ಸರ್ಕಾರದ ಹೊಸ ಅಧಿಸೂಚನೆ ಎಫೆಕ್ಟ್, ಕುವೆಂಪು ವಿವಿಯ ಆರು ಸಿಂಡಿಕೇಟ್ ಸದಸ್ಯರು ಜವಾಬ್ದಾರಿಯಿಂದ ಮುಕ್ತ

ಶಿವಮೊಗ್ಗ ಲೈವ್.ಕಾಂ | ಶಂಕರಘಟ್ಟ

ಸರ್ಕಾರದ ಆದೇಶದ ಹಿನ್ನೆಲೆ, ಕುವೆಂಪು ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯತ್ವದಿಂದ ಆರು ಜನರನ್ನು ಮುಕ್ತಗೊಳಿಸಲಾಗಿದೆ. ಈ ಸಂಬಂಧ ಕುಲಸಚಿವ ಪ್ರೊ.ಭೋಜ್ಯಾನಾಯ್ಕ್ ಆದೇಶ ಹೊರಡಿಸಿದ್ದಾರೆ.

ಹಿಂದಿನ ಸರ್ಕಾರ ನೇಮಿಸಿದ್ದ ಸಿಂಡಿಕೇಟ್ ಸದಸ್ಯರನ್ನು ಸದಸ್ಯತ್ವದಿಂದ ಮುಕ್ತಗೊಳಿಸುವಂತೆ, ಎಲ್ಲಾ ವಿಶ್ವವಿದ್ಯಾಲಗಳಿಗೂ, ಉನ್ನತ ಶಿಕ್ಷಣ ಇಲಾಖೆ ಅಧಿಸೂಚನೆ ಹೊರಡಿಸಿತ್ತು. ಈ ಹಿನ್ನೆಲೆಯಲ್ಲಿ, ಹಿಂದಿನ ಸರ್ಕಾರ ಕುವೆಂಪು ವಿಶ್ವವಿದ್ಯಾಲಯಕ್ಕೆ ನೇಮಕ ಮಾಡಿದ್ದ ಆರು ಸದಸ್ಯರ ಸದಸ್ಯತ್ವವನ್ನು ಮುಕ್ತಗೊಳಿಸಲಾಗಿದೆ.

ಶಿವಮೊಗ್ಗದ ವಿಶ್ವನಾಥ (ಕಾಶಿ), ಸಾಗರದ ಮೊಸ್ಮದ್ ಜಕ್ರಿಯ, ತರೀಕೆರೆಯ ಅನ್ಬು, ಬೆಂಗಳೂರಿನ ಸುನಿತಾ, ಕೋಲಾರದ ಡಾ.ಟಿ.ವಿ.ನಾರಾಯಣಸ್ವಾಮಿ, ಚಳ್ಳಕೆರೆಯ ಅಶ್ವಥನಾಯಕ ಅವರನ್ನು ಹಿಂದಿನ ಸರ್ಕಾರದ ಅವಧಿಯಲ್ಲಿ ಸಿಂಡಿಕೇಟ್ ಸದಸ್ಯರಾಗಿ ನೇಮಕ ಮಾಡಲಾಗಿತ್ತು. ನೂತನ ಸರ್ಕಾರದ ಆದೇಶದ ಹಿನ್ನೆಲೆ, ಇವರನ್ನು ಸಿಂಡಿಕೇಟ್ ಸದಸ್ಯತ್ವದಿಂದ ಮುಕ್ತಗೊಳಿಸಲಾಗಿದೆ.

ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ | 7411700200

Leave a Reply

error: Content is protected !!