ಕುವೆಂಪು ವಿವಿಗೆ ಸ್ಯಾಂಡಲ್’ವುಡ್ ಬೆಡಗಿ ರಾಗಿಣಿ ದ್ವಿವೇದಿ, ಇನ್ನು ಮೂರು ದಿನ ಸಹ್ಯಾದ್ರಿ ಉತ್ಸವದ ರಂಗು

ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ | 27 ಸೆಪ್ಟೆಂಬರ್ 2018

ಇವತ್ತು ನಟಿ ರಾಗಿಣಿ ದ್ವಿವೇದಿ ಕುವೆಂಪು ವಿಶ್ವವಿದ್ಯಾಲಯಕ್ಕೆ ಭೇಟಿ ನೀಡುತ್ತಿದ್ದಾರೆ. ಮೂರು ದಿನದ ಸಹ್ಯಾದ್ರಿ ಉತ್ಸವಕ್ಕೆ ರಾಗಿಣಿ ಚಾಲನೆ ನೀಡಲಿದ್ದಾರೆ.

ಕುವೆಂಪು ವಿಶ್ವವಿದ್ಯಾಲಯದ ಪಠ್ಯೇತರ ಚಟುವಟಿಕೆ ವಿಭಾಗದ ವತಿಯಿಂದ ಇವತ್ತಿನಿಂದ ಮೂರು ದಿನ ಸಹ್ಯಾದ್ರಿ ಉತ್ಸವವನ್ನು ಆಯೋಜಿಸಲಾಗಿದೆ. ಮಧ್ಯಾಹ್ನ ಕುವೆಂಪು ಪ್ರತಿಮೆ ಮುಂಭಾಗದಿಂದ ಶತಮಾನೋತ್ಸವ ಭವನದವರೆಗೆ ಸಾಂಸ್ಕೃತಿಕ ಮೆರವಣಿಗೆ ನಡೆಯಲಿದೆ.

ಪಥಸಂಚಲನದ ಬಳಿಕ ಮಧ್ಯಾಹ್ನ 3 ಗಂಟೆಗೆ ಘಟಿಕೋತ್ಸವ ಸಭಾಂಗಣದಲ್ಲಿ ನಟಿ ರಾಗಿಣಿ ದ್ವಿವೇದಿ, ಸಹ್ಯಾದ್ರಿ ಉತ್ಸವಕ್ಕೆ ಚಾಲನೆ ನೀಡಲಿದ್ದಾರೆ. ವಿವಿ ಕುಲಪತಿ ಪ್ರೊ.ಜೋಗನ್ ಶಂಕರ್, ಕುಲಸಚಿವ ಪ್ರೊ.ಹೆಚ್.ಎಸ್.ಭೋಜ್ಯಾನಾಯ್ಕ ಸೇರಿದಂತೆ ಹಲವರು ಈ ಸಂದರ್ಭ ಉಪಸ್ಥಿತರಿರಲಿದ್ದಾರೆ.

ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ | 7411700200

ಸುದ್ದಿಗಾಗಿ : 9964634494 | ಜಾಹೀರಾತಿಗಾಗಿ : 9972194422

Leave a Reply

error: Content is protected !!