ATNCC, ಕುವೆಂಪು ವಿವಿಯಿಂದ ಅಥ್ಲೆಟಿಕ್ಸ್ ಕ್ರೀಡಾಕೂಟ, ಆಲ್ಕೋಳದಿಂದ ಮ್ಯಾರಥಾನ್ ಓಟ

ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ | 26 ಸೆಪ್ಟೆಂಬರ್ 2018

ಆಚಾರ್ಯ ತುಳಿಸಿ ರಾಷ್ಟ್ರೀಯ ವಾಣಿಜ್ಯ ಕಾಲೇಜು ಮತ್ತು ಕುವೆಂಪು ವಿವಿ ವತಿಯಿಂದ 32ನೇ ಅಂತರ ಕಾಲೇಜು ಅಥ್ಲೆಟಿಕ್ ಕ್ರೀಡಾಕೂಟವನ್ನು ಸೆ.27ರಿಂದ 29ರವರೆಗೆ ನೆಹರೂ ಕ್ರೀಡಾಂಗಣದಲ್ಲಿ ಏರ್ಪಡಿಸಲಾಗಿದೆ ಅಂತಾ ಕಾಲೇಜಿನ ಪ್ರಾಚಾರ್ಯ ಆರ್.ಎಲ್.ಪ್ರಕಾಶ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಜಿಲ್ಲೆಗಳ ಒಟ್ಟು 86 ಕಾಲೇಜುಗಳ 430 ವಿದ್ಯಾರ್ಥಿಗಳು, 270 ವಿದ್ಯಾರ್ಥಿನಿಯರು ಸೇರಿದಂತೆ 700 ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ. ಕ್ರೀಡಾಪಟುಗಳಿಗೆ ಊಟ ಹಾಗೂ ವಸತಿ ವ್ಯವಸ್ಥೆಯನ್ನು ಮಾಡಲಾಗುತ್ತಿದೆ. 150 ಮಂದಿ ಅಧಿಕಾರಿ ವರ್ಗ ಹಾಗೂ ಸ್ವಯಂ ಸೇವಕರು ಕ್ರೀಡಾಕೂಟದ ನಿರ್ವಹಣೆ ಮಾಡಲಿದ್ದಾರೆ ಎಂದರು.

ಆಲ್ಕೋಳದಿಂದ ಮ್ಯಾರಥಾನ್

ಕ್ರೀಡಾಕೂಟದ 3ನೇ ದಿನ ಬೆಳಗ್ಗೆ 6 ಗಂಟೆಗೆ ಪುರುಷ ಹಾಗೂ ಮಹಿಳೆಯರ ಮ್ಯಾರಾಥಾನ್ ಓಟ ಸಾಗರ ರಸ್ತೆಯ ಆಲ್ಕೋಳ ವೃತ್ತದಿಂದ ಪ್ರಾರಂಭಿಸಿ ವೀರಣ್ಣನ ಬೆನವಳ್ಳಿ ಗೇಟ್’ವರೆಗೆ ಸಾಗಿ ಮತ್ತೆ ಆಲ್ಕೋಳ ಸರ್ಕಲ್’ವರೆಗೆ ಆಗಮಿಸಲಿದೆ ಎಂದರು.

ಉದ್ಘಾಟಿಸಲಿದ್ದಾರೆ ಮಿನಿಸ್ಟರ್

ಕ್ರೀಡಾಕೂಟವನ್ನು ಸೆ.27ರ ಬೆಳಗ್ಗೆ 10 ಗಂಟೆಗೆ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸಿ.ತಮ್ಮಣ್ಣ ಉದ್ಘಾಟಿಲಿಸಿದ್ದು, ಮುಖ್ಯ ಅತಿಥಿಗಳಾಗಿ ಶಾಸಕ ಕೆ.ಎಸ್.ಈಶ್ವರಪ್ಪ, ಕುವೆಂಪು ವಿವಿ ಕುಲಪತಿ ಪ್ರೊ.ಜೋಗನ್ ಶಂಕರ್, ರಾಷ್ಟ್ರೀಯ ಶಿಕ್ಷಣ ಸಮಿತಿ ಅಧ್ಯಕ್ಷ ಎ.ಎಸ್.ವಿಶ್ವನಾಥ್, ಕಾರ್ಯದರ್ಶಿ ಎಸ್.ಎನ್.ನಾಗರಾಜ್ ಭಾಗವಹಿಸುವರು.

ಕುವೆಂಪು ವಿವಿ ದೈಹಿಕ ಶಿಕ್ಷಣ ನಿಕಾಯ ಡೀನ್ ಡಾ.ಎಸ್.ಎಂ.ಪ್ರಕಾಶ್ ಮಾತನಾಡಿ, ಈ ಕ್ರೀಡಾಕೂಟಕ್ಕೆ ವಿವಿಯಿಂದ 2 ಲಕ್ಷ ರೂ. ಅನುದಾನ ನೀಡಲಾಗಿದೆ. ಅಖಿಲ ಭಾರತ ಮಟ್ಟದ ಅಂತರ ವಿವಿ ಕ್ರೀಡಾಕೂಟದಲ್ಲಿ ವಿಜೇತರಾದ ಕುವೆಂಪು ವಿವಿ ಕ್ರೀಡಾಪುಟಗಳಿಗೆ 40 ಸಾವಿರ ರೂ. ಪ್ರೋತ್ಸಾಹ ಧನ ನೀಡಲಾಗುವುದು ಎಂದರು.

ಗೋಷ್ಠಿಯಲ್ಲಿ ಎನ್ಇಎಸ್ ಕಾರ್ಯದರ್ಶಿ ಎಸ್.ಎನ್.ನಾಗರಾಜ್, ಪ್ರೊ.ಕೆ.ಎಂ.ನಾಗರಾಜು ಇದ್ದರು.

CAR FOR SALE | ಉತ್ತಮ ಕಂಡೀಷನ್’ನಲ್ಲಿರುವ ಕಾರು ಶಿವಮೊಗ್ಗದಲ್ಲಿ ಮಾರಾಟಕ್ಕಿದೆ

ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ | 7411700200

ಸುದ್ದಿಗಾಗಿ : 9964634494 | ಜಾಹೀರಾತಿಗಾಗಿ : 9972194422

Leave a Reply

error: Content is protected !!