ಕೊಡಗು ಜಿಲ್ಲೆಗೆ ಕುವೆಂಪು ವಿವಿಯಿಂದ ಲಕ್ಷ ಲಕ್ಷ ಪರಿಹಾರ, ನಿಧಿ ಸಂಗ್ರಹಕ್ಕೆ ವಿದ್ಯಾರ್ಥಿಗಳಿಂದ ಜಾಥಾ

ಶಿವಮೊಗ್ಗ ಲೈವ್.ಕಾಂ | ಶಂಕರಘಟ್ಟ

ಪ್ರವಾಹದಿಂದ ತತ್ತರಿಸಿರುವ ಕೊಡಗು ಜಿಲ್ಲೆಯ ಜನತೆಗೆ, ಕುವೆಂಪು ವಿಶ್ವವಿದ್ಯಾಲಯ ನೆರವು ನೀಡಿದೆ. ವಿವಿಯ ಉಪನ್ಯಾಸರು ಮತ್ತು ಸಿಬ್ಬಂದಿ, ಒಂದು ದಿನದ ವೇತನ ನೀಡಿದ್ದಾರೆ. ವಿದ್ಯಾರ್ಥಿಗಳು ಕೂಡ ನೆರವಿನ ಹಸ್ತ ಚಾಚಿದ್ದಾರೆ.

ಸಂತ್ರಸ್ತರ ನೆರವಿಗಾಗಿ ಕುವೆಂಪು ವಿಶ್ವವಿದ್ಯಾಲಯದಲ್ಲಿ ಇವತ್ತು ಧನ ಸಂಗ್ರಹಕ್ಕೆ ಜಾಥಾ ನಡೆಸಲಾಯಿತು. ವಿವಿ ಅವರಣದಿಂದ ಆರಂಭವಾದ ವಿದ್ಯಾರ್ಥಿಗಳ ಜಾಥಾ, ಶಂಕರಘಟ್ಟ, ಶಾಂತಿನಗರ, ಬಿ.ಆರ್.ಪ್ರಾಜೆಕ್ಟ್, ಮಾಳೇನಹಳ್ಳಿ, ನಲ್ಲಿಸರ ಸೇರಿದಂತೆ ವಿವಿಧೆಡೆ ತೆರಳಿ, 91,404 ರೂ, ಸಂಗ್ರಹಿಸಿದೆ.

ಪರಿಹಾರ ನಿಧಿಗೆ ಒಂದು ದಿನದ ವೇತನ

ಇನ್ನು, ಕೊಡಗು ಜಿಲ್ಲೆಯಲ್ಲಿ ಪರಿಹಾರ ಕಾರ್ಯಕ್ಕೆ, ಕುವೆಂಪು ವಿಶ್ವವಿದ್ಯಾಲಯದ ಬೋಧಕ, ಬೋಧಕೇತರ ಸಿಬ್ಬಂದಿಗಳು ಒಂದು ದಿನದ ವೇತನ ನೀಡಲು ನಿರ್ಧರಿಸಿದ್ದಾರೆ. ಸುಮಾರು 12.50 ಲಕ್ಷ ರುಪಾಯಿಯನ್ನು ಮುಖ್ಯಮಂತ್ರಿ ಪರಿಹಾರ ನಿಧಿಗೆ ನೀಡಲಾಗಿದೆ.

ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ | 7411700200

ಈ ಮೇಲ್ ಐಡಿ | shivamoggalive@gmail.com

Leave a Reply

error: Content is protected !!