ಹಳ್ಳಿ ಹಳ್ಳಿಯಲ್ಲೂ ಯೋಗ, ಕುವೆಂಪು ವಿವಿಯಿಂದ ವಿನೂತನ ಶಿಬಿರ

ಶಿವಮೊಗ್ಗ ಲೈವ್.ಕಾಂ | ಶಂಕರಘಟ್ಟ

ವಿಶ್ವ ಯೋಗ ದಿನಾಚರಣೆ ಅಂಗವಾಗಿ, ಕುವೆಂಪು ವಿಶ್ವವಿದ್ಯಾಲಯ ಯೋಗ ತರಬೇತಿ ಆಯೋಜಿಸಿದೆ. 15 ದಿನ ವಿವಿಧ ಗ್ರಾಮಗಳಲ್ಲಿ ಯೋಗ ತರಬೇತಿ ನಡೆಯಲಿದೆ. ಜೂನ್ 8ರಿಂದಲೇ ತರಬೇತಿ ಆರಂಭವಾಗಿದೆ.

ಜೂನ್ 20ರವರೆಗೂ ಯೋಗ ತರಬೇತಿ ನಡೆಯಲಿದೆ. ಗ್ರಾಮಸ್ಥರಲ್ಲಿ ಯೋಗದ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ತರಬೇತಿ ನೀಡಲಾಗುತ್ತಿದೆ. ಕುವೆಂಪು ವಿವಿಯ ಸುತ್ತಮುತ್ತಲು ಇರುವ ಗ್ರಾಮಗಳಲ್ಲಿ ಯೋಗ ತರಬೇತಿ ಮತ್ತು ಜಾಗೃತಿ ಕಾರ್ಯಕ್ರಮ ನಡೆಸಲಾಗುತ್ತಿದೆ.

ಕುವೆಂಪು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಜೋಗನ್ ಶಂಕರ್ ಸೇರಿದಂತೆ ವಿವಿಯ ಅಧಿಕಾರಿಗಳು, ಉಪನ್ಯಾಸಕರು, ವಿದ್ಯಾರ್ಥಿಗಳು ಗ್ರಾಮಸ್ಥರಿಗೆ ತರಬೇತಿ ನೀಡುತ್ತಿದ್ದಾರೆ. ಈಗಾಗಲೇ ಗೋಣಿಬೀಡು, ಲಕ್ಕವಳ್ಳಿ, ಶಂಕರಘಟ್ಟ ಗ್ರಾಮದಲ್ಲಿ ಎರಡೆರಡು ದಿನ ಯೋಗ ತರಬೇತಿ ಕೊಡಲಾಗಿದೆ. ಎಲ್ಲಾ ಕಡೆಯೂ ವಿವಿಯ ಕಾರ್ಯಕ್ಕೆ ಉತ್ತಮ ಪ್ರತಿಕ್ರಿಯೆ ಲಭ್ಯವಾಗಿದೆ. ಇನ್ನು, ಶಾಂತಿನಗರ, ಮಲ್ಲಿಗೇನಹಳ್ಳಿಯಲ್ಲಿ ತರಬೇತಿ ಕಾರ್ಯ ನಡೆಯಲಿದ್ದು, ಜೂ.18 ರಿಂದ 20ರವರೆಗೆ, ವಿವಿಯ ಒಳಾಂಗಣ ಕ್ರೀಡಾಂಗಣದಲ್ಲಿ ತರಬೇತಿ ಶಿಬಿರ ನಡೆಯಲಿದೆ.

ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ | 7411700200

Leave a Reply

error: Content is protected !!