ತಪಾಸಣೆ ವೇಳೆ ಹಣ ಸಿಕ್ಕಿದೆ.

ಸ್ವಿಫ್ಟ್ ಕಾರಿನಲ್ಲಿ ಹಣ ಸಾಗಣೆ ಮಾಡಲಾಗುತ್ತಿತ್ತು. ಚೆಕ್ ಪೋಸ್ಟ್ ನಲ್ಲಿ ಹಣ ಪತ್ತೆಯಾಗುತ್ತಿದ್ದಂತೆ, ಸಿಬ್ಬಂದಿಗಳು ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಗಳಿಗೆ ಮಾಹಿತಿ ನೀಡಿದರು. ಕೂಡಲೇ ಸ್ಥಳಕ್ಕೆ ಬಂದ ಅಧಿಕಾರಿಗಳು, ಪರಿಶೀಲನೆ ನಡೆಸಿ, ಹಣವನ್ನು ವಶಕ್ಕೆ ಪಡೆದಿದ್ದಾರೆ.

ದಾಖಲೆಯಲ್ಲಿದ್ದಿದ್ದೇ ಬೇರೆ

ಕಾರಿನಲ್ಲಿದ್ದ 10 ಲಕ್ಷ ರೂ. ಹಣ ಶಿವಮೊಗ್ಗದ IDFC ಬ್ಯಾಂಕ್ ಗೆ ಸೇರಿದ್ದು ಎಂದು ಕಾರಿನಲ್ಲಿದ್ದವರು ತಿಳಿಸಿದ್ದಾರೆ. ಅದಕ್ಕೆ ಪೂರಕ ದಾಖಲೆಗಳನ್ನು ಒದಗಿಸಿದ್ದಾರೆ. ಆದರೆ ಹಣ ಸಾಗಣೆ ಮಾಡುತ್ತಿದ್ದ ವಾಹನದ ನಂಬರ್, ದಾಖಲೆಯಲ್ಲಿರುವ ವಾಹನ ನಂಬರ್ ಬೇರೆ ಬೇರೆಯಾಗಿದೆ. ಆದ್ದರಿಂದ ಹಣವನ್ನ ಜಫ್ತಿ ಮಾಡಲಾಗಿದೆ.

ಲೈವ್ ಕರ್ನಾಟಕ.ಕಾಂ ವಾಟ್ಸಪ್ ನಂಬರ್ | 7411700200

Leave a Reply

error: Content is protected !!