ಶಾಸಕರ ‘ಕೋಳಿಕೆ ರಂಗ’ ಹಾಡಿಗೆ ಸಹ್ಯಾದ್ರಿ ಕಾಲೇಜು ವಿದ್ಯಾರ್ಥಿಗಳು ಫುಲ್ ಫಿದಾ | VIDEO NEWS

ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ

ಹಾಡು ಹೇಳಿ ವಿದ್ಯಾರ್ಥಿಗಳು, ಉಪನ್ಯಾಸಕರನ್ನು ರಂಜಿಸಿದರು ಎಂಎಲ್ಎ.. ಶಾಸಕರ ಗಾಯನ ಮೆಚ್ಚಿ ಶಹಬ್ಬಾಸ್ ಅಂದರು ಸಭೀಕರು..

ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿಗೆ ಇವತ್ತು ಶಾಸಕ ಕುಮಾರ್ ಬಂಗಾರಪ್ಪ ಭೇಟಿ ನೀಡಿದ್ದರು. ರಾಜ್ಯಶಾಸ್ತ್ರ ಮತ್ತು ಸಾರ್ವಜನಿಕ ಆಡಳಿತ ವಿಭಾಗದ, ರಾಜ್ಯಶಾಸ್ತ್ರ ವೇದಿಕೆ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಅವರು, ವಿದ್ಯಾರ್ಥಿಗಳ ಒತ್ತಾಯಕ್ಕೆ ಮಣಿದು ಹಾಡಿದರು. ಶಾಸಕರ ಹಾಡು ಕೇಳಿ ವಿದ್ಯಾರ್ಥಿಗಳು ಚಪ್ಪಾಳೆ ತಟ್ಟಿದರು. ಅಷ್ಟೇ ಅಲ್ಲಾ, ಒನ್ಸ್ ಮೋರ್ ಅಂತಲೂ ಕೂಗಿದರು. 

ಡಾಕ್ಟರ್, ಎಂಜಿನಿಯರ್ ಆಗುವುದಷ್ಟೇ ಜೀವನಲ್ಲ

ಇನ್ನು, ರಾಜ್ಯಶಾಸ್ತ್ರ ವೇದಿಕೆಯನ್ನು ಉದ್ಘಾಟಿಸಿ ಮಾತನಾಡಿದ ಶಾಸಕ ಕುಮಾರ್ ಬಂಗಾರಪ್ಪ, ವಿದ್ಯಾರ್ಥಿಗಳು ಕೇವಲ ಕಲಿಕೆಯ ಕಿಡಿ ಆಗಬಾರದು. ಡಾಕ್ಟರ್, ಎಂಜಿನಿಯರ್ ಆಗುವುದಷ್ಟೇ ಶಿಕ್ಷಣವಲ್ಲ. ಶಿಕ್ಷಣವನ್ನೇ ಪಡೆಯದೆ ಸಾಧನೆ ಮಾಡಿರುವವರು ನಮ್ಮ ನಡುವಿನಲ್ಲಿದ್ದಾರೆ. ಅವರನ್ನು ಆದರ್ಶವಾಗಿಟ್ಟುಕೊಳ್ಳಬೇಕು ಎಂದು ಸಲಹೆ ನೀಡಿದರು.

ರಾಜ್ಯಶಾಸ್ತ್ರ, ಸಮಾಜದ  ಎಲ್ಲಾ ವಿಚಾರಗಳನ್ನು ಒಳಗೊಂಡಿದೆ. ಪ್ರಮುಖವಾಗಿ ಆಡಳಿತಾತ್ಮಕ ವಿಚಾರಗಳಿಗೆ ಹೆಚ್ಚಿನ ಒತ್ತು ಕೊಡುತ್ತದೆ. ಇನ್ನು, ರಾಜ್ಯಶಾಸ್ತ್ರದ ವಿದ್ಯಾರ್ಥಿಗಳೇ ಆಡಳಿತ ನಡೆಸುವುದಾದರೆ ಹೆಚ್ಚಿನ ಅನುಭವ ಲಭ್ಯವಾಗಲಿದೆ ಎಂದರು.

ಇದಕ್ಕೂ ಮೊದಲು ಶಾಸಕ ಕುಮಾರ್ ಬಂಗಾರಪ್ಪ, ಕಾಲೇಜು ಆವರಣದಲ್ಲಿ ಗಿಡ ನೆಟ್ಟು, ನೀರೆರೆದರು.

ಕಾಲೇಜಿನ ಪ್ರಾಂಶುಪಾಲ ಪ್ರೊ.ಕೆ.ಬಿ.ಧನಂಜಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಕೆ.ಪ್ರಸನ್ನಕುಮಾರ್, ರಾಜ್ಯಶಾಸ್ತ್ರ ಸ್ನಾತಕೋತ್ತರ ವಿಭಾಗದ ಮುಖ್ಯಸ್ಥ ಪ್ರೊ.ಎಂ.ಹೆಚ್.ಪ್ರಹ್ಲಾದಪ್ಪ ಸೇರಿದಂತೆ ಹಲವರು ಈ ಸಂದರ್ಭದಲ್ಲಿದ್ದರು.

Video |

ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿಗೆ ಕುಮಾರ್ ಬಂಗಾರಪ್ಪ, ಹಾಡು ಹೇಳಿ ವಿದ್ಯಾರ್ಥಿಗಳನ್ನು ರಂಜಿಸಿದರು ಎಂಎಲ್ಎ

ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿಗೆ ಕುಮಾರ್ ಬಂಗಾರಪ್ಪ, ಹಾಡು ಹೇಳಿ ವಿದ್ಯಾರ್ಥಿಗಳನ್ನು ರಂಜಿಸಿದರು ಎಂಎಲ್ಎ

Posted by Shivamogga Live on Friday, August 10, 2018

 

ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ | 7411700200

Leave a Reply

error: Content is protected !!